ಬೆಳಗಾವಿ ದಕ್ಷಿಣದಲ್ಲಿ ರಾಮನವಮಿ ವಿನೂತನ ಆಚರಣೆಗೆ ಕರೆ.
ಪ್ರತಿ ಮನೆ ಮುಂದೆ ಶ್ರೀ ರಾಮನ ರಂಗೋಲಿ ಚಿತ್ರ ಬಿಡಿಸಲು ಮನವಿ.
ರಾಮನವಮಿಯಂದೇ ಬಿಜೆಪಿ ಅಭ್ಯರ್ಥಿ ಶೆಟ್ಡರ್ ನಾಮಪತ್ರ ಸಲ್ಲಿಕೆ
ಬೆಳಗಾವಿ.ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮಮಂದಿರ ಲೋಕಾರ್ಪಣೆಗೊಂಡ ಹಿನ್ನೆಲೆಯಲ್ಲಿ ಈ ಬಾರಿ ಶ್ರೀರಾಮ ನವಮಿಯನ್ನು ವಿಶಿಷ್ಟ ಮತ್ತು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.

ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಈ ನಿಟ್ಟಿನಲ್ಲಿ ವಿನೂತನ ಯೋಜನೆಯನ್ನು ರೂಪಿಸಿದ್ದಾರೆ.

ನಾಳೆ ದಿ. 17 ರಂದು ಶ್ರೀರಾಮನವಮಿ. ಅಂದು ಪ್ರತಿಯೊಂದು ಮನೆಯ ಮುಂದೆ ಬೆಳಿಗ್ಗೆ ಶ್ರೀರಾಮನ ರಂಗೋಲಿ ಬಿಡಿಸಲು ಅಭಯ ಪಾಟೀಲರು ಮನವಿ ಮಾಡಿದ್ದಾರೆ.
ಕಾಕತಾಳೀಯ ಎನ್ನುವಂತೆ ಶ್ರೀರಾಮನವಮಿಯಂದೇ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ತಮ್ಮನಾಮಪತ್ರವನ್ನು ಸಲ್ಲಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅವರು ಕೋರಿದ್ದಾರೆ.