LOVE JIHAD..ಆರದ ಕಿಚ್ಚು.. ಬೆಳಗಾವಿಗೂ ಬಂತು

ಬೆಳಗಾವಿ.

ಕಾಲೇಜು ಯುವತಿಯರಿಗೆ ಮಾತ್ರ ಸಿಮೀತವಾಗಿದ್ದ ಲವ್ ಜಿಹಾದ್ ನ‌ ಮತ್ತೊಂದುನ ಕರಾಳ ಮುಖ ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಹುಬ್ಬಳ್ಳಿ ನೇಹಾ ಹಿರೇಮಠ ಸಾವಿನ ಕಿಚ್ಚು ಈಗ ರಾಜ್ಯವ್ಯಾಪಿ ಹಬ್ಬಿದೆ. ಈಗ ಬೆಳಗಾವಿಯಲ್ಲೂ ಕೂಡ ಲವ್ ಜಿಹಾದ ಘಟನೆ ನಡೆದ ವರದಿಯಾಗಿವೆ.

ಹುಬ್ವಳ್ಳಿ ಘಟನೆಯ ಪ್ರಮುಖ‌ ಆರೋಪಿಫಯಾಜ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ‌ಮುನವಳ್ಖಿಯವನು

ಇಲ್ಲಿ ಕೂಡ ವಿವಾಹಿತೆಗೆ ಲೈಂಗಿಕ ದೌರ್ಜನ್ಯ ಕೊಟ್ಟು ಮತಾಂತರಕ್ಕೆ ಪೀಡಿಸಿದವರೂ ಸಹ‌ ಸವದತ್ತಿ ತಾಲೂಕಿನ ಮುನವಳ್ಳಿಯವರೇ.!

ಏನಿದು ಪ್ರಕರಣ

: ಕೆಲಸ ಕೊಡಿಸುತ್ತೇನೆಂದು ವಿವಾಹಿತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.


ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ಆರೀಫ್ ಮತ್ತು ಆತನ ಪತ್ನಿ ಬಂಧಿತ ಆರೋಪಿಗಳಾಗಿದ್ದಾರೆ.
ಸಂತ್ರಸ್ತ ಮಹಿಳೆಯ ಪತಿ ಮುನವಳ್ಳಿ ಪಟ್ಟಣದಲ್ಲಿ ಕಿರಾಣಿ ಅಂಗಡಿ ಹೊಂದಿದ್ದು, ಪತಿ ಇಲ್ಲದಿದ್ದಾಗ ಸಂತ್ರಸ್ತ ಮಹಿಳೆ ಆಗಾಗ ಕಿರಾಣಿ ಅಂಗಡಿಯಲ್ಲಿ ಕೂತು, ವ್ಯಾಪಾರ ಮಾಡುತ್ತಿದ್ದರು. ಈ ವಿಚಾರ ತಿಳಿದ ಆರೋಪಿ ಆರೀಫ್ ಬೇಪಾರಿ ನೆರೆ ಮನೆಯವರೆಂದು ಪರಿಚಯ ಮಾಡಿಕೊಂಡು ಮೊಬೈಲ್ ನಂಬರ್ ಪಡೆದುಕೊಂಡಿದ್ದಾನೆ.
ಬಳಿಕ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆ ಮೇಲೆ ನಿರಂತರ ‌ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೇ ಲೈಂಗಿಕ ದೌರ್ಜನ್ಯದ ಮತ್ತು ಮಹಿಳೆಯ ಖಾಸಗಿ ಫೋಟೋಗಳನ್ನು ಸೆರೆಹಿಡಿದು, “ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಳ್ಳು” ಇಲ್ಲದಿದ್ದರೆ ಫೋಟೋ ವೈರಲ್ ಮಾಡುತ್ತೇವೆ ಎಂದು ಆರೀಫ್ ಮತ್ತು ಇತರ ಐವರು ದುಷ್ಕರ್ಮಿಗಳು ಬ್ಯ್ಲಾಕ್​ ಮೇಲೆ ಮಾಡಿದ್ದಾರೆ. ಹಿಂದೂ ಸಂಪ್ರದಾಯ ಬಿಡಬೇಕು. ನಿತ್ಯ ಬುರ್ಖಾ ಧರಿಸಿ ಐದು ಸಲ ನಮಾಜ್ ಮಾಡಬೇಕು ಎಂದು ಪೀಡಿಸಿದ್ದಾರೆ. ಅಲ್ಲದೆ ಒತ್ತಾಯ ಪೂರ್ವಕವಾಗಿ ಮಹಿಳೆಗೆ ಬುರ್ಖಾ ಧಾರಣೆ ‌ಮಾಡಿಸಿದ್ದಾರೆ.
ಈ ಕುರಿತಂತೆ ಸಂತ್ರಸ್ತ ಮಹಿಳೆ ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುನವಳ್ಳಿ ಪಟ್ಟಣದ ಆರೀಫ್ ‌ಬೇಪಾರಿ, ಆದೀಲ್, ಶೋಯಲ್, ಮುಕ್ತಮ್, ಉಮರ್, ಕರೆವ್ವ ಕಟ್ಟಿಮನಿ ಹಾಗೂ ಕೌಸರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸದ್ಯ ಪೊಲೀಸರು ಪ್ರಕರಣ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!