ಬೆಳಗಾವಿ. ಲೋಕಸಮರದ ಕಾವು ಏರುತ್ತಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ದಿ.28 ರಂದು ಬೆಳಗಾವಿಗೆ ಆಗಮಿಸಲಿದ್ದಾರೆ.

ಅಂದು ಸಂಜೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬರುವ ಯಡಿಯೂರಪ್ಪ ಮಾರ್ಗದ ಬಳಿ ಇರುವ ಮಾಲಿನಿ ಸಿಟಿಯ ಮೈದಾನದಲ್ಲಿ ಆಯೋಜಿಸಲಾದ ಪ್ರಚಾರ ಸಭೆಯಲ್ಕಿ ಅವರು ಭಾಗವಹಿಸುವರು.

ಈ ಕಾರ್ಯಕ್ರಮಕ್ಕೆ ಕನಿಷ್ಟ ಒಂದು ಲಕ್ಷ ಜನರನ್ನು ಸೇರಿಸುವ ಗುರಿಯನ್ನು ಬಿಜೆಪಿಯವರು ಹೊಂದಿದ್ದಾರೆ.