Headlines

ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶ ಸೂಪರ್ ಪಾವರ್- ಶೆಟ್ಟರ್

ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶ ಸೂಪರ್ ಪಾವರ್ ಆಗಲಿದೆ: ಜಗದೀಶ್ ಶೆಟ್ಟರ್

ಬೆಳಗಾವಿ: ಲೋಕಸಭಾ ಚುನಾವಣೆ ಎಂದರೆ ಇಡೀ ದೇಶದ ಭವಿಷ್ಯವನ್ನು ರೂಪಿಸುವ ಚುನಾವಣೆ. ಹಾಗಾಗಿ ಭಾರತ ದೇಶವನ್ನು ಸೂಪರ್ ಪಾವರ್ ದೇಶ ಮಾಡಲು ಬಿಜೆಪಿಗೆ ಮತ ನೀಡಬೇಕು ಎಂದು ಬಿಜೆಪಿ ಅಭ್ಯರ್ಥಿ ಜಗದೀಶ್ ಶೇಟ್ಟರ್ ಅವರು ಕರೆ ನೀಡಿದರು.

ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಹಾಪುರದಲ್ಲಿ ಪ್ರಚಾರ ಸಭೆ ನಡೆಸಿ, ಮತಯಾಚನೆ ಮಾಡಲಾಯಿತು. ಈ ವೇಳೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು, ನಾನು ನಾಮಪತ್ರ ಸಲ್ಲಿಕೆ ಮಾಡುವ ದಿನ ಜನ ಬಂದಿದನ್ನು ನೋಡಿದರೆ ಜನ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ತೀರ್ಮಾನ ಮಾಡಿದ್ದಾರೆ.

ದೇಶದ ಅಭಿವೃದ್ಧಿ, ದೇಶದ ಭದ್ರತೆಯನ್ನು ನೋಡಿಕೊಂಡರು ಮತ ನೀಡಬೇಕು. ಲೋಕಸಭಾ ಚುನಾವಣೆ ಎಂದರೆ ಇಡೀ ದೇಶದ ಭವಿಷ್ಯ ರೂಪಿಸುವ ಚುನಾವಣೆ ಆಗಿದೆ. ನರೇಂದ್ರ ಮೋದಿಯವರು ತಮ್ಮ ಆಡಳಿತ 10 ವರ್ಷದಲ್ಲಿ ಉತ್ತಮ ಸರ್ಕಾರ ನಡೆಸಿದ್ದಾರೆ. ಕಳೆದ 10 ವರ್ಷದಲ್ಲಿ ಅಭಿವೃದ್ಧಿಯಲ್ಲಿ 14 ನೇ ಸ್ಥಾನದಲ್ಲಿ ಇದ್ದ ಭಾರತ 5 ಸ್ಥಾನಕ್ಕೆ ಬಂದಿದೆ.‌ ಮುಂದಿನ 10-15 ವರ್ಷದಲ್ಲಿ ಇಡೀ ಜಗತ್ತಿನಲ್ಲಿ ಮೋದಿಯವರ ಆಡಳಿತದಲ್ಲಿ ಸೂಪರ್ ಪಾವರ್ ದೇಶ ಆಗಲಿದೆ ಎಂದರು.

ಶಾಸಕ ಅಭಯ ಪಾಟಿಲ್ ಅವರು ಮಾತನಾಡಿ, ಜಗದೀಶ ಶೆಟ್ಟರ್ ಅವರು ಸಿಎಂ ಆಗಿ, ಸಚಿವರಾಗಿ, ವಿಧಾನ ಸಭೆ ಅಧ್ಯಕ್ಷರಾಗಿ ಕೆಲಸ ಮಾಡಿದವರು, ಅವರು ಲೋಕಸಭೆಗೆ ಆಯ್ಕೆ ಆದರೆ ಬೆಳಗಾವಿ ಸಾಕಷ್ಟು ಅಭಿವೃದ್ಧಿ ಆಗಲಿದೆ. ಹಾಗಾಗಿ ಬಿಜೆಪಿಗೆ ಮತ ನೀಡಬೇಕು ಎಂದು ತಿಳಿಸಿದರು‌.

ಪ್ರಧಾನಿ ಮೋದಿ ಬಗ್ಗೆ ಅಜ್ಜಿ ಹಾಡು ಕೇಳಿ

ಈ ವೇಳೆ ಪಾಲಿಕೆ ಸದಸ್ಯರಾದ ಗಿರೀಶ್ ದೊಂಗಡಿ, ಪ್ರಮುಖರಾದ ಚಂದ್ರಶೇಖರ ಬೆಂಬಳಗಿ, ಬಾಬಣ್ಣ ಕಿತ್ತೂರು ಹಾಗೂ ದಾನಮ್ಮದೇವಿ ಬಳಗದ ಮಹಿಳೆಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!