ನೇಹಾ ಕುಟುಂಬಕ್ಕೆ ಸಾಂತ್ವನ ಹೇಳಿದ ಸಿಎಂ.
ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ. ಶೀಘ್ರ ಕಠಿಣ ಕ್ರಮ.
ಕುಟುಂಬ ರಕ್ಷಣೆ ಕೇಳಿದರೆ ಕೊಡಲಾಗುತ್ತದೆ.
ಹುಬ್ಬಳ್ಳಿ,
ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಸಿಓಡಿಗೆ ವಹಿಸಲಾಗಿದ್ದು, ಸಿಬಿಐಗೆ ವಹಿಸಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು,
ಹುಬ್ಬಳ್ಳಿಯ ನೇಹಾ ಕುಟುಂಬಕ್ಕೆ ಸಾಂತ್ವನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿದರು,
ಈಗಾಗಲೇ ಸಿಓಡಿಯವರು ವಿಚಾರಣೆ ನಡೆಸಿದ್ದಾರೆ, ಈ ಬಗ್ಗೆ ವಿಶೇಷ ನ್ಯಾಯಲಯಕ್ಕೆ ವರದಿ ಸಲ್ಲಿಸಿದ ನಂತರ 120 ದಿನಗಳೊಳಲಗಾಗಿ ಕಾನೂನು ಪ್ರಕಾರ ಶಿಕ್ಷೆ ಕೊಡಿಸಲಾಗುತ್ತದೆ ಎಂದು ಅವರು ಹೇಳಿದರು,

ಈ ವಿಷಯದಲ್ಲಿ ನಾನು ಬಿಜೆಪಿಯವರಂತೆ ರಾಜಕೀಯ ಮಾಡಲ್ಲ. ಈ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇನೆ, ಯಾವಾಗಲೂ ಅವರ ಕುಟುಂಬದ ಪರವಾಗಿ ನಿಲ್ಲುತ್ತೇವೆ ಎಂದು ಅವರು ತಿಳಿಸಿದರು,
ನೇಹಾ ತಂದೆ ನಿರಂಜನ ಹಿರೇಮಠರು ರಕ್ಷಣೆ ಕೇಳಿದರೆ ಕೊಡುತ್ತೇವೆ, ಅಷ್ಟೇ ಅಲ್ಲ ಕುಟುಂಬದವರು ಹೇಳುವ ಎಲ್ಲ ವಿಷಯಗಳ ಮೇಲೂ ತನಿಖೆ ನಡೆಯುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು,