ವಾರ್ಡ ನಂಬರ 43 ರಲ್ಲಿ ಮಹಿಳೆಯರಿಂದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಪರ ಅಬ್ಬರದ ಪ್ರಚಾರ.
ಶಾಸಕ ಅಭಯ ಪಾಟೀಲರ ಮಾರ್ಗದರ್ಶನ ಮತ್ತು ನಗರಸೇವಕಿ ವಾಣಿ ವಿಲಾಸ ಜೋಶಿ ನೇತೃತ್ವದಲ್ಲಿ ಪ್ರಚಾರ.
ಎರಡನೆ ಹಂತದ ಪ್ರಚಾರದಲ್ಲಿ ತೊಡಗಿದ ಮಹಿಳೆಯರು.
Boot ನಂಬರ 40,41 ರಲ್ಲಿ ಪ್ರಚಾರ
ಬಿಜೆಪಿ ಪರ ಹೆಚ್ಚಿನ ಒಲವು.
ಬೆಳಗಾವಿ.
ಲೋಕಸಮರದಲ್ಲಿ ಪ್ರಚಾರದ ಕಾವು ಏರುತ್ತಿರುವಾಗಲೇ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರಷ ಅಬ್ಬರ ಹೆಚ್ಚಾಗುತ್ತಿದೆ.
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ಬಿಜೆಪಿ ಪ್ರಚಾರದ ಅಬ್ಬರಮುಗಿಲು ಮುಟ್ಟಿದೆ.

ರಾಜ್ಯದಲ್ಲಿಯೇ ಪ್ರಥಮಬಾರಿ ಮಹಿಳಾ ಶಕ್ತಿಕೇಂದ್ರದ ಜೊತೆಗೆ ಬೂತ್ ಮಟ್ಟದ ಅಧ್ಯಕ್ಷರನ್ನು ನೇಮಿಸಿದ ಕೀರ್ತಿ ಅಭಯ ಪಾಟೀಲರಿಗೆ ಸಲ್ಲುತ್ತದೆ.

ಈ ಹಿನ್ನೆಲೆಯಲ್ಲಿ ಬೆಳಗಾವಿ ಪಾಲಿಕೆಯ ವಾರ್ಡ ನಂಬರ 43 ರಲ್ಲಿಬರುವ ಬೂತ್ ನಲ್ಲಿ ಮಹಿಳೆಯರೇ ಎರಡನೇ ಹಂತದ ಮನೆ ಮನೆ ಪ್ರಚಾರದ ಅಖಾಡಾಕ್ಕೆ ಧುಮುಕಿದ್ದಾರೆ.
ಬೆಳಗಾವಿ ಪಾಲಿಕೆಯ ಬಿಜೆಪಿ ಸದಸ್ಯೆ ಹಾಗೂ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ಜೋಶಿ ನೇತೃತ್ವದಲ್ಲಿ ಈ ಪ್ರಚಾರ ನಡೆಯಿತು.