ಸಿಬಿಐಗೆ ಒಪ್ಪಿಸಿ ಎಂದ ನಿರಂಜನ ಮಧ್ಯಾಹ್ನದ ಹೊತ್ತಿಗೆ ಕಾಂಗ್ರೆಸ್ ಗೆ ಶಹಬ್ಬಾಶಗಿರಿ ಕೊಟ್ಟರು
ಮಗಳನ್ನು ಕಳೆಎದುಕೊಂಡ ದುಖದಲ್ಲೂ ಕಾಂಗ್ರೆಸ್ ಗೆ ಜೈ ಎಂದ ನೇಹಾ ತಂದೆ.
ಮಗಳದ್ದು ಲವ್ ಜಿಹಾದ್ ಎನ್ನುತ್ತಲೇ ಕಾಂಗ್ರೆಸ್ ವಿರುದ್ಣ ಆಕ್ರೋಶ ವ್ಯಕ್ತಪಡಿಸಿದ್ದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮುಂದೆ ನಿಮ್ಮಿಂದ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದಿದ್ದ ನಿರಂಜನ.
ಅಮಿತ್ ಶಾ ಮುಂದೆ ಸಿಬಿಐಗೆ ಒತ್ತಾಯ ಮಾಡಿದ್ದ ನಿರಂಜನ ಹಿರೇಮಠ.
ಮಗಳ ಸಾವಿನ ದುಃಖ ಮರೆದು ಹೆಬ್ಬಾಳಕರ ನಮ್ಮ ಸಮಾಜದವರು ಬೆಂಬಲಿಸಿ ಎಂದು ಕೈ ಮುಗಿದ್ರು.
ಬೆಳಗಾವಿ:
ಇಡೀ ರಾಷ್ಟ್ರವೇ ತಿರುಗಿ ನೋಡಿದ ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣ ನಡೆದು ಇನ್ನೂ ಹದಿನೈದು ದಿನ ಕಳೆದಿಲ್ಲ. ಅಷ್ಟರಲ್ಲೇ ನೇಹಾ ತಂದೆ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ತೊಡಗಿರುವುದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಏ. 18ರಂದು ಸಂಜೆ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಪರೀಕ್ಷೆ ಮುಗಿಸಿ ಮನೆಗೆ ಹೊರಟಿದ್ದ ನೇಹಾ ಹಿರೇಮಠಳನ್ನು ಫಯಾಜ್ ಕ್ರೂರವಾಗಿ ಕೊಲೆ ನಡೆಸಿದ್ದನು.

ಮೊದಲಿಗೆ ಇದೊಂದು ಲವ್ ಜಿಹಾದ್ ಪ್ರಕರಣವೆಂದು ಬಿಂಬಿಸಿ ಮೃತ ನೇಹಾಳ ತಂದೆ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ ಹಿರೇಮಠ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.
, ಆದರೆ ಸಾಮಾಜಿಕ ಜಾಲತಾಣದಲ್ಲಿ ನೇಹಾ ಮತ್ತು ಫಯಾಜ್ ನಡುವೆ ಪ್ರೇಮ ಇದ್ದುದರ ಸಾಕ್ಷಿ ಎಂಬಂತೆ ಇಬ್ಬರ ಫೋಟೊ ಗಳು ವೈರಲ್ ಆಗಿದ್ದವು. ಇದು ಸಹಜವಾಗಿ ಆ ಕುಟುಂಬ ಅಷ್ಟೇ ಅಲ್ಲ ಎಲ್ಲರೂ ಇದರ ಬಗ್ಗೆ ಸಿಡಿದೆದ್ದರು..
ನಂತರ ಫಯಾಜ್ ತನ್ನ ಮಗಳನ್ನು ಮದುವೆ ಮಾಡಿ ಕೊಡುವಂತೆ ಪೀಡಿಸುತ್ತಿದ್ದ. ಅವಳಿಗಾಗಿ ತಾನೇ ಧರ್ಮ ಬದಲಾಯಿಸುವುದಾಗಿ ಹೇಳಿಕೊಂಡಿದ್ದನೆಂದೂ ನಿರಂಜನ ಅವರೆ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.
ಕೊಲೆ ನಡೆದ ನಂತರ ರಾಜ್ಯ ಸರ್ಕಾರದಿಂದ ತನಗೆ ನ್ಯಾಯ ಸಿಗುವ ಭರವಸೆ ಇಲ್ಲವೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಮುಂದೆ ಹೇಳಿ ನ್ಯಾಯ ಕೊಡಿಸುವಂತೆ ಅಂಗಾಲಾಚಿದ್ದರು
ಇಇದೆಲ್ಲದರೆ ಮಧ್ಯೆ ಘಟನೆ ನಡೆದ ತಕ್ಷಣವೇ ಮುಖ್ಯಮಂತ್ರಿ ಸಿದ್ಧರಾಮಯ್ಯ, ಗೃಹ ಸಚಿವ ಪರಮೇಶ್ವರ ಅವರು ಇದೊಂದು ವೈಯಕ್ತಿಕ ಎಂದು ಹೇಳಿದಾಗ ಸಹಜಚಾಗಿ ನಿರಂಜನ ಹಿರೇಮಠ ಆಕ್ರೋಶ ಭರಿತವಾಗಿದ್ದರು.
ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನೆಗೆ ಬರುತ್ತಿದ್ದಂತೆಯೇ ರಾಜ್ಯ ಸರ್ಕಾರವನ್ನು ಹೊಗಳಿ ತನಿಖೆ ಬಗ್ಗೆ ಸಮಾಧಾನವಿದೆ ಎಂದಿದ್ದರು.
ನೇಹಾ ಹತ್ಯೆ ನಡೆದ ಮೂರನೆ ದಿನಕ್ಕೆ ಪ್ರಚಾರದ ಭರಾಟೆಯ ನಡುವೆಯೂ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಹುಬ್ಬಳ್ಳಿಯ ನೇಹಾ ಮನೆಗೆ ತೆರಳಿ ಪೋಷಕರಿಗೆ ಸಾಂತ್ವನ ಹೇಳಿ ಸಿಐಡಿ ತನಿಖೆಯ ಭರವಸೆ ನೀಡಿದ್ದರು. ಸರ್ಕಾರವು ನಂತರ ತನಿಖೆ ಸಿಐಡಿಗೆ ವಹಿಸಿದೆ.

ಏತನ್ಮಧ್ಯೆ ಗುರುವಾರ ಬೆಳಗಾವಿಯ ಕುವೆಂಪು ನಗರದಲ್ಲಿರುವ ಸಚಿವೆ ಹೆಬ್ಬಾಳಕರ ಮನೆಗೆ ಬಂದು ಕೃತಜ್ಣತೆ ಸಲ್ಲಿಸಿದ ನಿರಂಜನ ಹಿರೇಮಠ ದಂಪತಿಗಳು ಇದೇ ವೇಳೆ ಲಕ್ಷ್ಮೀ ಪುತ್ರ ಮೃಣಾಲ ಹೆಬ್ಬಾಳಕರ ಅವರನ್ನು ಸಂಸದರನ್ನಾಗಿ ಆರಿಸಿ ಕಳುಹಿಸುವಂತೆ ಮತದಾರರನ್ನು ಕೇಳಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಿರಂಜನ ಅವರು ರಾಜಕೀಯದ ಮಾತನಾಡುತ್ತಿದ್ದರೆ, ಅವರ ಪತ್ನಿ ನೇಹಾ ತಾಯಿ ಕಣ್ಣೀರು ಒರೆಸುತ್ತ ಕುಳಿತದ್ದು ನೋಡುಗರನ್ನು ನೋವಿಗೆ ತಳ್ಳಿತು.