Headlines

ಗ್ರಾಮೀಣದಲ್ಲಿ ಬಿಜೆಪಿಗೆ ಭಾರೀ ಬೆಂಬಲ.

ಸಚಿವೆ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಭಾರೀ ಬೆಂಬಲ‘.

ಹಿರೇಬಾಗೇವಾಡಿಯಲ್ಲಿ ಭರ್ಜರಿ ರೋಡ್ ಶೋ.

ಜೈ ಶ್ರೀರಾಮ, ಹರ್ ಹರ್ ಮೋದಿ ಘೋಷಣೆ


ಬೆಳಗಾವಿ:
ಕಾಂಗ್ರೆಸ್ನ ಭದ್ರಕೋಟೆ ಎನಿಸಿದ್ದ ಸಚಿವೆ ಲಕ್ಷ್ಮೀ ಹಬ್ಬಾಳಕರ ಅವರ ತವರು ಕ್ಷೇತ್ರ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಗೆ ಭಾರೀ ಬೆಂಬಲ ವ್ತಕ್ತವಾಗುತ್ತಿದೆ.
ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯಥರ್ಿ ಜಗದೀಶ ಶೆಟ್ಟರ್ ಪ್ರಚಾರಕ್ಕೆ ಹೋದ ಕಡೆಗೆಲ್ಲ ಮತದಾರರು ಜೈ ಶ್ರೀರಾಮ ಎನ್ನುತ್ತಲೇ ಮತದ ಭರವಸೆಯನ್ನೂ ನೀಡುತ್ತಿದ್ದಾರೆ,.


ಗ್ರಾಮೀಣ ಕ್ಷೇತ್ರದಲ್ಲಿ ಹಿರೇಬಾಗೇವಾಡಿಯಲ್ಲಿ ಕಳೆದ ದಿನ ಶೆಟ್ಟರ್ ಅವರು ನಡೆಸಿದ ರೋಡ್ ಶೋವನ್ನು ಗಮನಿಸಿದರೆ ಕಾಂಗ್ರೆಸ್ನ ಭದ್ರಕೋಟೆಯಲ್ಲಿ ಬಿರುಕು ಬಿಟ್ಟಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹಿರೇಬಾಗೇವಾಡಿಯಲ್ಲಿ ನಡೆದ ಈ ರೋಡ್ ಶೋ ನಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು, ಜೈ ಶ್ರೀರಾಮ, ಮೋದಿ ಮೋದಿ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದ್ದವು,


ಗ್ರಾಮಸ್ಥರ ಬೆಂಬಲ ಕಂಡ ಶೆಟ್ಟರ್ ಅವರು ಮತ್ತೊಮ್ಮೆ ಕಮಲ ಅರಳುವುದು ಶತಸಿದ್ಧ ಎಂದು \ವಿಶ್ವಾಸ ವ್ಯಕ್ತಪಡಿಸಿದರು.


ಮಾಜಿ ಶಾಸಕ ಸಂಜಯ ಪಾಟೀಲ, ಯಲ್ಲಪ್ಪ ಧರೆಣ್ಣವರ, ಶಂಕರಗೌಡ ಪಾಟೀಲ, ಬಸಲಿಂಗ ಮಠಪತಿ, ಸಿದ್ದಪ್ಪ ಹುಕ್ಕೇರಿ, ಚೇತನ ಅಗಡಿ, ಜೆಡಿಎಸ್ ಮುಖಂಡರಾದ ರಮೇಶಗೌಡ ಪಾಟೀಲ್, ಕಲಾವತಿ ಧರೆಣ್ಣವರ ಮುಂತಾದವರು ಉಪಸ್ಥಿತರಿದ್ದರು,

Leave a Reply

Your email address will not be published. Required fields are marked *

error: Content is protected !!