ಚಿಕ್ಕೋಡಿ ಕತೀ ಬ್ಯಾರೆನೇ ಐತಿ. ಹಿಂದೆ ವಿರೋಧಿಸಿದ್ದವರು ಈಗ ಸಾಥ್ ಕೊಟ್ಟರು. ಹಿಂದೆ ಸಾಥ್ ಕೊಟ್ಟವರು ಈ ಬಾರಿ ಪೂರ್ಣ ಕೈಕೊಟ್ಟರು.
ಬೆಳಗಾವಿಯಲ್ಲಿ ನಡೆದಿಲ್ಲ ಜಾತಿ ಲೆಕ್ಕ. ರಾಮದುರ್ಗದಲ್ಲಿ ಅವರದ್ದು ಮಟನ್, ಇವರಿಗೆ ಬಟನ್ ಅಂತೆ, ಬೆಳಗಾವಿಯಲ್ಲಿ ಇವರದ್ದು ನೋಟ, ಅವರಿಗೆ VOTE, ಜಾಣತನ ಮೆರೆದ ಮತದಾರ
ವಿಶೇಷ ವರದಿ
ಬೆೆಳಗಾವಿ.
ಬೆಳಗಾವಿ ಜಿಲ್ಲೆಯ ಎರಡೂ ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಬೆಳಗಾವಿ, ಚಿಕ್ಕೋಡಿಯಲ್ಲಿ ಕತೀ ಬ್ಯಾರೇನೆ ಐತಿ'
ಎನ್ನುವ ಮಾತುಗಳು ಸರ್ವೇ ಸಾಮಾನ್ಯವಾಗಿ ಕೇಳಿ ಬರುತ್ತಿವೆ,
ಜಿಲ್ಲೆಗೆ ಸಂಬಂಧಿಸಿದಂತೆ ಕೆಲವರು ಜಾತಿ ಮತ್ತು ದುಡ್ಡಿನ ಮೇಲೆಯೇ ಗೆಲುವಿನ ಲೆಕ್ಕಾಚಾರ ಹಾಕತೊಡಗಿದ್ದಾರೆ. ಆದರೆ ಬೆಳಗಾವಿ ಲೋಕಸಭೆ ಕ್ಷೇತ್ರದ ಮತದಾರ ಎರಡನ್ನೂ ಮೀರಿ ಮತದಾನ’ ಮಾಡಿದ್ದಾನೆ ಎನ್ನುವ ಮಾತು ಕೇಳಿ ಬರುತ್ತಿದೆ.

ಬೆಳಗಾವಿ ಕ್ಷೇತ್ರದಲ್ಲಿ ಜಾತಿ ಮತ್ತು ದುಡ್ಡು ಎರಡೂ ಯಾವ ರೀತಿ ಆಟ ಆಡಿವೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಅವುಗಳ ಮೇಲೆ ಹಿಡಿತ ಸಾಧಿಸಲು ಚುನಾವಣೆ ಅಧಿಕಾರಿಗಳು ಪಟ್ಟ ಶ್ರಮ ಅಷ್ಟಿಷ್ಟಲ್ಲ.
ಇದೆಲ್ಲದರ ಜೊತೆಗೆ ಅಧಿಕಾರಿಗಳನ್ನೇ ಕೆಲವೊಂದು ಸಂದರ್ಭದಲ್ಲಿ ಬೆದರಿಸುವ ಕೆಲಸವೂ ತೆರೆಮರೆಯಲ್ಲಿ ನಡೆದಿದೆ ಎನ್ನುವ ಮಾತುಗಳಿವೆ.
41 ದಿನಕ್ಕೆ ಮಾತ್ರ ನಿಮ್ಮ ಅಧಿಕಾರ. ಆದರೆ 42 ನೇ ದಿನದಿಂದ ನಮ್ಮದೇ ಅಧಿಕಾರ ಎನ್ನುವಷ್ಟರ ಮಟ್ಟಿಗೆ ಮಾತುಗಳನ್ನು ಬೆಳಗಾವಿಯ ಖಡಕ್ ಅಧಿಕಾರಿಗಳು ಕೇಳಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿತ್ತು ಎನ್ನಲಾಗಿದೆ,
ಅದನ್ನೆಲ್ಲ ಬಿಡಿ, ಅಂತಹ ಮಾತುಗಳಿಗೆ ಖಡಕ್ ಅಧಿಕಾರಿಗಳು ಕಿಂಚಿತ್ತು ಗಮನಹರಿಸಿಲ್ಲ ಎಂದು ಹೇಳಲಾಗುತ್ತಿದೆ, ಹೀಗಾಗಿ ಚುನಾವಣೆ ಎಲ್ಲವೂ ಸುಸೂತ್ರವಾಗಿ ಮುಗಿಯಿತು.
ಕೆಲವರು ಹೇಳುವ ಪ್ರಕಾರ ಜಿಲ್ಲೆಯ ಮತದಾರ ಎರಡು ಕ್ಬೇತ್ರದಲ್ಲಿ Bjp ಮತ್ತು congress ಗೆ ಅಧಿಕಾರ ಹಂಚಿಕೆ ಮಾಡಿದ ಹಾಗೆ ಅನಿಸುತ್ತದೆ. ಚಿಕ್ಕೊಡಿ ಕ್ಷೇತ್ರದಲ್ಲಿ ಒನ್ಸೈಡ್ ಬ್ಯಾಟಿಂಗ್ ಆಗಿದೆ ಎನ್ನುವ ಮಾತುಗಳಿವೆ, ಅದರ ಅರ್ಥವನ್ನು ಇಲ್ಲಿ ಬಿಡಿಸಿ ಹೇಳಬೇಕಾದ ಅಗತ್ಯತೆ ಇಲ್ಲ. ಹಿಂದೆ ಮುನಿಸಿಕೊಂಡವರು ಈ ಬಾರಿ ಮನಸ್ಸು ಬಿಚ್ಚಿ ‘ಕೈ ಹಿಡಿದಿದ್ದಾರೆ. ಹೀಗಾಗಿ ಫಲಿತಾಂಶ ಪಕ್ಕಾ .ಅಂತೆ
ಬೆಳಗಾವಿ ಕ್ಷೇತ್ರದ ಮತದಾರ ಪ್ರಭು ಮಾತ್ರ ಜಾತಿ , ದುಡ್ಡಿನ ಮುಖ ನೋಡಿಲ್ಲ. ಆದರೆ. ಮತವನ್ನು ಯಾರಿಗೆ ‘ದಾನ’ ಮಾಡಬೇಕೋ ಅವರಿಗೆ ಮಾಡಿದ್ದಾರೆ ಎನ್ನುವುದು ಸ್ಪಷ್ಟ.
ಇವರು ಜಾತಿ ಹೆಸರೇಳಿ ಗೆದ್ದಿಲ್ಲ..

ಚುನಾವಣೆ ಸಂದರ್ಭದಲ್ಲಿ ಜಾತಿ ಲೆಕ್ಕಾಚಾರ ಹೆಚ್ಚಿಗೆ ಕೆಲಸ ಮಾಡುತ್ತದೆಯೇ? ಮತದಾರರು ಎಲ್ಲವನ್ನೂ ಬದಿಗೊತ್ತಿ ಇವರು ನಮ್ಮ ಜಾತಿಯವರು ಅಂದುಕೊಂಡು ಕಣ್ಣುಮುಚ್ಚಿ ಮತ ಚಲಾವಣೆ ಮಾಡುತ್ತಾರೆಯೇ? ಎನ್ನುವ ಪ್ರಶ್ನೆಗಳು ಸಹಜವಾಗಿ ಕೇಳಿ ಬರುತ್ತವೆ.
ವಿಧಾನಸಭೆ ಅಷ್ಟೇ ಏಕೆ ಲೋಕಸಭೆ ಚುನಾವಣೆಯಲ್ಲಿ ಈ ಜಾತಿ ಲೆಕ್ಕಾಚಾರವು ಹೆಚ್ಚಿಗೆ ವರ್ಕೌಟ ಆಗಲ್ಲ ಎನ್ನುವುದು ಸ್ಪಷ್ಟ.
ಉದಾಹರಣೆ ಸಮೇತ ಹೇಳಬೇಕೆಂದರೆ, ಅಭಿವೃದ್ಧಿ ಬಿಟ್ಟು ಜಾತಿ ಆಧಾರಿತವಾಗಿಯೇ ಎಲ್ಲವೂ ಆಗುವುದಿದ್ದರೆ, ಬೆಳಗಾವಿ ದಕ್ಷಿಣದಲ್ಲಿ ಅಭಯ ಪಾಟೀಲ, ಅರಭಾವಿಯಲ್ಲಿ ಬಾಲಚಂದ್ರ ಜಾರಕಿಹೊಳಿ, ಗೋಕಾಕದಲ್ಲಿ ರಮೇಶ ಜಾರಕಿಹೊಳಿ, ಸವದತ್ತಿಯಲ್ಲಿ ವಿಶ್ವಾಸ ವೈದ್ಯ ಗೆಲ್ಲಲೇಬಾರದಿತ್ತು.
ಆದರೆ ಅಲ್ಲಿ ಅವರು ಗೆದ್ದಿದ್ದಾರೆಂದರೆ, ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ ಎಲ್ಲವೂ ಬರೀ ಮಾತಿಗೆ ಮತ್ತು ಮತದಾರರನ್ನು ಸೆಳೆದುಕೊಳ್ಳಲುವುದಕ್ಕೆ ಮಾತ್ರ ಸಿಮೀತ ಎನ್ನುವುದು ಗೊತ್ತಾಗುತ್ತದೆ.ಆದರೆ ಬೆಳಗಾವಿ , ಚಿಕ್ಕೋಡಿಮತಸಾರ ಯಾರಿಗೆ ಒಲಿದಿದ್ದಾನೆ ಎನ್ನುವುದಕ್ಕೆ ಜೂನ್ 4 ರವರೆಗೆ ಕಾಯಬೇಕು.