ಬೆಂಗಳೂರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರು, ಮತ್ತು ದೇವಗಿರಿ ವೆಂಕಟೇಶ್ವರ ದೇವಾಲಯ ಟ್ರಸ್ಟ್ ನ ಅಧ್ಯಕ್ಷ ಹೂ. ನಾ. ಹಿರಿಯಣ್ಣ ಸ್ವಾಮಿಕಳೆದ ದಿನ ರಾತ್ರಿ ನಿಧನರಾದರು.
ಹೂ. ನಾ. ಹಿರಿಯಣ್ಣ ಸ್ವಾಮಿ ಅವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನೆಗೆ 50 ವರ್ಷದಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಸಂಘಟನೆಗೆ ಮಹತ್ತರವಾದ ಕೊಡುಗೆ ನೀಡಿದ್ದಾರೆ,

ಎಲ್ಲಾ ಸಮ್ಮೇಳನಗಳನ್ನು ಯಶಸ್ವಿಯಾಗಿ ಅಯೋಜಿಸಲು ಪ್ರಮುಖ ಕಾರಣಕರ್ತರು, ಗಾಯಿತ್ರಿ ರಥಯಾತ್ರೆಯನ್ನು ರಾಜ್ಯಾದ್ಯಂತ ತೆಗೆದುಕೊಂಡು ಹೋಗಲು ಪ್ರವಾಸ ನಿಗದಿ ಮಾಡಿ ಯಶಸ್ವಿಯಾಗಿ ನಡೆಯಲು ಅವರ ಶ್ರಮ ಸಾಕಷ್ಟು ಇದೆ, ಮಹಿಳಾ ವಸತಿ ನಿಲಯದ ನಿವೇಶನ ಬಿ.ಡಿ.ಎ. ಇಂದ ಪಡೆಯಲು ಹಿರಿಯಣ್ಣ ಸ್ವಾಮಿಯವರು ಹೆಚ್ಚಿನ ಪ್ರಯತ್ನವನ್ನು ಮಾಡಿದ್ದಾರೆ, ಬಿ.ಎನ್. ವಿ. ಸುಬ್ರಹ್ಮಣ್ಯ ಡಿ.ಎಸ್. ಹೊನ್ನಪ್ಪ ಅವರ ಜೊತೆಯಲ್ಲಿ ಮೂರು ನಾಲ್ಕು ಬಾರಿ ರಾಜ್ಯಾದ್ಯಂತ ಪ್ರವಾಸ ಮಾಡಿ ಬ್ರಾಹ್ಮಣ ಸಂಘಟನೆಗೆ ಹೆಚ್ಚಿನ ಸೇವೆ ಸಲ್ಲಿಸಿದ್ದಾರೆ, ನಮ್ಮಂತಹ ನೂರಾರು ಕಾರ್ಯಕರ್ತರು ಬ್ರಾಹ್ಮಣ ಸಂಘಟನೆಯಲ್ಲಿ ಗುರುತಿಸಿಕೂಳ್ಳಲು ಪ್ರೋತ್ಸಾಹ ನೀಡಿದ್ದಾರೆ,
ಮೃತರ ಆತ್ಮಕ್ಕೆ ಶಾಂತಿ ,AKBMS ಅಧ್ಯಕ್ಷ ಅಶೋಕ ಹಾರನಹಳ್ಳಿ, ಅವರು ಸಂತಾಪ ವ್ಯಕ್ತಪಡಿಸಿ ಅವರ ಶ್ರಮವನ್ನು ಸ್ಮರಿಸಿದ್ದಾರೆ. ಬಸವನಗುಡಿ ಬ್ರಾಹ್ಮಣ ಮಹಾಸಭಾ ಸಹ ಶ್ರದ್ಧಾಂಜಲಿ ಸಲ್ಲಿಸುತ್ತದೆ,
ಮೃತರ ಅಂತಿಮ ದರ್ಶನದ. ವ್ಯವಸ್ಥೆ ಯನ್ನು ಮಂಗಳವಾರ ಬೆಳಿಗ್ಗೆ 11-30 ರ ವರೆಗೂ ಸ್ವ ಗೃಹದಲ್ಲಿ ವ್ಯವಸ್ಥೆ ಮಾಡಲಾಗಿದೆ, No 197, 44 ನೇ ಕ್ರಾಸ್ , ಜಯನಗರ 8 ನೇ ಬ್ಲಾಕ್, ಸಂಗಂ ಸರ್ಕಲ್ ಹತ್ತಿರ, ಬೆಂಗಳೂರು,