Headlines

ಬೆಳಗಾವಿ ಬೂದಿ‌ ಮುಚ್ವಿದ ಕೆಂಡ…!

ಬೆಳಗಾವಿ ಅಳವಣ ಗಲ್ಲಿಯಲ್ಲಿ ನಡೆದ ಮಕ್ಕಳ ಕ್ರಿಕೆಟ್ ಗಲಾಟೆ.

ಮನೆ ಮುಂದೆ ಬಿದ್ದ ಚೆಂಡು ತೆಗೆದುಕೊಳ್ಳಲು ಹೋದಾಗ ಮಕ್ಕಳಿಗೆ ಥಳಿತ, ಶರುವಾಗಿದ್ದು ಎಲ್ಲಿಂದ?

ಕೋಮು ಬಣ್ಣ ತಿರುಗಿದ್ದು ಯಾಕೆ? FIR ನಲ್ಲಿದೆ ಅದಕ್ಕೆ ಉತ್ತರ.

ಪೊಲೀಸ್ ಮುಂದೆಯೇ ತಲವಾರ ಎಸೆದಿದ್ದು ಯಾರು? ಅವರನ್ನು ತಕ್ಷಣಕ್ಕೆ ಹಿಡಿಯಲಿಲ್ಲ ಏಕೆ?

ಪೊಲೀಸರು ಹಿಂದೇಟು ಹಾಕಿದ್ದು ಏತಕ್ಕೆ? ಇದೊಂದು ಸಣ್ಣ ಘಟನೆ ಅಂತ ಒಟ್ಟಾರೆ ಪ್ರಕರಣ ಮುಚ್ಚಿಹಾಕುವ ಕೆಲಸ ನಡೆಯುತಾ?

ಕೇಸ್ ಗೆ ಕೌಂಟರ್ ಕೇಸ್ ಪರಿಹಾರನಾ?

ಬೆಳಗಾವಿ.
ಮಕ್ಕಳ ಕ್ರಿಕೆಟ್ ಆಟದ ಹಿನ್ನೆಲೆಯಲ್ಲಿ ನಡೆದ ಅಹಿತಕರ ಘಟನೆ ಆಳ ಕೆದಕುತ್ತ ಹೋದರೆ ಬೆಳಗಾವಿ ವಾತಾವರಣ ಅಷ್ಟು ಸರಿಯಿಲ್ಲ ಎನ್ನುವುದು ಸ್ಪಷ್ಟ.!
ಆದರೆ ಬೆಳಗಾವಿ ಪೊಲೀಸರು ಪ್ರಕರಣದ ಗಂಭೀರತೆ ಅರಿಯುವ ಬದಲು ಹಗುರವಾಗಿ ಪರಿಗಣಿಸಿದರು ಎನ್ನುವ ಮಾತು ಕೇಳಿ ಬಂದಿದೆ.


ಇದು ಮಕ್ಕಳಾಟ, ಚೆಂಡು ಬಡಿದಿದೆ ಅಷ್ಟೇ ಎನ್ನುವ ಮಾತುಗಳ ಮೂಲಕ ಅದರ ನಂತರ ನಡೆದ ಬೆಳವಣಿಗೆಯನ್ನು ಪೊಲೀಸರು ಮುಚ್ವಿಹಾಕುವ ಕೆಲಸ ನಡೆಸಿದರೇ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಬೆಳಗಾವಿಯ ಅಳವಣ ಗಲ್ಲಿಯಲ್ಲಿ ನಡೆದ ಎರಡು ಗುಂಪುಗಳ ಮಧ್ಯೆ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇಸ್ ಗೆ ಕೌಂಟರ್ ಕೇಸ್ ಮಾಡಿಕೊಂಡಿದ್ದಾರೆ.

ಬಿಜೆಪಿ ನಗರಸೇವಕರೊಂದಿಗೆ ಪೊಲೀಸ್ ಅಧಿಕಾರಿಗಳ ವಾದ

ಇಲ್ಲಿ ನ್ಯಾಯ, ಅನ್ಯಾಯ ದ ಬದಲು ಎರಡೂ ಕಡೆಗೆ ಸಮಾನಾಂತರ ಅರೆಸ್ಟ ತೋರಿಸುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಹಪುರ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.

ಸಿಸಿಟಿವಿಯಲ್ಲಿ ದಾಖಲಾದ ಬೆಳಗಾವಿ ಕ್ರಿಕೆಟ್ ಗಲಾಟೆ

————
FIR ದಲ್ಲಿ ದಾಖಲಾದ ಅಂಶವನ್ನು ಗಮನಿಸಿದರೆ ಬೆಳಗಾವಿ ಬೂದಿ ಮುಚ್ಚಿದ ಕೆಂಡ ಎನ್ನುವುದರಲ್ಲಿ ಎರಡು ಮಾತಿಲ್ಲ.

ಈ ಪ್ರಕರಣದಲ್ಲಿ ತಲ್ವಾರ್ ಪ್ರದರ್ಶನ ಹಾಗೂ ಕಲ್ಲು ತೂರಾಟ ಸಂಬಂಧ ಅನ್ಯಕೋಮಿನ 14 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ
ಐಪಿಸಿ ಸೆಕ್ಷನ್ 143, 147, 148, 323, 324, 307, 354, 504, 506, 153A ಹಾಗೂ 149 ಅಡಿ ಪ್ರಕರಣ ದಾಖಲಾಗಿದೆ
ಕ್ರಿಕೆಟ್ ‌ಆಡುವಾಗ ಚಂಡು ಮನೆ ಮುಂದೆ ಬಂದಿದಕ್ಕೆ ಮಕ್ಕಳ ಜೊತೆಗೆ ಜಗಳ ಈ ಮಟ್ಟಕ್ಕೆ ಬೆಳೆಯಿತು.
ಇನ್ನು 13 ಬೇರೆ ಗುಂಪಿನ ಮೇಲೂ ಶಹಾಪುರ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಸಿ ಸೆಕ್ಷನ್ 143, 147, 148, 323, 324, 307, 354, 504, 506, 153A ಹಾಗೂ 149 ಅಡಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!