Headlines

ಪಾಲಿಕೆ ‘ಕಳ್ಳರು ಯಾರು?

ಪಾಲಿಕೆ ವಲಯ ಕಚೇರಿಯಲ್ಲಿ ಮತ್ತೆ ಕಳ್ಳತನ.!

ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದ ಶಾಸಕ ಅಭಯ ಪಾಟೀಲ

ಈ ರೀತಿ ಕಳ್ಳತನ ಎರಡನೇ ಬಾರಿ ಕಳ್ಳರು ಹೊತ್ತೊಯ್ದ ದಾಖಲೆಯಾದರೂ ಏನು?
ಬೆಳಗಾವಿ:
ಇಲ್ಲಿನ ಗೋವಾವೇಸ್ ಹತ್ತಿರದ ಮಹಾನಗರ ಪಾಲಿಕೆಯ ವಲಯ ಕಚೇರಿಯಲ್ಲಿ ಸೋಮವಾರ ಬೆಳಗಿನ ಜಾವ ಮತ್ತೇ ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪಾಲಿಕೆಯ ಕಂದಾಯ ವಿಭಾಗದ ಕಾರ್ಯಾಲಯ ದಲ್ಲಿಯೇ ಈ ಕಳ್ಳತನ ನಡೆದಿದೆ.

ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯ 1 ರಿಂದ 26ರವರೆಗಿನ ವಾರ್ಡಗಳ ಕಾರ್ಯ ಇಲ್ಲಿಂದಲೇ ನಡೆಯುತ್ತದೆ.
ಎಂದಿನಂತೆ ಸೋಮವಾರ ಪಾಲಿಕೆ ಸಿಬ್ಬಂದಿ ಕಾರ್ಯಾಲಯದ ಒಳ ಪ್ರವೇಶಿಸಿದಾಗ, ಮಹತ್ವದ ಕಾಗದಪತ್ರಗಳು ಚಲ್ಲಾಪಿಲ್ಲಿಯಾಗಿದ್ದು ಕಂಡು ಬಂದಿದೆ. ಅಲ್ಲದೇ ಲ್ಯಾಪಟಾಪ್ ಕೂಡ ಮಾಯವಾಗಿದೆ.,


ನಸುಕಿನ ಜಾವ ಯಾರು ಇಲ್ಲದ ಸಮಯ ನೋಡಿ ಕಳ್ಳರು ಕಾಯರ್ಾಲಯದ ಮುಖ್ಯ ದ್ವಾರದ ಪಕ್ಕದಲ್ಲಿರುವ ಕಿಟಕಿಯಿಂದ ಒಳಪ್ರವೇಶಿಸಿರುವ ಸಂಶಯ ವ್ಯಕ್ತವಾಗಿದೆ.

ಕಳ್ಳತನದ ಬಳಿಕ ಮತ್ತೆ ಬಾಗಿಲನ್ನು ಹಾಕಿಕೊಂಡು ಹೋಗಿದ್ದಾರೆ. ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ಫೂಟೇಜ್ ಪರಿಶೀಲಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕ್ರಿಮಿನಲ್ ಕೇಸ್ ದಾಖಲಿಸಿ

ಬೆಳಗಾವಿ ಮಹಾನಗರ ಪಾಲಿಕೆ ಕಂದಾಯ ಕಚೇರಿಯಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣವನ್ನು ಪಾಲಿಕೆ ಆಯುಕ್ತರು ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕ ಅಭಯ ಪಾಟೀಲ್ ಹೇಳಿದ್ದಾರೆ.
ಬೆಳಗಾವಿ ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಪಾಲಿಕೆ ಕಚೇರಿಯಲ್ಲಿ ಈ ರೀತಿಯ ಕಳ್ಳತನ ನಡೆಯುತ್ತಿರುವುದು ಎರಡನೆ ಬಾರಿಯಾಗಿದೆ, ಆದ್ದರಿಂದ ಪಾಲಿಕೆ ಆಯುಕ್ತರು ಈ ಸಂಬಂಧ ತಪ್ಪಿತಸ್ಥರನ್ನು ಅಮಾನತ್ ಮಾಡುವುದಲ್ಲದೇ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!