ಪಾಲಿಕೆ ಕಂದಾಯ ಶಾಖೆ ಕಳ್ಖರ ಬಗ್ಗೆ ಚರ್ಚೆ ಆಗಬೇಕು. ಮೊದಲ ಸಲ ಕಳ್ಸಿಳತನವಾದಾಗ ಸಿಸಿಟಿವಿ ಯಾಕೆ ಅಳವಡಿಸಿಲ್ಲ
ಸ್ವಚ್ಚತೆ, ಕಸ ವಿಲೇವಾರಿ ಬಗ್ಗೆ ಚರ್ಚೆ ನಡೆಯಬೇಕು.
ನಕಲಿ ಪಿಐಡಿ ಬಗ್ಗೆ ಕೇಳೋರು ಯಾರು?ಜೊತೆಗೆ ಬೆಳಗಾವಿ ನಗರದ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಬೇಕು.
ಗಣೇಶ ವಿಸರ್ಜನೆ ಹೊಂಡದ ರಿಪೇರಿ, ರಸ್ತೆ ಮಧ್ಯೆ ಬಿದ್ದ ಹೊಂಸದ ಬಗ್ಗೆ ಚರ್ಚೆ ಆಗಬೇಕು
ಎಲ್ಲಿ ನೋಡಿದಲ್ಲಿ ಅಕ್ರಮ ಅಡ್ಡೆಗಳೇ ತೆರೆದುಕೊಂಡಿವೆ.
ಪಾಲಿಕೆಯ ಘನತೆ, ಗೌರವ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮೇಯರ್ ಆಡಳಿತ ಯಂತ್ರ ಕೆಲಸ ಮಾಸಬೇಕು.
ಬೆಳಗಾವಿ. ನಾಲ್ಕು ತಿಂಗಳ ನಂತರ ನಡೆಯುವ ಪಾಲಿಕೆ ಸಾಮಾನ್ಯ ಸಭೆ ನಾಮಕಾವಾಸ್ತೆ ಆಗಬಾರದು. ಅಲ್ಲಿ ಬೆಳಗಾವಿಗರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕಿದೆ.
ಇಲ್ಲದಿದ್ದರೆ ಪಾಲಿಕೆ ಸಾಮಾನ್ಯ ಸಭೆ ಚಹಾ ಉಪ್ಪಿಟ್ಟು, ಊಣೊಪಚಾರಕ್ಕೆ ಸಿಮೀತವಾದಂತಾಗುತ್ತದೆ. ಈಗ ನಾಲ್ಕು ತಿಂಗಳ ನಂತರ ನಡೆಯುವ ಸಭೆ ಇದು. ಚುನಾವಣೆ ನೀತಿ ಸಂಹಿತೆಯೂ ಬಂತು. ಹೀಗಾಗಿ ಇವತ್ತು ಸಾಮಾನ್ಯ ಸಭೆ ನಡೆಯುತ್ತಿದೆ.
ಕಂದಾಯ ಶಾಖೆಯಲ್ಲಿ ಕದ್ದವರ ಬಗ್ಗೆ ಚರ್ಚೆ? . ಕಳೆದ ನಾಲ್ಕು ತಿಂಗಳ ನಂತರ ನಾಳೆ ದಿ. 20 ರಂದು ನಡೆಯುವ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ರಂಗೇರುವ ಸಾಧ್ಯತೆಗಳು ಹೆಚ್ಚಾಗಿವೆ. ಕಸವಿಲೇವಾರಿ, ಮಳೆಗಾಲದ ಸಂದರ್ಭದಲ್ಲಿ ಆಗುವ ಅನಾಹುತಗಳು ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಿಗದೇ ಇರುವುದು ಸೇರಿದಂತೆ ಇನ್ನಿತರ ವಿಷಯಗಳು ಚರ್ಚೆಗೆ ಬರುವ ಸಾಧ್ಯತೆಗಳಿವೆ.
ಎಲ್ಲಕ್ಕಿಂತ ಹೆಚ್ಚಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿರುವ ಗೋವಾವೇಸ್ನ ಪಾಲಿಕೆ ಕಚೇರಿಯ ಕಂದಾಯ ಶಾಖೆಯಲ್ಲಿ ಮೇಲಿಂದ ಮೇಲೆ ಆಗುತ್ತಿರುವ ಕಳ್ಳತನ ಪ್ರಕರಣ ಕೂಡ ನಾಳೆ ನಡೆಯುವ ಸಭೆಯಲ್ಲಿ ಪ್ರತಿಧ್ವನಿಸುವ ಲಕ್ಷಣಗಳು ಕಾಣಸಿಗುತ್ತವೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಕಳೆದ 6 ತಿಂಗಳ ಹಿಂದೆಯಷ್ಟೇ ಇದೇ ಪಾಲಿಕೆಯ ಕಂದಾಯ ಕಚೇರಿಯಲ್ಲಿ ಕಳ್ಳತನವಾಗಿತ್ತು, ಆಗ ಪೊಲೀಸರು ಪ್ರಕರಣ ದಾಖಲು ಮಾಡಿ ವಿಚಾರಣೆ ನಡೆಸಿದ್ದಾರೆ, ಆದರೆ ಕಳ್ಳರು ಮಾತ್ರ ಪತ್ತೆಯಾಗಲಿಲ್ಲ.
ಆದರೆ ಈಗ ಮತ್ತೇ ಅಲ್ಲಿ ಕಳ್ಳತನವಾಗಿದೆ, ಹಿಂದಿನಂತೆ ಕಳ್ಳರು ಇಲ್ಲಿ ಮತ್ತೇ ಲ್ಯಾಪ್ ಟಾಪ್ ಸೇರಿದಂತೆ ಕೆಲವೊಂದು ಕಾಗದ ಪತ್ರವನ್ನು ತೆಗೆದುಕೊಂಡು ಹೋಗಿದ್ದಾರೆ. ಇದೆಲ್ಲ ಸೂಕ್ಷ್ಮತೆಯನ್ನು ಗಮನಿಸಿದರೆ ಕಳ್ಳರು ಪಾಲಿಕೆ ಸುತ್ತ ಮುತ್ತಲು ಇದ್ದಾರೆ ಎನ್ನುವ ಅನುಮಾನ ಬರುತ್ತಿದೆ.
ಎಚ್ಚರಾಗಲಿಲ್ಲ ಏಕೆ? ಪಾಲಿಕೆಯ ಕಂದಾಯ ಶಾಖೆಯಲ್ಲಿ ಕಳ್ಳತನ ಮೇಲಿಂದ ಮೇಲೆ ಆಗುತ್ತಿದ್ದರೂ ಕೂಡ ಸಂಬಂಧಿಸಿದ ಅಧಿಕಾರಿಗಳು ಆಗಲೇ ಎಚ್ಚರಾಗಿ ಕ್ರಮ ತೆಗೆದು ಕೊಂಡಿದ್ದರೆ ಮತ್ತೊಂದು ಕಳ್ಳತನವನ್ನು ತಪ್ಪಿಸಬಹುದಿತ್ತು. ಆ ಸಂದರ್ಭದಲ್ಲಿ ಅಲ್ಲಿ ಸಿಸಿಟಿವಿಗಳನ್ನು ಅಳವಡಿಸಿದ್ದರೆ ಮತ್ತೊಂದು ಕಳ್ಳತನವನ್ನು ತಪ್ಪಿಸಬಹುದಿತ್ತು,
ಆದರೆ ಈಗ ಈ ಪ್ರಕರಣವನ್ನು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಗಂಭೀರವಾಗಿ ಪರಿಗಣಿಸಿದ್ದಾರೆ. ಗೋವಾವೇಸ್ ನಲ್ಲಿರುವ ಕಾಂಪ್ಲೆಕ್ಸ ನಲ್ಲಿ ಅಷ್ಟೇ ಅಲ್ಲ ಇನ್ನುಳಿದ ಕಡೆಗೂ ಸಿಸಿಟಿವಿ ಅಳವಡಿಸಲು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ,
ಕಳೆದ ಕೆಲ ದಿನಗಳ ಹಿಂದೆ ನಡೆದ ಕಳ್ಳತನ ಪ್ರಕರಣದ ಬಗ್ಗೆ ಎಫ್ಐಅರ್ ದಾಖಲಿಸಲು ಸೂಚನೆ ನೀಡಲಾಗಿದೆ. ಅದರ ಜೊತೆಗೆ ವಿಚಾರಣೆಗೂ ಆದೇಶ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ,
ರಕ್ಷಣೆ ಕೊಡಿ…! ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಅಂಗಡಿ ಮುಗ್ಗಟ್ಟುಗಳ ಮುಂದೆ ಶೇ, 60 ರಷ್ಟು ಕನ್ನಡ ಅನುಷ್ಠಾನವನ್ನು ಜಾರಿಗೆ ತರಲು ಹೋಗಿದ್ದ ಸಿಬ್ಬಂದಿಗೆ ರಕ್ಷಣೆ ಕೊಡಬೇಕು ಎನ್ನುವ ಕೂಗು ಹೆಚ್ಚಾಗಿದೆ, ಸಧ್ಯ ಏನಾಗಿದೆ ಎಂದರೆ, ಸಕರ್ಾರದ ಆದೇಶವನ್ನು ಅನುಷ್ಠಾನಕ್ಕೆ ಹೋಗಿದ್ದ ಸಿಬ್ಬಂದಿ ಮೇಲೆ ವಿನಾಕಾರಣ ಪ್ರಕರಣ ದಾಖಲಿಸುವ ಕೆಲಸ ಆಗುತ್ತಿದೆ, ಆದ್ದರಿಂದ ಅಂತಹ ಸಿಬ್ಬಂದಿಗಳಿಗೆ ರಕ್ಷಣೆ ಕೊಡುವ ಕೆಲಸ ಆಗಬೇಕು ಎನ್ನುವ ಚಚರ್ೆ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ,