ಲೋಕಸಮರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ಕೈ ಕೊಟ್ಟ ಅತೀಯಾದ ಆತ್ಮವಿಶ್ವಾಸ.
ಸ್ವಕ್ಷೇತ್ರ ಉಳಿಸಿಕೊಳ್ಳವ ಚಿಂತೆಯಲ್ಲಿ ಸಚಿವೆ ಕಸರತ್ತು.
ಸೋತಲ್ಲಿಯೇ ಗೆಲ್ಲುವ ಮಾತು ಆಡಿದ ಸಚಿವೆ. ಅಂದ್ರೆ ಮತ್ತೇ 5 ವರ್ಷಗಳ ನಂತರ ಮೃನಾಲ್ ಮತ್ತೇ ಕಣಕ್ಕೆ.
ಕಿವಿ ಚುಚ್ಚುವರು, ಸ್ವಜಾತಿ ಪ್ರೇಮದ ಕೆಲವರ ಮಾತುಗಳನ್ನೇ ನಂಬಿ ಕುಳಿತ್ರಾ ಸಚಿವರು?
ಉಳಿದ ಸಮಾಜದವರ ಕಡೆಗಣನೆ ಈ ಸೋಲಿಗೆ ಕಾರಣವಾಯಿತಾ?
ಮೃನಾಲ್ ಕಣ್ಣು ಈಗ ಬೆಳಗಾವಿ ದಕ್ಷಿಣ ಮೇಲಂತೆ? ಹೌದಾ?
ಬೆಳಗಾವಿ.
ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಎದ್ದಿರುವ ಬೆನ್ನ ಹಿಂದೆಯೇ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಒಂದು ರೀತಿಯ ದಂಗಲ್ ಶುರುವಾಗಿದೆ.
ಚಿಕ್ಕೋಡಿ ಕ್ಷೇತ್ರದಲ್ಲಿ ಪರಾಭವಗೊಂಡ ಬಿಜೆಪಿಯ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಈಗ ತಮ್ಮ ಸೋಲಿಗೆ ಸ್ವಪಕ್ಷೀಯರೇ ಕಾರಣ ಎನ್ನುವ ಅಸಮಾಧಾನದ ಮಾತುಗಳನ್ಬು ಹೈ ಕಮಾಂಡಗೆ ತಲುಪಿಸಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.
ಆದರೆ ಅಣ್ಣಾಸಾಹೇಬ ಜೊಲ್ಲೆ ಅವರ ಪತ್ನಿ ಶಾಸಕಿ ಶಶಿಕಲಾ ಜೊಲ್ಲೆಯವರ ತವರು ಕ್ಷೇತ್ರ ನಿಪ್ಪಾಣಿಯಲ್ಲಿ ಕೂಡ ಬಿಜೆಪಿಗೆ ಕಡಿಮೆ ಮತಗಳು ಬಂದಿರುವುದು ಜೊಲ್ಲೆಯವರು ಹೆಚ್ಚಿಗೆ ಮಾತನಾಡದ ಹಾಗಾಗಿದೆ
ಅದೇ ಪರಿಸ್ಥಿತಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕೂಡ ಇದೆ.
ಇಲ್ಲಿ ಸಚಿವೆ ಲಕ್ಷ್ಮೀ ಪುತ್ರ ಮೃನಾಲ್ ಹೆಬ್ಬಾಳಕರ ಸೋಲನ್ನು ಅನುಭವಿಸಿದ್ದಾರೆ. ಸೋಲಿಗಿಂತ ಮಿಗಿಲಾಗಿ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರದಲ್ಲಿಯೇ ಕಾಂಗ್ರೆಸ್ ಗೆ ಭಾರೀ ಹೊಡೆತ ಬಿದ್ದಿದೆ. ಸವದತ್ತಿ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಮುನ್ನೆಡೆ ಸಾಧಿಸಿತ್ತು.
ಇದೆಲ್ಲಕ್ಕಿಂತ ಮಿಗಿಲಾಗಿ ಸಚಿವರ ಸ್ವಕ್ಷೇತ್ರ ಬೆಳಗಾವಿ ಗ್ರಾಮೀಣದಲ್ಲಿಯೇ ಬಿಜೆಪಿಗೆ ಬರೊಬ್ಬರಿ 50 ಸಾವಿರ ಲೀಡ್ ಸಿಕ್ಕಿದೆ. ಇದು ಸಚಿವೆ ಹೆಬ್ಬಾಳಕರಗೆ ಇರಿಸುಮುರಿಸು ಉಂಟು ಮಾಡಿದೆ ಎಂದು ಹೇಳಬಹುದು.ಹೀಗಾಗಿ ಅವರೂ ಸಹ ಉಳಿದ ಸ್ವಪಕ್ಷೀಯರು ಕೆಲಸ ಮಾಡಿಲ್ಲ ಎಂದು ದೂರಲು ಆಗಲ್ಲ.

ಈಗ ಮೃನಾಲ ಸೋಲಿಗೆ ಕಾರಣಗಳು ಹಲವು. ಅದನ್ನು ಚುನಾವಣೆ ಸಂದರ್ಭದಲ್ಲಿಯೇ ಸರಿ ಮಾಡಿಕೊಂಡು ಹೋಗುವ ಕೆಲಸವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾಡಬೇಕಿತ್ತು.
ಆದರೆ ಸಚಿವರು ಸೇರಿದಂತೆ ಇತರರು ಹೊಂದಿದ ಆತೀಯಾದ ಆತ್ಮವಿಶ್ವಾಸ ಕೈ ಕೊಟ್ಟಿತು ಎಂದು ಹೇಳಬಹುದು.

ಗಮನಿಸಬೇಕಾದ ಸಂಗತಿ ಎಂದರೆ, ಕಿವಿ ಊದುವವರು, ಸ್ವಜಾತಿ ಎಂದು ಹೇಳಿ ವಾಸ್ತವತೆ ಮರೆಮಾಚಿ ಸುಳ್ಳನ್ನು ‘ಸತ್ಯ’ ಎಂದು ನಂಬಿಸುವವರ ಮಾತನ್ನ ಕೇಳಿ ಸಚಿವರು ದಾರಿ ತಪ್ಪಿದರು ಎನ್ನುವ ಮಾತುಗಳಿವೆ.

ಕ್ಷೇತ್ರ ಕೈ ತಪ್ಪುವ ಭೀತಿ.?
ರಾಜಕಾರಣದಲ್ಲಿ ಇನ್ನುಳಿದವರಂತೆ ಪ್ರಭಾವಿ ಕುಟುಂಬದ ಕನಸು ಕಂಡಿದ್ದ ಸಚಿವೆ ಹೆಬ್ಬಾಳಕರ ಮಾಡಿದ ತೆರೆಮರೆ ಕಸರತ್ತು ಅಷ್ಟಿಷ್ಟಲ್ಲ.
ಅಪ್ಪನ ಆಸೆಯಂತೆ ಈ ಹಿಂದೆಯೇ ಲಕ್ಷ್ಮೀ ಹೆಬ್ಬಾಳಕರ ಅವರು ಸಂಸತ್ ಮೆಟ್ಟಿಲು ಹತ್ತಬೇಕಿತ್ತು . ಆದರೆ ಮೊದಲ ಸಲ ಸ್ಪರ್ಧೆ ಮಾಡಿದಾಗ ಪರಾಭವಗೊಂಡರು. ಆದರೆ ಅದರಿಂದ.ಅವರು ಎದೆಗುಂದಲಿಲ್ಲ. ಬದಲಾಗಿ ಸೋತ ದಿನವೇ ಅವರು ಮತ್ತೇ ಕ್ಷೇತ್ರ ಸಂಚಾರ ಶುರುವಿಟ್ಟುಕೊಂಡರು.
ಕೊನೆಗೆ ಅನುಕಂಪವೂ ಸೇರಿದ ನಂತರ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದ್ದರು.
ಅಲ್ಲಿಂದ ರಾಜಕೀಯ ಅಭಿಲಾಸೆ ಮತ್ತಷ್ಟು ಹೆಚ್ಚಾಯಿತು.ಅವರ ಕಾರ್ಯಶೈಲಿ. ಮಾತನಾಡುವ ಪದ್ಧತಿ ಕೂಡ ಬದಲಾಯಿತು. ಹೀಗಾಗಿ ಅವರು ಜನರಿಂದ ದೂರ ಆಗತೊಡಗಿದರು ಎನ್ನುವ ಮಾತು ಕೇಳಿ ಬಂದಿತು.
ಏಣಿ ಹತ್ತಿಸಿದವರನ್ನೇ ಒದ್ದರು
ಚುನಾವಣೆ ಸಂದರ್ಭದಲ್ಲಿ ಕೈ ಹಿಡಿದವರನ್ನು ದೂರ ಮಾಡುವ ಕೆಲಸವನ್ನ ಸಚಿವೆ ಮಾಡಿದರು. . ಒಂದರ್ಥದಲ್ಲಿ ಹತ್ತಿದ್ದ ಏಣಿಯನ್ನು ಒದ್ದರು. ದುಡ್ಡಿದ್ದರೆ ಯಾರು ಬೇಕಾದವರು ಬರ್ತಾರೆ ಎನ್ನುವ ಧಾಟಿಯ ಮಾತುಗಳು ಕೇಳಿ ಬರಲಾರಂಭಿಸಿದವು.
ಇದೆಲ್ಲ ಸಚಿವರಿಗೆ ಗೊತ್ತಿದ್ದರೂ ಅವರು ಏನು ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ ಅವರು ವಾಸ್ತವತೆ ಬಗ್ಗೆ ಹೇಳಿದವರನ್ನೇ ವಿರೋಧಿಗಳು ಎನ್ನುವಂತೆ ಭಾವಿಸತೊಡಗಿದರು. ಹೀಗಾಗಿ ಅವರಿಂದ ಅವರೆಲ್ಲರೂ ದೂರವಾದರು.

ಬದಲಾಗಬೇಕು ಸಚಿವೆ ಲಕ್ಷ್ಮೀ..!
ಅಧಿಕಾರ ಇಲ್ಲದೇ ಇದ್ದಾಗ ಜೊತೆಯಲ್ಲಿದ್ದವರು ಯಾರು? ಈಗ ಅಧಿಕಾರ ಸಿಕ್ಕ ಮೇಲೆ ಜೊತೆಯಲ್ಲಿ ಯಾರಿದ್ದಾರೆ ಎನ್ನುವುದನ್ನು ಸಚಿವೆ ಹೆಬ್ಬಾಳಕರ ಮೊದಲು ಅರ್ಥೈಸಿಕೊಳ್ಳಬೇಕಿದೆ. ಆದರೆ ಈಗ ಕಷ್ಟಕಾಲದಲ್ಲಿದ್ದವರು ಮತ್ತು ಪಕ್ಷದ ಹಳೆಯ ನಿಷ್ಠಾವಂತರನ್ನು ಗುರುತಿಸಿ ಮಾತನಾಡಿಸುವ ಕೆಲಸವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾಡಬೇಕಿದೆ .
ಇ್ಲದರ ಜೊತೆಗೆ ಬೆಳಗಾವಿಗರ ಜೊತೆ ನೇರ ಸಂಪರ್ಕ ಮತ್ತೇ ಸಾಧಿಸಬೇಕು. ಎಲ್ಲವನ್ನೂ ಬರೀ ತಮ್ಮ ಆಪ್ತರ ಮೂಲಕವೇ ನಿಭಾಯಿಸುವದನ್ಬು ಬಿಡಬೇಕು. ಏಕೆಂದರೆ ಅಂತಹ ಆಪ್ತರೆ ಚುನಾವಣೆ ಸಂದರ್ಭದಲ್ಲಿ ಯಾರಿಗೂ ಗೊತ್ತೇ ಇರದ ಕೋರ್ಟ ಸ್ಟೇ ಪ್ರತಿಯನ್ನು ಹಾಕಿ ಗೊಂದಲ ಸೃಷ್ಟಿಸಿದರು ಎನ್ನುವುದು ಸಚಿವರಿಗೆ ಗೊತ್ತಿದ್ದರೆ ಸಾಕು. ಇವೆಲ್ಲ ಸಂಗತಿಗಳು ಲೋಕ ಸಮರದಲ್ಲಿ ಹಿನ್ನಡೆ ಆಗಲು ಪ್ರಮುಖ ಕಾರಣ
ಕೊನೆ ಮಾತು..

ರಾಜಕಾರಣವೇ ವಿಚಿತ್ರ. ನಾ ನಾ ಎಂದವರನ್ನು ಈಗ ಹೆಸರಿಲ್ಲದಂತೆ ಮಾಡಿದ ಇತಿಹಾಸ ಬೆಳಗಾವಿ ಜಿಲ್ಲೆಗಿದೆ ಎನ್ನುವುದು ಲಕ್ಷ್ಮೀ ಹೆಬ್ಬಾಳಕರಗೆ ಗೊತ್ತಿಲ್ಲ ಎಂದಲ್ಲ.
ಬರೀ ಎಲ್ಲವನ್ನೂ, ಎಲ್ಲರನ್ನು ದುಡ್ಡಿನಿಂದಲೇ ಅಳೆಯುವುದನ್ನು ಅವರು ಬಿಡಬೇಕು ಎನ್ನುವ ಮಾತುಗಳಿವೆ. ಹೀಗಾಗಿ ಲಕ್ಷ್ಮೀ ಹೆಬ್ಬಾಳಕರ ಅವರು ಮತ್ತೇ ಮೊದಲಿನಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದರೆ ಮಾತ್ರ ಗ್ರಾಮೀಣವೂ ಕೈ ಹಿಡಿಯಬಹುದು. ೫ ವರ್ಷಗಳ ನಂತರ ನಡೆಯುವ ಲೋಕಸಮರದಲ್ಲಿ ಮೃನಾಲೂ ಗೆಲ್ಲಬಹುದು. ಇಲ್ಲದಿದ್ದರೆ ಇದೇ ಪರಿಸ್ಥಿತಿ ಮುಂದುವರೆದರೆ ಎಲ್ಲವೂ ಕೈ ಕೊಡಬಹುದು
.