ಮಂಗಾಯಿ ಜಾತ್ರೆ ಸ್ಟೇಟಸ್ ಹಾಕಿದವ ವಿರುದ್ಧ ಖಾಕಿ ಗರಂ
ಬೆಳಗಾವಿ.ಕೋಮು ಸೌಹಾರ್ದತೆಗೆ ಧಕ್ಕೆ ತರುವಙತಹ ಸ್ಟೇಟಸ್ ಹಾಕಿದ್ದ ವಡ್ಡರವಾಡಿಯಅಜಯ ಶ್ಯಾಮ ಕಾಗಲಕರ (27) ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಕಳೆದ ದಿನ ಈತನು ವಡಗಾಂವಿಯಲ್ಲಿ ನಡೆಯುತ್ತಿರುವ ಶ್ರೀ ಮಂಗಾಯಿ ಜಾತ್ರೆಯಲ್ಲಿ ಬಗ್ಗೆ ಸ್ಟೇಟಸ್ ಹಾಕಿದ್ದು ಹಿಂದೂಗಳ ಬಳಿ ಮಾತ್ರ ಸಾಮಾನುಗಳನ್ನು ಖರೀದಿ ಮಾಡಬೇಕೆಂದು ಸ್ಟೇಟಸ್ ಹಾಕಿದ್ದನು. ಈ ಸ್ಟೇಟಸ್ ದಿಂದ ಹಿಂದೂ ಮತ್ತು ಮುಸ್ಲಿಂ ಸಮುದಾಯದವರ ನಡುವೆ ವೈಮನಸ್ಸು ಬೆಳೆದು ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವ ಸಾದ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.