ಶಾಸಕ ಅಭಯ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಗ್ರೀನ್ ಸಿಗ್ನಲ್.
ಮೂರು ದಕ್ಷಿಣಕ್ಕೆ ಮತ್ತು ಒಂದು ಉತ್ತರದ ಪಾಲಾದ ಕಮಿಟಿ.
ಹೊಸಬರಿಗೆ ಅವಕಾಶ ಕೊಟ್ಟ ಅಭಯ. ಜಾತಿ, ಭಾಷೆ ಗಮನಿಸದೇ ಸಾಮಾಜಿಕ ನ್ಯಾಯ ಒದಗಿಸಿದ ಅಭಯ
ಬೆಳಗಾವಿ. ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಯಲ್ಲಿ ಮೂರು ಅಧ್ಯಕ್ಷ ಸ್ಥಾನವು ಬಹುತೇಕ ದಕ್ಷಿಣ ಕ್ಷೇತ್ರದ ಪಾಲಾಗಲಿದೆ.
ಆರೋಗ್ಯ, ಪಿಡಬ್ಲುಡಿ ಮತ್ತು ಲೆಕ್ಕಪತ್ರ ಕಮಿಟಿ ಬೆಳಗಾವಿ ದಕ್ಷಿಣಕ್ಜೆ ಮತ್ತು ಕಂದಾಯ ಸ್ಥಾಯಿ ಸಮಿತಿ ಉತ್ತರ ಕ್ಷೇತ್ರದ ಪಾಲಾಗಿವೆ.

ಕಳೆದ ಬಾರಿ ಅಧ್ಯಕ್ಷರಾದವರನ್ಬು ಹೊರತು ಪಡಿಸಿ ಉಳಿದವರಿಗೆ ಅಧಿಕಾರ ಹಂಚಿಕೆ ಮಾಡುವ ಜಾಣ್ಮೆಯನ್ಬು ಶಾಸಕ ಅಭಯ ಪಾಟೀಲ ಮಾಡಿದ್ದಾರೆ.
ಗಮನಿಸಬೇಕಾದ ಸಂಗತಿ ಎಂದರೆ, ಇಲ್ಲಿ ಕನ್ನಡ, ಮರಾಠಿ ಭಾಷಾ ಬೇಧ ಮಾಡದೇ ಎಲ್ಲ ವರ್ಗದವರಿಗೆ ಸಾಮಾಜಿಕ ನ್ಯಾಯ ಸಿಗುವ ನಿಟ್ಟಿನಲ್ಲಿ ತೀರ್ಮಾನ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಇಂದು ಬೆಳಿಗ್ಗೆ ಶಾಸಕರು ತಮ್ಮ ಕಚೇರಿಯಲ್ಲಿ ನಡೆಸಿದ ನಗರಸೇವಕರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡರು ಎಂದು ಗೊತ್ತಾಗಿದೆ.
ಸಧ್ಯ ಸದಸ್ಯರಾಗಿದ್ದವರಲ್ಲಿ ಕಮಿಟಿ ಅಧ್ಯಕ್ಷರು ಯಾರಾಗುತ್ತಾರೆ ಎನ್ನುವುದು ಬಹುತೇಕ ಸ್ಪಷ್ಟವಾಗಿದೆ. ಆದರೆ ಇಂದು ಕೇವಲ ಸದಸ್ಯರ ಆಯ್ಕೆ ಮಾತ್ರ ನಡೆಯಲಿದೆ. ಅಧ್ಯಕ್ಷರ ಆಯ್ಕೆಗೆ ಇನ್ನೂ ಸಮಯವಿದೆ.