ಮೊಬೈಲ್ ಕೊಡುವ ಅನುದಾನ ಕೇಂದ್ರದ್ದು. ಸೀರೆ, ಮೆಡಿಕಲ್ ಕಿಟ್ ರಾಜ್ಯದ್ದು. ಸತ್ಯ ಹೊರಹಾಕಿದ ಅಭಯ. ಶಾಸಕ ಅಭಯ ಪಾಟೀಲರ ಮಾತಿಗೆ ಇದು ರಾಜಕಾರಣ ಎಂದ ಸಚಿವೆ ಲಕ್ಷ್ಮೀ.
ಬೆಳಗಾವಿ.
ಇದ್ದದ್ದು ಇದ್ಹಂಗ ಹೇಳಿದ್ರೆ ಸಿದ್ದಪ್ಪಗ ಸಿಡ್ಲ ಬಡಿತಂತೆ ಎನ್ನುವ ರೂಢಿ ಮಾತು ಕೇಳಿರಬಹುದು,
ಗಡಿನಾಡ ಬೆಳಗಾವಿಯಲ್ಲಿ ಸಧ್ಯ ರಾಜಕಾರಣಿಗಳ ಮಾತುಗಳು ಇದಕ್ಕೆ ಸಾಕ್ಷಿಯಾದಂತಾಗಿದೆ..
ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲರು ಹೇಳಿದ ಒಂದು ಸತ್ಯ ಕಾಂಗ್ರೆಸ್ನ ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ಇರಿಸುಮುರಿಸು ಉಂಟು ಮಾಡಿದೆ ಎಂದು ಹೇಳಬಹುದು,

ರಾಜ್ಯದಲ್ಲಿ ಈಗ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಕಿಟ್ ಕೊಡಲಾಗುತ್ತಿದೆ,
ಆದರೆ ಅದನ್ನು ಕೊಡುವವರು ಎಲ್ಲಿಯೂ ಇದರಲ್ಲಿ ಕೇಂದ್ರದ ಪಾಲೂ ಇದೆ ಎಂದು ಹೇಳಿರಲಿಲ್ಲ. ಬದಲಾಗಿ ಇದೆಲ್ಲ ರಾಜ್ಯ ಸರ್ಕಾರದ ಸಾಧನೆ ಎನ್ನುವಂತೆ ಬಿಂಬಿಸತೊಡಗಿದ್ದರು,
ಆದರೆ ಬೆಳಗಾವಿಯ ದಕ್ಷಿಣ ಕ್ಷೇತ್ರದಲ್ಲಿ ಇಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಕಿಟ್ ವಿತರಣೆ ಸಂದರ್ಭದಲ್ಲಿ ಶಾಸಕ ಅಭಯ ಪಾಟೀಲರು, ಮೊಬೈಲ್ ನ್ನು ಕೇಂದ್ರ ಸರ್ಕಾರದ ಅನುದಾನದಲ್ಲಿ ಕೊಡಲಾಗುತ್ತಿದೆ ಎಂದು ಹೇಳಿದರು., ಅಷ್ಟೇ ಅಲ್ಲ ಸೀರೆ ಮತ್ತು ಮೆಡಿಕಲ್ ಕಿಟ್ ನ್ನು ಮಾತ್ರ ರಾಜ್ಯ ಸರ್ಕಾರದ ಅನುದಾನದಲ್ಲಿ ಕೊಡಲಾಗುತ್ತಿದೆ ಎಂದರು.
ಇಲ್ಲಿ ಅವರು ಹೇಳಿದ ಮಾತನ್ನು ಅರಗಿಸಿಕೊಳ್ಳದ ಸಚಿವರು ಇದರಲ್ಲಿ ರಾಜಕಾರಣ ಮಾಡುವುದು ಸರಿಯೇ ಎಂದು ಪ್ರಶ್ನೆ ಮಾಡಿರುವುದು ಈಗ ಚರ್ಚೆಯ ವಸ್ತುವಾಗಿದೆ.
ಹೆಬ್ಬಾಳಕರ ಎನಂದ್ರು?

ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗುತ್ತಿರುವ ಮೊಬೈಲ್ ಕೇಂದ್ರ ಸರಕಾರದ್ದು ಎನ್ನುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ಹೇಳಿಕೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ಷೇಪಿಸಿದ್ದಾರೆ.
ತಮ್ಮ ಕೆಲಸಗಳಿಗೆ ಉತ್ತಮವಾದ ಮೊಬೈಲ್ ಅಗತ್ಯ ಎಂದು ಅಂಗನವಾಡಿ ಕಾರ್ಯಕರ್ತೆಯರು ಕಳೆದ ಅನೇಕ ವರ್ಷಗಳಿಂದ ಹೋರಾಟ, ಪ್ರತಿಭಟನೆ ಮಾಡುತ್ತ ಬಂದಿದ್ದಾರೆ. ಅದಕ್ಕೆ ಹಿಂದಿನ ಬಿಜೆಪಿ ಸರಕಾರ ಸ್ಪಂದಿಸಿರಲಿಲ್ಲ. ನಾನು ಮುಖ್ಯಮಂತ್ರಿಗಳಿಗೆ, ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿ, ವಿಶೇಷ ಪ್ರಯತ್ನದಿಂದ ಮೊಬೈಲ್ ಕೊಡಲಾಗುತ್ತಿದೆ. ಕೇಂದ್ರ ಸರಕಾರ ಪೋಷಣ್ ಅಭಿಯಾನದ ಅಡಿಯಲ್ಲಿ ಅನುದಾನ ನೀಡಿದೆಯೇ ವಿನಃ ಇದೇನೂ ವಿಶೇಷ ಅನುದಾನವಲ್ಲ ಎಂದು ಹೇಳಿದ್ದಾರೆ.
ಇಷ್ಟು ವರ್ಷ ಶಾಸಕರಾಗಿರುವವರು ಯೋಜನೆಗಳ ಕುರಿತು ಮಾಹಿತಿ ಹೊಂದಿರಬೇಕಾಗುತ್ತದೆ. ಯಾವುದೇ ಮಾಹಿತಿ ಇಲ್ಲದೆ ಈ ರೀತಿ ಮಾತನಾಡುವುದು ಸಮಂಜಸವಲ್ಲ ಎಂದು ಹೆಬ್ಬಾಳಕರ್ ತಿರುಗೇಟು ನೀಡಿದ್ದಾರೆ.