Headlines

ಪಾಲಿಕೆ ಮೇಯರ್ ಅದೃಷ್ಟವಂತರು.. ಆದರೆ…!

ಹಿಂದೆ ಮೇಯರ್ ಆಯ್ಕೆ ಹೇಗಿತ್ತು?

ಹಿಂದೆ ಮೇಯರ್ ಆಗುವವರು ಹಣದ ಥೈಲಿ ಹಿಡಿದುಕೊಂಡು ತಿರುಗುತ್ತಿದ್ದರು. ಬಹುತೇಕ‌ ನಗರಸೇವಕರು ವಾರಗಟ್ಟಲೆ ರೆಸಾರ್ಟ್ ವಾಸ್ತವ್ಯ ಹೂಡುತ್ತಿದ್ದರು. ಆಗ ಮೇಯರ್ ಆಕಾಂಕ್ಷಿಗಳು ಪಡಬಾರದ ಕಷ್ಟ ಪಡುತ್ತಿದ್ದರು. ಎಲ್ಲವೂ ಸರಿ ಅನಿಸಿದರೂ ಮತದಾನ ಸಂದರ್ಭದಲ್ಲಿ ಒಂದು‌ ಕ್ಷಣ‌ ಆತಂಕ ಇದ್ದದ್ದೇ..

ಈಗ ಮೇಯರ ಆಯ್ಕೆ ಹೇಗಿದೆ ಗೊತ್ತಾ?

ಆದರೆ ಈಗ ಮೇಯರ್ ಆಯ್ಕೆ ಪ್ರಕ್ರಿಯೇ ನೋಡಿದರೆ ಈಗಿನವರು ಅದೃಷ್ಟವಂತರು. ಎನಬಹುದು. ಏಕೆಂದರೆ ಈಗ ಪಕ್ಷ ಆಧಾರಿತ ಚುನಾವಣೆ. ಹಣದ ಥೈಲಿ ಪ್ರಶ್ನೆಯೇ ಬರಲ್ಲ. ಯಾವ ನಗರಸೇವಕರಿಗೆ ಬಿಡಿಗಾಸೂ ಕೊಡಬೇಕೆಂದಿಲ್ಲ. ಪಕ್ಷದ ವರ್ಚಸ್ಸು ಹೆಚ್ಚಿಸಿ ಬೆಳಗಾವಿಗೆ ಒಳ್ಳೆಯ ಹೆಸರು ತರುವವರಿದ್ದರೆ ಮುಗೀತು. ಮೇಯರ್ ಪಕ್ಕಾ!

ಇವರ ಆಶಯ ಏನ್ ಗೊತ್ತಾ?

ಬೆಳಗಾವಿ ಪಾಲಿಕೆ ಕಿಂಗ್ ಮೇಕರ್ ಎಂದು ಕರೆಯಿಸಿಕೊಳ್ಳುವ ಶಾಸಕ ಅಭಯ ಪಾಟೀಲ ಮತ್ತು ಮಾಜಿ ಶಾಸಕ ಅನಿಲ ಬೆನಕೆ ತೀರ್ಮಾನವೇ ಅಂತಿಮ. ಅವರು ಮೇಯರ್ ಕಡೆಯಿಂದ ನಿರೀಕ್ಷೆ ಮಾಡುವುದು ಸುರಳಿತ ಆಡಳಿತ. ಜನರ ಸಮಸ್ಯೆಗೆ‌ ಸ್ಪಂದನೆ. ಮೇಲಾಗಿ ಅವರು ಎಂದಿಗೂ ಪಾಲಿಕೆ ಆಡಳಿತದಲ್ಲಿ ಮೂಗುತೂರಿಸಲ್ಲ.ಆದರೆ ಕೆಲವರು‌ಸೃಷ್ಟಿಸುವ ವಿವಾದಕ್ಕೆ ಇತಿಶ್ರೀ ಹಾಡಲು ಅಭಯ ಬೇಕೇ ಬೇಕು.

ಬೆಳಗಾವಿ.ಎಲ್ಲಿ

ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ, ಉಪಮೇಯರ್ ಚುನಾವಣೆ ಹಿಂದೆಲ್ಲಾ ಹೇಗೆ ನಡೆಯುತ್ತಿದ್ದವು ಎನ್ನುವುದು ಬೆಳಗಾವಿಗರಿಗೆ ಗೊತ್ತಿಲ್ಲ ಎಂದೇನಿಲ್ಲ.!

ಆಗ ಮೇಯರ್ ಚುನಾವಣೆ ಅಂದಾಕ್ಷಣ ಇಡೀ ಬೆಳಗಾವಿ ಟೆನ್ಶನ್ ಆಗುತ್ತಿತ್ತು. ಚನ್ನಮ್ಮ ವೃತ್ತದಿಂದ ಹಿಡಿದು ಮಹಾನಗರ ಪಾಲಿಕೆ ಹಳೆಯ ಕಟ್ಟಡದ ಮಾರ್ಗ ಸಂಪೂರ್ಣ ಬಂದ್. ಎಲ್ಲಿ ನೋಡಿದಲ್ಲಿ ಪೊಲೀಸ್ ಬೂಟಿನ ಸದ್ದು ಕೇಳಿ ಬರುತ್ತಿತ್ತು.

ಆಗ ಕರವೇ ನಾರಾಯಣಗೌಡರ ಬಣದ ಹುಡುಗರು ಕೈಯ್ಯಲ್ಲಿ ಕನ್ನಡ ಬಾವುಟ ಹಿಡಿದುಕೊಂಡು ನಿಂತರೆ , ವಿರುದ್ಧ ದಿಕ್ಕಿನಲ್ಲಿ ಎಂಇಎಸ್ ನವರು ಭಗವಾ ಧ್ವಜ ಹಿಡಿದುಕೊಂಡು ನಿಂತಿರುತ್ತಿದ್ದರು. ಹೀಗಾಗಿ ಮೇಯರ್ ಆಯ್ಕೆ ಬಗ್ಗೆ ಸರ್ಕಾರವೇ ಹೆಚ್ಚಿನ ಗಮನ ನೀಡುತ್ತಿತ್ತು.

ಪಾಲಿಕೆಯಲ್ಲಿ ಆಗ ಪಕ್ಷ ಎನ್ನುವುದು ಇರಲಿಲ್ಲ ಮೇಲಾಗಿ ಎಂಇಎಸ್ ನವರ ಆಟ. ಹತ್ತು ಕೊಟ್ಟರೆ ಅತ್ತ, ಇಪ್ಪತ್ತು ಕೊಟ್ಟರೆ ಇತ್ತ ಎನ್ನುವ ರೀತಿಯಲ್ಲಿ ಚದುರಂಗದಾಟ.

ಅಂದರೆ ಆಗ ಮೇಯರ್ ಆಗ ಬಯಸುವವರು ಕಾಂಚಾಣದ ಥೈಲಿ ಹಿಡಿದುಕೊಂಡೇ ತಿರುಗಬೇಕಾದ ಸ್ಥಿತಿ ಇತ್ತು. ಅಷ್ಟೇ ಅಲ್ಲ ಚುನಾವಣೆಗೆ ಇನ್ನೂ ಒಂದು ವಾರ ಇದೆ ಅಂತ ಗೊತ್ತಾದ ಕೂಡಲೇ ರೆಸಾರ್ಟ ಬುಕಿಂಗ್ ಶುರು ಆಗುತ್ತಿತ್ತು. ಎಂಇಎಸ್ ನ ಮೇಯರ ಆಗುವವರಿಗೆ ಹಣಕಾಸಿನ ನೆರವು ಕೊಡಲು ಒಬ್ಬರು ಮಾಮಾ ಕೂಡ ಇದ್ದರು. ಜಾಗ ಬರೆಯಿಸಿಕೊಂಡು ಸಾಲ ನೀಡುತ್ತಿದ್ದರಂತೆ

ಹೀಗಾಗಿ ಮೇಯರ ಆಗಲೇಬೇಕೆಂದು‌ಕೊಂಡವರು ಆಗ ಲಕ್ಷಗಟ್ಡಲೆ ಸಾಲ ಮಾಡಿದ್ದೂ ಉಂಟು.

ಈಗ ಮೇಯರ್ ಆಯ್ಕೆ ಹೇಗಾಯಿತು ಗೊತ್ತೆ?

ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಮೇಯರ ಆಯ್ಕೆ ನಡೆದ ರೀತಿ ಗಮನಿಸಿದರೆ ಇದು ಬೆಳಗಾವಿ ಪಾಲಿಕೆ ಚುನಾವಣೆನಾ ಎನ್ನುವ ಅನುಮಾನ ಬರುವುದು ಸಹಜ.

ಕಳೆದ ದಿನ‌ ನಡೆದ ಸ್ಥಾಯಿ ಸಮಿತಿ ಚುನಾವಣೆ ಸಂದರ್ಭದಲ್ಲಿ ಹಿಂದಿನ‌ ಮೇಯರ್ ಆಯ್ಕೆ ಮೆಲುಕು ಹಾಕುವ ಪ್ರಸಂಗವೂ ಬಂದಿತು. ಆಗ ಶಾಸಕ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಅವರು ಈಗ ಮೇಯರ್ ಆದವರು ಲಕ್ಕೀ ಅಂದ್ರು

ಶಾಸಕ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಅವರು ಯಾರು ಮೇಯರ್ ಹುದ್ದೆಗೆ ಸ್ಪರ್ಧಿಸ ಬಯಸುವವರು ಅರ್ಜಿ ಕೊಡಿ ಎನ್ನುವ ಸಂದೇಶ ಕೊಡುತ್ತಾರೆ. ಆದರೆ ಯಾರೊಬ್ಬರೂ ಅರ್ಜಿ ಕೊಡುವ ಗೋಜಿಗೆ ಹೋಗಲ್ಲ. ಕೊನೆಗೆ ಇವರ ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿಯವರು ಒಂದೆಡೆ ಕುಳಿತು ಚರ್ಚೆ ಮಾಡಿ ಹೆಸರು ಘೋಷಣೆ ಮಾಡಿದರೆ ಅದೇ‌ ಅಂತಿಮ . ಅದರ ಬಗ್ಗೆ ಯಾರೂ ಅಪಸ್ವರ ಎತ್ತುವುದೇ ಇಲ್ಲ.

ಮೇಯರ್ ಆಗಬೇಕೆಂದವರು ಹಿಂದೆ ನಡೆದಂತೆ ಯಾವ ನಗರಸೇವಕರನ್ನೂ ಕರೆದುಕೊಂಡು ರೆಸಾರ್ಟ, ಪಾರ್ಟಿ ಅಂತ ಲಕ್ಷಗಟ್ಟಲೆ ಹಣ ಖರ್ಚು ಮಾಡುವ ಅವಶ್ಯಕತೆಯಿಲ್ಲ. ಹಣಕಾಸಿನ ವ್ಯವಹಾರ ಇಲ್ಲವೇ ಇಲ್ಲ ಪಕ್ಷಕ್ಕೆ ನಿಷ್ಠೆ ಹೊಂದಿರಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಯ್ಕೆ ಮಾಡಿದವರಿಗೆ ಗೌರವ ತಂದು ಕೊಡುವ ಕೆಲಸ ಮಾಡಬೇಕಿದೆ ಅಷ್ಡು‌ ಅರ್ಹತೆ ಇದ್ದರೆ ಆಯ್ಕೆ ಸುರಳಿತ

, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬೆಳಗಾವಿ ಮಹಾನಗರ ಪಾಲಿಕೆ ಆಡಳಿತಕ್ಕೆ ಜನ ಭೇಷ್ ಎನ್ನಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆಗಬೇಕು. ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೆಕ್ ಹಾಕಬೇಕು. ಒಟ್ಟಾರೆ ಬಿಜೆಪಿ ಆಡಳಿತಕ್ಕೆ ಜನ‌ ಫಿದಾ ಆಗಬೇಕು ಎನ್ನುವುದು ಶಾಸಕ ಅಭಯ ಪಾಟೀಲ ಮತ್ತು ಮಾಜಿ ಶಾಸಕ ಅನಿಲ ಬೆನಕೆ ಅವರ ಆಶಯ.

ಆದರೆ ಈಗ ಆ ರೀತಿಯ ಆಡಳಿತ ನಡೆಯುತ್ತಿದೆಯಾ? ಎನ್ನುವ ಬಹುದೊಡ್ಡ ಪ್ರಶ್ನೆ ಬೆಳಗಾವಿಗರನ್ನು ಅಷ್ಟೇ ಅಲ್ಲ ಸ್ವತಃ ಅವರನ್ನು ಆಯ್ಕೆ ಮಾಡಿದವರಿಗೆ ಕಾಡುತ್ತಿದೆ.

ಸಧ್ಯ ಏನಾಗಿದೆ ಅಂದರೆ, ಈಗ ಬಹುತೇಕ‌ ನಗರಸೇವಕರು ಸಣ್ಣಪುಟ್ಟ ಕೆಲಸಕ್ಕೂ ಕೂಡ ಶಾಸಕರ ಮೊರೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ

ಎಲ್ಲ‌ ನಗರಸೇವಕರೂ ನಮ್ಮವರು , ಸಮಸ್ಯೆ ಏನೆ ಇದ್ದರೂ ಅದನ್ನು ಜನರ ಹಿತದೃಷ್ಟಿಯಿಂದ ಬಗೆಹರಿಸಬೇಕು ಎನ್ನುವ ಮನೋಭಾವನೆ ಸಂಬಂಧಿಸಿದವರಲ್ಲಿ ಬರುತ್ತಿಲ್ಲ ಎನ್ನುವ ಮಾತಿದೆ. ಮೇಲಾಗಿ ಅನಗತ್ಯ ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಪಕ್ಷದ ವರ್ಚಸ್ಸನ್ನು ಕಡಿಮೆ ಮಾಡುವ ಕೆಲಸವೂ ನಡೆಯುತ್ತಿದೆ. ತಪ್ಪು ಮಾಡುವ ಅಧಿಕಾರಿಗಳ ವಿರುದ್ಧ ಚಾಟೀ ಬೀಸಬೇಕಾದವರು ಅವರ ಅಣತಿಯಂತೆ ಹೋಗುತ್ತಿರುವುದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಅದೇನೆ ಇರಲಿ. ಬೆಳಗಾವಿ ಮೇಯರ್ ಹುದ್ದೆ ಅಂದರೆ ಅದಕ್ಕೊಂದು ಗೌರವ ಇದೆ. ಅದರ ಜತೆಗೆ ಜನ ಮೆಚ್ಚುವ ರೀತಿಯಲ್ಲಿ ಆಡಳಿತ ನಡೆಸಿ ಬೆಳಗಾವಿಗೆ ಕೀರ್ತಿ ತರುವ ಕೆಲಸ ಆಗಬೇಕಿದೆ. ಕಾದು ನೋಡೊಣ

Leave a Reply

Your email address will not be published. Required fields are marked *

error: Content is protected !!