ಮಸೀದಿ ಧ್ವನಿ ವರ್ಧಕಕ್ಕೆ ಆಕ್ಷೇಪ
ಕಾಮುಕ ಯುವಕನ ಮೇಲೆ ಕಠಿಣ ಕ್ರಮಕ್ಕೆ ಪಟ್ಟು.
ಪ್ರಾರ್ಥನಾ ಸ್ಥಳದಲ್ಲಿರುವ ಧ್ವನಿ ವರ್ಧಕ ಪಪ್ಪಳ ಬಗ್ಗೆನೂ ಆಕ್ಷೇಪ
ಗೋ ಕಟ್ ಮಾಡಿ ಪರಿಸರ ಮಲೀನ ಮಾಡುತ್ತಾರೆ..
ಬೆಳಗಾವಿ.
ಕಡೋಲಿ ಗ್ರಾಮದ ಬುದ್ದಿಮಾಂದ್ಯ ಯುವತಿ ಮೇಲೆ ಅನ್ಯಕೋಮಿನ ವ್ಯಕ್ತಿಯೊಬ್ಬ ನಡೆಸಿದ ಎನ್ನಲಾದ ಅತ್ಯಾಚಾರ ಪ್ರಕರಣ . ಈಗ ಉರಿಯುವ ಬೆಂಕಿಯಲ್ಲಿ ತುಪ್ಪ ಸುರಿದಂತೆ ಆಗುತ್ತಿದೆ.

ಕಳೆದ ದಿನ ಅನ್ಯಕೋಮಿನ ಯುವಕನೊಬ್ಬ ಬುದ್ದಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ಪೊಲೂಸರು ಜೈಲಿಗೆ ಅಟ್ಟಿದ್ದಾರೆ.

ಆದರೆ ಕಡೋಲಿ ಗ್ರಾಮ ಪಂಚಾಯತಿಯವರು ಜಿಲ್ಲಾಧಿಕಾರಿಯವರಿಗೆ ನೀಡಿದ ಮನವಿ ಪತ್ರದಲ್ಲಿನ ಅಂಶವನ್ನು ಗಮನಿಸಿದರೆ ಪ್ರಕರಣದ ಗಂಭೀರತೆ ಅರ್ಥವಾಗುತ್ತದೆ.
ಮನವಿ ಪತ್ರದಲ್ಲಿ ಏನಿದೆ?
ಬೆಳಗಾವಿ ತಾಲ್ಲೂಕಿನ ಕಡೋಲಿ ಗ್ರಾಮದ ಚಂದ್ರಶೇಖರ ಆಜಾಥಗಲ್ಲಿ ವಾಸವಾಗಿರುವ ಅನ್ಯಕೋಮಿನ ಯುವಕ ಸಮೀರ ಅಬ್ಬಾಸ ಧಾಮಣೆಕರ ಎಂಬಾತನು 20 ವರ್ಷದ ಬುದ್ದಿಮಾಂದ್ಯ ಯುವತಿ ಒಬ್ಬಳೇ ಮನೆಯಲ್ಲಿರುವ ಸಂಧರ್ಭದಲ್ಲಿ ಅತ್ಯಾಚಾರ ಮಾಡಿರುತ್ತಾನೆ. ಆದ್ದರಿಂದ ಈತನ ವಿರುದ್ಧ ಕಟ್ಟು ನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕಡೋಲಿ ಗ್ರಾಮ ಪಂಚಾಯತಿಯವರು ನೀಡಿದ ಮನವಿ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ

ಸುಮಾರು ದಿನಗಳಿಂದ ಮುಸ್ಲಿಂ ಸಮಾಜದ ಯುವಕರು ಇಡೀ ರಾತ್ರಿ ಗಲ್ಲಿ-ಗಲ್ಲಿ ಮೂಲೆಯಲ್ಲಿ ಕುಳಿತುಕೊಂಡು ಹೆಣ್ಣು ಮಕ್ಕಳನ್ನು ನೋಡಿ ಚುಡಾಯಿಸುವುದು ಬೇರೆ ಬೇರೆ ಆವಾಜು ತೆಗೆಯುವುದು ಮಾಡುತ್ತಾರೆ. ಹಲವು ಬಾರಿ ಅವರಿಗೆ ತಿಳಿಸಿ ಹೇಳಿದರೂ ಸಹ ಕೇಳುತ್ತಿಲ್ಲ. ಮತ್ತೆ ತಮ್ಮದೇ ದಬರ್ಾರ ನಡೆಸುತ್ತಿದ್ದಾರೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಮುಸ್ಲಿಂ ಜಮಾತದ ಮಸೀದಿ ಹತ್ತಿರ ಶಾಲೆ ಹಾಗೂ ಮಠ ಇರುತ್ತದೆ. ಆದರೆ ಇವರು ಧಾಮರ್ಿಕ ವಿಧಿ ಎಂದು ಗೋ ಮಾಂಸದ ಅಡುಗೆ ಮಾಡುತ್ತಾರೆ. ಇದರಿಂದ ಎಲ್ಲರಿಗೂ ತೊಂದರೆ ಆಗುತ್ತಿದೆ ಎನ್ನುವ ಅಂಶವನ್ನು ಮನವಿ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಪ್ರಾರ್ಥನಾ ಸ್ಥಳದಲ್ಲಿ ಧ್ವನಿ ವರ್ಧಕ ಜೋರಾಗಿ ಹಚ್ಚಿ ಆಪರಿಸರದಲ್ಲಿರುವ ಹಿಂದೂ ಧರ್ಮದ ಮಠ ದೇವಸ್ಥಾನಗಳು ಹಾಗೂ ಕನ್ನಡ, ಮರಾಠಿ ಶಾಲೆ ಮಕ್ಕಳಿಗೆ ತುಂಬಾ ತೊಂದರೆ ಯಾಗುವ ರೀತಿಯಲ್ಲಿ ವರ್ತಿಸುತ್ತದ್ದಾರೆ.
ಈ ಮಸೀದಿಯಲ್ಲಿ ಅಪರಿಚಿತರು ಮೇಲಿಂದ ಮೇಲೆ ಬಂದು ಧಾಮರ್ಿಕ ವಿಧಿ ಅಂತಾ ಗೋ ಮಾಂಸದ ಅಡುಗೆ ಮಾಡಿ ಎಲ್ಲ ಪರಿಸರವನ್ನು ಕಲ್ಮಶಗೊಳಿಸುತ್ತಾರೆಂದು ದೂರಲಾಗಿದೆ. ಈ
ಕುರಿತಂತೆ ಗ್ರಾಮಸ್ಥರು ಹಾಗೂ ಪಂಚಾಯತಿ ಸದಸ್ಯರು ಹಲವಾರು ಬಾರಿ ಹೇಳಿದರೂ ಕೂಡಾ ಏನೂ ಪ್ರಯೋಜವಾಗಿಲ್ಲ ಎಂದು ದೂರಲಾಗಿದೆ.