ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ಮೂಡಲಗಿ:
ಭಗೀರಥ ಉಪ್ಪಾರ ಸಮಾಜಕ್ಕೆ ಸಿಗಬೇಕಿರುವ ಮೀಸಲಾತಿಯನ್ನು ದೊರಕಿಸಿಕೊಡುವ ಸಂಬಂಧ ರಾಜ್ಯವು ಕೇಂದ್ರ ಸಕರ್ಾರಕ್ಕೆ ಶಿಫಾರಸ್ಸು ಮಾಡಿದರೆ ಕೇಂದ್ರ ಮಟ್ಟದಲ್ಲಿ ಒತ್ತಡ ಹಾಕುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸೋಮವಾರದಂದು ಪಟ್ಟಣದ ಹೊರವಲಯದಲ್ಲಿರುವ ಮೂಡಲಗಿ ಕ್ರಾಸ್ನಲ್ಲಿ ನೂತನವಾಗಿ ನಿಮರ್ಿಸಿದ ಮಹಷರ್ಿ ಭಗೀರಥ ಮೂತರ್ಿಯನ್ನು ಅನಾವರಣಗೊಳಿಸಿ ನಂತರ ಸತ್ಯಭಾಮಾ ರುಕ್ಮೀಣಿ ಬಾಳಪ್ಪ ಹಂದಿಗುಂದ ಮಂಗಲ ಕಾಯರ್ಾಲಯದಲ್ಲಿ ಆಯೋಜಿಸಲಾಗಿದ್ದ ಮಹಷರ್ಿ ಉಪ್ಪಾರ ಸಮಾಜದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಗೀರಥ ಉಪ್ಪಾರ ಸಮಾಜದ ಬೇಡಿಕೆಗ:ಳ ಈಡೇರಿಕೆಗೆ ನಾವು ಸದಾ ಬದ್ಧರಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ತಿಳಿಸಿದರು.
ಯಾರು ಏಷ್ಟೇ ವದಂತಿಗಳನ್ನು ಹಬ್ಬಿಸುತ್ತಿದ್ದರೂ ಸಮಾಜಕ್ಕೆ ಸಿಗಬೇಕಿರುವ ಮೀಸಲಾತಿ ಹೋರಾಟದಲ್ಲಿ ಪ್ರಾಮಾಣಿಕವಾಗಿ ನಮ್ಮ ಕುಟುಂಬವು ಸ್ಪಂದಿಸುತ್ತಿದೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು,

ಎಲ್ಲ ಸಮಾಜಗಳಂತೆ ಈ ಸಮಾಜದವರ ಭಗೀರಥ ಜಯಂತಿಯನ್ನು ಅಚ್ಚುಕಟ್ಟಾಗಿ ಮಾಡಬೇಕು. ವ್ಯವಸ್ಥಿತವಾಗಿ ಸಂಘಟಿತರಾಗಿ ಅದ್ದೂರಿಯಾಗಿ ಮಾಡಬೇಕೆಂಬ ಆಸೆಯಿಂದ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಸಮಾಜ ಬಾಂಧವರನ್ನು ಒಗ್ಗೂಡಿಸಿ ಮೂಡಲಗಿಯಲ್ಲಿಂದು ದೊಡ್ಡ ಪ್ರಮಾಣದಲ್ಲಿ ಭಗೀರಥ ಮೂತರ್ಿಯನ್ನು ಅನಾವರಣ ಮಾಡಿದ್ದೇವೆ. ಇದೊಂದು ಈ ಸಮಾಜದ ಶಕ್ತಿ ಪ್ರದರ್ಶನವಾಗಿ ಹೊರಹೊಮ್ಮಿದೆ ಎಂದು ಬಣ್ಣಿಸಿದರು.
ಸಾನಿಧ್ಯ ವಹಿಸಿದ್ದ ಹೊಸದುರ್ಗ ಭಗೀರಥ ಪೀಠದ ಜಗದ್ಗುರು ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಆಶಿರ್ವಚನ ನೀಡಿ ಮೀಸಲಾತಿಗಾಗಿ ಕುಲಶಾಸ್ತ್ರದ ಅಧ್ಯಯನ ವರದಿ ಸಕರ್ಾರಕ್ಕೆ ಸಲ್ಲಿಸಿದ್ದು, ಕೇಂದ್ರ ಸಕರ್ಾರಕ್ಕೆ ವರದಿ ಶಿಫಾರಸ್ಸುಗೊಳ್ಳಬೇಕಿದೆ ಎಂದರು.
ಈ ದಿಸೆಯಲ್ಲಿ ಜಾರಕಿಹೊಳಿ ಕುಟುಂಬವು ನಮ್ಮ ಸಮಾಜಕ್ಕೆ ಬೆನ್ನೆಲಬಾಗಿ ನಿಂತಿದೆ. ಅದರಲ್ಲೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಮಗೆ ದೊಡ್ಡ ಆಸರೆಯಾಗಿ ನಿಂತಿದ್ದಾರೆಂದರು.
ಚಾಮರಾಜನಗರ ಶಾಸಕ ಹಾಗೂ ಭಗೀರಥ ಉಪ್ಪಾರ ಸಮಾಜದ ನಾಯಕ ಸಿ .ಪುಟ್ಟರಂಗಶೆಟ್ಟಿ ಮಾತನಾಡಿದರು, ಸಾನಿಧ್ಯವನ್ನು ಶಿವಬೋಧರಂಗ ಮಠದ ದತ್ತಾತ್ರೇಯ ಬೋಧ ಮಹಾಸ್ವಾಮಿಗಳು ವಹಿಸಿ ಆಶಿರ್ವಚನ ನೀಡಿದರು.
ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು, ಭಾಗೋಜಿಕೊಪ್ಪದ ಡಾ|| ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಕಟಕಭಾವಿಯ ಧರೇಶ್ವರ ಮಹಾಸ್ವಾಮಿಗಳು, ಉಪ್ಪಾರಹಟ್ಟಿಯ ನಾಗೇಶ್ವರ ಮಹಾಸ್ವಾಮಿಗಳು, ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಯುವ ಮುಖಂಡ ರಾಹುಲ ಜಾರಕಿಹೊಳಿ, ಸವರ್ೋತ್ತಮ ಜಾರಕಿಹೊಳಿ, ಮಾಜಿ ಸಚಿವ ಆರ್.ಎಮ್.ಪಾಟೀಲ, ಹಿರಿಯ ಸಹಕಾರಿ ಬಿ.ಆರ್.ಪಾಟೀಲ, ಜಿ.ಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಶ ಢವಳೇಶ್ವರ, ಜಿ.ಪಂ ಮಾಜಿ ಸದಸ್ಯರಾದ ಶಂಕರ ಬಿಲಕುಂದಿ, ರಾಜೇಂದ್ರ ಸಣ್ಣಕ್ಕಿ, ವಿಠ್ಠಲ ಸವದತ್ತಿ, ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ, ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ರಾಮಣ್ಣ ಹಂದಿಗುಂದ ಮುಂತಾದವರುಯ ಉಪಸ್ಥಿತರಿದ್ದರು.