ರಾಮದುರ್ಗ ಠಾಣೆಯಲ್ಲಿ FIR ದಾಖಲು
ಶೇರು ಹಣ ಸ್ವಂತಕ್ಕೆ ಬಳಸಿದ ಆರೋಪ..
ಮೂವರ ವಿರುದ್ಧ ದೂರು.
ಬೆಳಗಾವಿ
ರಾಮದುರ್ಗದ ಶಿವಸಾಗರ ಸಕ್ಕರೆ ಕಾರ್ಖಾನೆ ಯಿಂದ ಶೇರುದಾರರಿಗೆ ಬರಬೇಕಾಗಿದ್ದ ಸುಮಾರು 52 ಕೋಟಿ ರೂ ಗೂ ಅಧಿಕ ಮೊತ್ತದ ದುರುಪಯೋಗ ಮಾಡಿಕೊಂಡ ದೂರು ಈಗ ರಾಮದುರ್ಗ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ.


ಗಂಗಾರಾಮ ಭೀಮಪ್ಪಾ ಬಂಡಿವಡ್ಡರ ಎಂಬುವರು ಈ ಕುರಿತಂತೆ ಕಾರ್ಖಾನೆಯ ಮೂವರ ವಿರುದ್ಧ ನ್ಯಾಯಕೋರಿ ಪೊಲೀಸ್ ಠಾಣೆಗೆದೂರು ನೀಡಿದ್ದಾರೆ, ಪೊಲೀಸರು ಎಫ್ಐಆರ್ ದಾಖಲು ಮಾಡಿ ವಿಚಾರಣೆ ನಡೆಸಿದ್ದಾರೆ.

ಸಾಂಗಲಿಯ ರಾಜೇಂದ್ರ ಬಂಡೂಜಿ ಪಾಟೀಲ, ಬಾಗಲಕೋಟ ಜಿಲ್ಲೆಯ ಮುಧೋಳದ ಅರುಣ ಬಂಡೊಜಿ ಹವಾಲ್ದಾರ ಮತ್ತು ಚಿಕ್ಕೋಡಿ ತಾಲೂಕಿನ ಬೋರಗಾವಿಯ ಅಭಿನಂದನ್ ರಾವಸಾಹೇಬ ಪಾಟೀಲ ಎಂಬುವರ ವಿರುದ್ಧ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ,
ಆರೋಪಿತರು ಈ ಹಣವನ್ನು ತಮ್ಮ ಸ್ವಂತ ಲಾಭಕ್ಕೆ ಬಳಸಿಕೊಂಡಿದ್ದಾರೆಂದು ದೂರಲಾಗಿದೆ, ಪೊಲೀಸರು ಭಾರತೀಯ ದಂಡಸಂಹಿತೆ 1860 ಸಹ ಕಲಂ 120ಬಿ, 406, 420 ಮತ್ತು 34 ರನ್ವಯ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ,