ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ. ತಂದೆಗೆ ಮಗನ ಶವವನ್ನು ಕೈಚೀಲದಲ್ಲಿ ತುಂಬಿ ಕೊಟ್ಟರು.
ಆಸ್ಪತ್ರೆ ಯವರು ಮಾನವೀಯತೆ ಮರೆತರಾ? ಶವವನ್ನು ಒಂದು ಬಾಕ್ಸ್ ನಲ್ಲಿಟ್ಡುಕೊಡಬೇಕು ಎನ್ನುವ ಬುದ್ದಿ ಬರಲಿಲ್ಲವೇ?
ಬೆಂಕಿಯ ಕೆನ್ಮಾಲೆಯಲ್ಲಿ ಪುತ್ರನನ್ನು ಕಳೆದುಕೊಂಡ ತಂದೆಗೆ ಮರ್ಮಾಘಾತ.
ಬಡಪಾಯಿ ತಂದೆ ಪರಿಸ್ಥಿತಿ ಹೇಗಾಗಿರಬಹುದು? ಕೈಚೀಲದಲ್ಲಿ ಶವವಿಟ್ಡುಕೊಟ್ಟವರನ್ನು ಮನೆಗಟ್ಟುವ ಕೆಲಸ ಮಾಡಬೇಕು.
ಬೆಳಗಾವಿ
ಗಡಿನಾಡ ಬೆಳಗಾವಿಯಲ್ಲಿ ನಡೆಯಬಾರದ ದುರ್ಘಟನೆಯೊಂದು ನಡೆದು ಹೋಗಿದೆ. ಅಷ್ಟೇ ಅಲ್ಲ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಗೂ ಕುಂದಾನಗರಿ ಬೆಳಗಾವಿ ಸಾಕ್ಷಿಯಾಗಿದೆ.

ಮಗನ ಶವದ ಚೀಲವನ್ನು ಹಿಡಿದುಕೊಂಡು ನಿಂತ ತಂದೆ.
ಬೆಂಕಿಯ ಕೆನ್ನಾಲೆಗೆ ಬಿದ್ದ ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ಧೈರ್ಯ ಹೇಳಿ ಸಮಾಧಾನ ಪಡಿಸಬೇಕಾಗಿದ್ದ ಆಡಳಿತ ಯಂತ್ರ ಅವಮಾನವೀಯತೆಯಿಂದ ವರ್ತಿಸಿದೆ. ಇದರಿಂದ ಜಿಲ್ಲಾಧಿಕಾರಿಗಳು ಇಷ್ಡು ದಿನ ಫಡೆದಿದ್ದ ಖ್ಯಾತಿಗೆ ಅಪಖ್ಯಾತಿ ಬರುವ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆಯವರು ನಡೆದುಕೊಂಡರು.

ಸಿಂಪಲ್ ಆಗಿ ಹೇಳಬೇಕೆಂದರೆ, ನಾವಗೆ ಗ್ರಾಮದಲ್ಲಿ ಕಾರ್ಖಾನೆಗೆ ಹತ್ತಿಕೊಂಡ ಬೆಂಕಿಯಲ್ಲಿ ಯಲ್ಲಪ್ಪ ಮೃತಪಟ್ಟಿದ್ದ. ದೇಹ ಸಂಪೂರ್ಣ ಸುಟ್ಟು ಕರಕಲಾಗಿತ್ತು.
ಇಲ್ಲಿ ಶವವನ್ನು ಪಂಚನಾಮೆಗೆ ತೆಗೆದುಕೊಂಡು ಬಂದ ನಂತರ ಅದನ್ನು ಗೌರವಯುತವಾಗಿ ಒಂದು ಬಾಕ್ಸ್ ನಲ್ಲಿಟ್ಡು ಅಂಬ್ಯುಲೆನ್ಸ್ ಮೂಲಕ ಕಳಿಸಿಕೊಡುವ ವ್ಯವಸ್ಥೆ ಆಗಬೇಕಿತ್ತು
ಆದರೆ ಆಸ್ಪತ್ರೆಯಲ್ಲಿ ಆ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ತರಕಾರಿ ಚೀಲ ಕೊಟ್ಟಂತೆ ತಂದೆಯ ಕೈಗಿಡುವ ಕೆಲಸ ಮಾಡಲಾಯಿತು. ನಂತರ ಮುಗ್ಧ ತಂದೆ ಮಗನ ಶವದ ಕೈಚೀಲ ಹಿಡಿದುಕೊಂಡು ಬೇರೊಂದು ಕಾತಿನಲ್ಲಿವಾಪಸ್ಸು ಹೋಗಬೇಕಾಯಿತು.