ಬೆಳಗಾವಿ ದಕ್ಷಿಣ ಕ್ಷೇತ್ರದ ವಿದ್ಯಾರ್ಥಿಗಳಿಗೆ ವಿಶೇಷ ಆಮಂತ್ರಣ…!
ಬೆಳಗಾವಿ:
ಆ.೧೫ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ ೭೮ನೇ ವರ್ಷದ ಸ್ವಾತಂತ್ರö್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಇಬ್ಬರು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರೊಬ್ಬರು ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳಲಿದ್ದಾರೆ.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಸರಕಾರಿ ಸರಸ್ವತಿ ಪದವಿಪೂರ್ವ ವಿದ್ಯಾಲಯದ ಕೀರ್ತಿ ಜಟಗಣ್ಣವರ, ಸಂಜನಾ ಮುದಿಗೌಡರ ಹಾಗೂ ರಾಜ್ಯದಲ್ಲಿಯೇ ಒಬ್ಬರಾಗಿ ಇದೇ ವಿದ್ಯಾಲಯದ ಉಪನ್ಯಾಸಕರಾದ ಅನುಸೂಯಾ ಹಿರೇಮಠ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳುತ್ತಿದ್ದಾರೆ .
ಪ್ರಧಾನ ಮಂತ್ರಿಗಳ ಹಲವು ಅಭಿವೃದ್ದಿ ಮತ್ತು ಜನಪರ ಕಾರ್ಯಕ್ರಮಗಳಲ್ಲಿ ಒಂದಾಗಿರುವ
ಮೇರಿ ಮಾಠಿ-ಮೇರಾ ದೇಶ ಎಂಬ ವಿಶಿಷ್ಟ ಪ್ರಕಲ್ಪದಲ್ಲಿ ಅಮೃತವಾಟಿಕಾದ ನಿರ್ಮಾಣ, ಎನ್.ಎಸ್.ಎಸ್. ಶಿಬಿರ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಈ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸಕ್ರೀಯವಾಗಿ ಭಾಗವಹಿಸಿ ವಿಶೇಷ
ಸಾಧನೆಗೈದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಈ ಕುರಿತು ಸಂತಸ ಹಂಚಿಕೊಂಡಿರುವ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲರು, ಪ್ರಧಾನ ಮಂತ್ರಿಗಳ ವಿಶೇಷ ಆಮಂತ್ರಿತರಾಗಿ ಸರಕಾರಿ ಪದವಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಲಿದ್ದು ಜಿಲ್ಲೆಯ, ರಾಜ್ಯದ ಮತ್ತು ರಾಷ್ಟç ಮಟ್ಟದಲ್ಲಿ ನನ್ನ ಮತಕ್ಷೇತ್ರದ ಶಾಲೆಗೆ ಕೀರ್ತಿ ತಂದಿದ್ದಾರೆ.

ಕಾರ್ಯಕ್ರಮ ನಿಯೋಜಕರಾದ ಶ್ರೀಮತಿ ಅನುಸೂಯಾ ಹಿರೇಮಠ ಮತ್ತು ಸರಕಾರಿ ಸರಸ್ವತಿ ಶಾಲೆಯ ಎಲ್ಲ ಉಪನ್ಯಾಸಕರಿಗೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಹಾಗೂ ಇಲಾಖೆ ಸಿಬ್ಬಂದಿಗಳಿಗೆ ಅಭಿನಂದನೆ ತಿಳಿಸುವುದಾಗಿ ಹೇಳಿದ್ದಾರೆ.

ಅಲ್ಲದೇ, ಇಂತಹ ರಾಷ್ಟಿçÃಯ ಕಾರ್ಯಕ್ರಮಗಳಲ್ಲಿ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ
ಭಾಗವಹಿಸುವಂತಾಗಬೇಕು. ಈಗ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಲೆಂದು ಶಾಸಕ ಅಭಯ ಪಾಟೀಲ ಶುಭ ಹಾರೈಸಿದ್ದಾರೆ.

