
ಬೆಳಗಾವಿ:ಜಿಲ್ಲೆಯ ಇಂದಿನ ಸ್ವಾತಂತ್ರೋತ್ಸವಕ್ಕೆ ಪುಟ್ಟ ಹುಡುಗಿ ಅದ್ಲಿನ್ ಮಾರ್ಬನ್ಯಾಂಗ್ ಈ ವರ್ಷ ವಿಶೇಷ ಮೆರಗು ತಂದುಕೊಟ್ಟಿದ್ದಾಳೆ.
ಜಿಲ್ಲಾ ಕ್ರೀಡಾಂಗಣಕ್ಕೆ ತನ್ನ ತಂದೆಯ ಜೊತೆಗೆ ಡಿಐಜಿ ಸಮವಸ್ತ್ರ ಅಚ್ಚುಕಟ್ಟಾಗಿ ಧರಿಸಿಕೊಂಡು ಬಂದು ಇಡೀ ಜನಸಮೂಹದ ಗಮನ ಸೆಳೆದಿದ್ದಾಳೆ. ನಗರ ಪೊಲೀಸ್ ಆಯುಕ್ತ ಹಾಗೂ ಡಿಐಜಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರ ಪುತ್ರಿ ಅದ್ಲಿನ್ ಯತಾವತ್ತಾಗಿ ತನ್ನ ತಂದೆಯಂತೆಯೇ ‘ಡಿಐಜಿ ರ್ಯಾಂಕ್ ಡ್ರೆಸ್ ‘ ಧರಿಸಿಕೊಂಡು ಐಪಿಎಸ್ ಹುದ್ದೆಯ ಶಿಸ್ತು, ಗತ್ತು ಗೈರತ್ತು ಕಾಣಿಸುವಂತೆ ಮಾಡಿದ್ದು ನೋಡುಗರಲ್ಲಿ ಪ್ರೀತಿ ಹುಟ್ಟಿಸಿತು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಕೈ ಕುಲುಕಿ, ನಂತರ ಹೆಲ್ಮೇಟ್ ಜಾಗೃತಿ ಬೈಕ್ ರ್ಯಾಲಿಯಲ್ಲಿ ಡಿಸಿ & ಕಮಿಷ್ನರ್ ಜೊತೆಗೆ ರೈಡ್ ಮಾಡಿ ಅದಲಿನ್ ಜನತೆಯ ಹೃದಯ ಗೆದ್ದಿದ್ದಾಳೆ.
ಇಂದಿನ ಮಕ್ಕಳ ಉತ್ಸಾಹ ಮತ್ತು ಸಾರ್ವಜನಿಕವಾಗಿ ಅವರ ಪಾಲ್ಗೊಳ್ಳುವಿಕೆ ಗಮನಾರ್ಹವಾದದ್ದು. ಪರೀಕ್ಷೆಗಳ ರಾಜ ಎನ್ನಿಸಿಕೊಳ್ಳುವ ಸಿವಿಲ್ ಸೇವಾ ಪರೀಕ್ಷಾ ಆಕಾಂಕ್ಷಿಗಳಿಗೆ ಅದಲಿನ್ ಳ ನಡೆ ರೋಮಾಂಚನಗೊಳಿಸುವಂತಿದೆ.