`ಹಲಾಲ’ ಮುಕ್ತ ಗಣೇಶೋತ್ಸವಕ್ಕೆ ಕರೆ
ಹಲಾಲ್ ಕಟ್ ಮಾಡೊವರಿಂದ ಗಣೇಶ ಪೂಜಾ ಸಾಮಗ್ರಿ ಖರೀದಿಸಬೇಡಿ.
ಬೆಳಗಾವಿಯಲ್ಲಿ ಪ್ರಮೋದ ಮುತಾಲಿಕ ಹೇಳಿಕೆ.
ಬೆಳಗಾವಿ:
ಗಣೇಶ ಹಬ್ಬದಲ್ಲಿ ಹೂವು, ಹಣ್ಣು, ಕಾಯಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಹಲಾಲ್ ಕಟ್ ಮಾಡುವವರ ಕಡೆಯಿಂದ ಖರೀದಿಸಬಾರದು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ ಕರೆ ನೀಡಿದ್ದಾರೆ.


ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋ ಹಂತಕರು, ಗೋ ಭಕ್ಷಕರಿಂದ ಮಾರಾಟ ಮಾಡುವ ವಸ್ತು ಅಪವಿತ್ರವಾಗಿರುತ್ತದೆ. ಹೀಗಾಗಿ ಅಂತಹವರಿಂದ ಯಾವುದೇ ರೀತಿಯ ವಸ್ತುಗಳನ್ನು ಖರೀದಿಸಬಾರದು ಎಂದು ಅವರು ಹೇಳಿದರು.
ಇದು ಪಾಕಿಸ್ತಾನ ಅಲ್ಲ..ಹುಷಾರ್.
https://youtu.be/2Cl_E0uJZsg?si=LFZukI6L8crSaf4k