ಬೆಳಗಾವಿ. ಕನರ್ಾಟಕವನ್ನು ತಾಲೀಬಾನ್, ಬಾಂಗ್ಲಾ ಆಗಲು ಬಿಡಬೇಡಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ ರಾಜ್ಯ ಸರ್ಕಾರ ವನ್ನು ಆಗ್ರಹಿಸಿದರು, ನಗರದಲ್ಲಿಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು,
ಈದ್ ಮಿಲಾದ್ ಮೆರವಣಿಗೆ ಮೇಲೆ ಎಲ್ಲೂ ಕಲ್ಲು ತೂರಾಟ ನಡೆದಿಲ್ಲ. ನಡೆಯಲೂ ಬಾರದು, ಆದರೆ ಗಣೇಶೋತ್ಸವ ಮೆರವಣಿಗೆ ಮೇಲೆ ನಡೆದ ಕಲ್ಲು ತೂರಾಟ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಸಣ್ಣ ವಿಷಯ ಅನಿಸುತ್ತದೆ ಎಂದು ವ್ಯಂಗ್ಯವಾಡಿದರು,. ನೊಂದವರಿಗೆ ಪರಿಹಾರ ಕೊಡಿ. ಬಂಧನ ಮಾಡಿದವರನ್ನು ಬಿಡುಗಡೆ ಮಾಡಿಎಂದು ಹೇಳಿದ ಅವರು, ಮುಗ್ಧರ ಮೇಲೆ ಹಾಕಿರುವ ಮೊಕದ್ದಮೆಯನ್ನು ಹಿಂದೆ ಪಡೆಯಬೇಕು ಎಂದು ಅವರು ಆಗ್ರಹಿಸಿದರು,
ನಾಗಮಂಗಲದಲ್ಲಿ ಗಣೇಶ ಮೂರ್ತಿವಿಸರ್ಜನೆ ವೇಳೆ ಸಂಭವಿಸಿದ ಗಲಭೆ ಆತಂಕದ ವಾತಾವರಣಕ್ಕೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಹಿಂದೂ ಧಾರ್ಮಿಕ ಚಟುವಟಿಕೆಗಳನ್ನು ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸುನೀಲ್ ಕುಮಾರ ಹೇಳಿದರು,
ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಮೇಲೆ ಕೇಸ್ ಹಾಕಿ ಬಂಧಿಸಲಾಗಿದೆ. ಆದರೆ, ಮಸೀದಿ ಮಂಡಳಿಯ ಮೇಲೆ ಯಾಕೆ ಕೇಸ್ ಹಾಕಿಲ್ಲ. ಮಸೀದಿಯಿಂದ ಕಲ್ಲು ತೂರಲಾಗಿದೆ ಎಂದು ಗೊತ್ತಾದ ಮೇಲೂ ಮೌನ ವಹಿಸಿರುವುದು ದುರಂತ ಎಂದು ಅವರು ದೂರಿದರು
ಗೃಹ ಇಲಾಖೆ ಎಸ್ ಡಿಪಿಐ ಕಪಿಮುಷ್ಠಿಯಲ್ಲಿ ಸಿಲುಕಿದೆ ಎಂಬ ಅನುಮಾನ ಮೂಡುತ್ತಿದೆ ಎಂದ ಅವರು, ಗಣೇಶ ವಿಸರ್ಜನಾ ಮೆರವಣಿಗೆಯ ಮೇಲೆ ಕಲ್ಲು ತೂರಾಟ, ಚಪ್ಪಲಿ ಎಸೆತ ಮಾಡಲಾಗಿದೆ. ಅಷ್ಟೇ ಅಲ್ಲ ಹಿಂದೂ ಸಮಾಜದವರ ಅಂಗಡಿಗಳನ್ನೇ ಗುರಿಯಾಗಿಸಿಕೊಂಡು ಬೆಂಕಿಯಿಡಲಾಗಿದೆ. ಹೀಗಾಗಿ ಇದು ಪೂರ್ವ ನಿಯೋಜಿತ ಕೃತ್ಯ ಎಂದು ಎಂಥವರಿಗೂ ಗೊತ್ತಾಗುತ್ತದೆ ಎಂದರು. ಆದರೆ, ಗೃಹ ಸಚಿವರು ಇದು ಸಣ್ಣ ಘಟನೆ ಎಂದು ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.