Headlines

IN NEWS ದಿಂದ ಗಣೇಶ ವೈಭವಃ ನೇರಪ್ರಸಾರ

oplus_2

ಗಣೇಶ ಮೆರವಣಿಗೆ ನೇರ ಪ್ರಸಾರ,

22 ವರ್ಷದಿಂದ ನೇರಪ್ರಸಾರ ಮಾಡುತ್ತಿರುವ ಇನ್ ನ್ಯೂಜ್.

ಗೋವಾ, ಮಹಾರಾಷ್ಟ್ರ, ಕರ್ನಾಟಕದಲ್ಲೂ ಪ್ರಸಾರ ನೋಡಬಹುದು .

ಗಣೇಶ ಮೆರವಣಿಗೆ ಖಡಕ್ ಬಂದೋಬಸ್ತ್. ಬೆಳಗಾವಿ ಮೇಲೆ 370 ಹದ್ದಿನ ಕಣ್ಣು.

ಮಾರ್ಗ ಬದಲಾಯಿಸಿದ ಖಾಕಿ.


ಬೆಳಗಾವಿ.
ಹನ್ನೊಂದು ದಿನಗಳ ಕಾಲ ಗಡಿನಾಡ ಬೆಳಗಾವಿಯಲ್ಲಿ ರಾರಾಜಿಸಿದ್ದ ಗಣೇಶನ ಮೆರವಣಿಗೆ ಸಂಭ್ರಮವನ್ನು ಮನೆಯಲ್ಲಿಯೇ ಕುಳಿತು ಕುಟುಂಬ ಸಮೇತ ವೀಕ್ಷಣೆ ಮಾಡುವ ಅವಕಾಶವನ್ನು ಮೆಟ್ರೋಕಾಸ್ಟ್ ಇನ್ ನ್ಯೂಜ್ ವ್ಯವಸ್ಥೆ ಮಾಡಿದೆ.
ಕಳೆದ 22 ವರ್ಷಗಳಿಂದ ಗಣೇಶ ಮೆರವಣಿಗೆ ಟಷ್ಟೇ ಅಲ್ಲ ಇನ್ನಿತರ ಉತ್ಸವದಸಂಭ್ರಮವನ್ನು ನೇರಪ್ರಸಾರ ಮಾಡುವ ನಿಟ್ಟಿನಲ್ಲಿ ಇನ್ ನ್ಯೂಜ್ ಕೆಲಸ ಮಾಡುತ್ತಿದೆ.
ಅಷ್ಟೇ ಅಲ್ಲ ಕನ್ನಡ, ಮರಾಠಿ ಭಾಷೆಯಲ್ಲಿ ವೀಕ್ಷಕರಿಗೆ ಮೆರವಣಿಗೆಯ ಸಂಭ್ರಮವನ್ನು ವಿವರಿಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ,
ಬೆಳಗಾವಿ ಅಷ್ಟೇ ಅಲ್ಲ ಉತ್ತರ ಕನರ್ಾಟಕ ಜೊತೆಗೆ ದಾವಣಗೆರೆ, ಕಲಬುಗರ್ಿ, ಬೀದರ, ರಾಯಚೂರ ದಲ್ಲಿಯೂ ಇದರ ಪ್ರಸಾರ ನೊಡಲು ಸಿಗಲಿದೆ. ಇದರ ಜೊತೆಗೆ ಗೋವಾ, ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಇನ್ ನ್ಯೂಜ್ ಅಪಾರ ವೀಕ್ಷಕರನ್ನು ಹೊಂದಿದೆ.
ಬೆಳಗಾವಿಯ ಧರ್ಮವೀರ ಸಂಭಾಜಿಚೌಕ್ದಲ್ಲಿ ನೇರ ಪ್ರಸಾರಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಇನ್ ನ್ಯೂಜನ ಸಂಪಾದಕ ರಾಜಶೇಖರ ಪಾಟೀಲ ತಿಳಿಸಿದ್ದಾರೆ.

ಬೆಳಗಾವಿ ಬೋಗಾರವೇಸ್ ವೃತ್ತ..

ಖಡಕ್ ಬಂದೋಬಸ್ತ್
ವಿಘ್ನನಿವಾರಕನ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ರೀತಿಯ ಕಿರಿಕಿರಿ ಆಗಬಾರದು ಎನ್ನುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಅವರು ಖಡಕ್ ಬಂದೋಬಸ್ತಿ ಮಾಡಿದ್ದಾರೆ


ಎಸ್ಪಿ ಕೇಡರ್ನ 7 ಜನ ಅಧಿಕಾರಿಗಳ ಜೊತೆಗೆ 35 ಡಿಎಸ್ಪಿ, 110 ಸಿಪಿಐ, 130 ಪಿಎಸ್ಐ, ಪ3200 ಪೇದೆಗಳು, 562 ಹೋಮಗಾರ್ಡ, 10 ಕೆಎಸ್ಆರ್ಪಿ, 8 ಸಿಆರ್ಪಿಎಫ್ ಬಂದೋಬಸ್ತಿಯಲ್ಲಿರುತ್ತಾರೆ.

ಇದರ ಜೊತೆಗೆ ಈಗಿದ್ದ ಸಿಸಿಟಿವಿಗಳ ಜೊತೆಗೆ ನಗರದ ಪ್ರತಿಯೊಂದು ಮೂಲೆ ಮೂಲೆಗಳಲ್ಲಿ ಪ್ರತಿಯೊಂದನ್ನೂ ಹಿಡಿದಿಟ್ಟುಕೊಳ್ಳಲು 370 ಸಿಸಿಟಿವಿಗಳನ್ನು ಕೂಡಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಪತ್ರಿಕೆಗೆ ತಿಳಿಸಿದ್ದಾರೆ.

ಮೆರವಣಿಗೆ ಎಲ್ಲಿಂದ ಆರಂಭ
ಬೆಳಗಾವಿ ನಗರದಲ್ಲಿ ಸಾರ್ವಜನಿಕ ಶ್ರೀ. ಗಣೇಶ ಮೂತರ್ಿಗಳ ಅಂತಿಮ ದಿನದ ಮೆರವಣಿಗೆಯು ನರಗುಂದಕರ ಭಾವೆ ಚೌಕದಿಂದ ಪ್ರಾರಂಭವಾಗುತ್ತದೆ..


ನಂತರ ಅದು ಮಾರುತಿ ಗಲ್ಲಿ, ಹುತಾತ್ಮ ಚೌಕ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಯಂಡೆಖೂಟ, ಧರ್ಮವೀರ ಸಂಭಾಜಿ ಚೌಕ (ಬೋಗಾರವೇಸ್), ರಾಮಲಿಂಗಖಿಂಡ ಗಲ್ಲಿ ರಸ್ತೆ, ಟಿಳಕಚೌಕ, ಹೇಮುಕಲಾನಿ ಚೌಕ (ಶಿವಭವನ), ಶನಿ ಮಂದಿರ, ಕಪಿಲೇಶ್ವರ ಫ್ಲೈ ಓವರ ರಸ್ತೆ, ರೇಣುಕಾ ಹೊಟೇಲ್ ಕ್ರಾಸ್ ಮೂಲಕ ಕಪಿಲೇಶ್ವರ ಮಂದಿರ ಬಳಿ ಮುಕ್ತಾಯಗೊಳ್ಳಲಿದೆ.
ಈ ಮಾರ್ಗದ ಮೂಲಕ ಸಂಚರಿಸಿ..!
ನಾಳೆ ದಿ. 17 ರಂದು ಮಧ್ಯಾಹ್ನ 2 ರಿಂದ ಮೆರವಣಿಗೆ ಮುಕ್ತಾಯದವರೆಗೆ ವಾಹನ ಸವಾರರು ಈ ಮಾರ್ಗದಲ್ಲಿಯೇ ಸಂಚಾರ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಅಶೋಕ ಪಿಲ್ಲರ ವೃತ್ತ-ಆರ್ಟಿಓ-ಚನ್ನಮ್ಮ ಸರ್ಕಲ್ ಮಾರ್ಗವಾಗಿ ಕಾಲೇಜ್ ರಸ್ತೆ ಮುಖಾಂತರ ಖಾನಾಪೂರ ಕಡಗೆ ಸಾಗುವ ವಾಹನಗಳು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹಳೆ ಪಿಬಿ ರಸ್ತೆ ಮಾರ್ಗವಾಗಿ ಕೃಷ್ಣದೇವರಾಯ (ಕೊಲ್ಹಾಪುರ) ವೃತ್ತ, ವಾಯ್-ಜಂಕ್ಷಣ, ಸದಾಶಿವ ನಗರ ಲಕ್ಷ್ಮೀ ಕಾಂಪ್ಲೆಕ್ಸ್, ವಿಶ್ವೇಶ್ವರಯ್ಯ ನಗರ, ಬಾಚಿ ಕ್ರಾಸ್, ಗಾಂಧಿ ಸರ್ಕಲ್ (ಅರಗನ ತಲಾಬ), ಶೌರ್ಯ ಚೌಕ (ಮಿಲ್ಟ್ರಿ ಆಸ್ಪತ್ರೆ ಸರ್ಕಲ್), ಕೇಂದ್ರಿಯ ವಿದ್ಯಾಲಯ ನಂ.2, ಶರ್ಕತ್ ಪಾರ್ಕ, ಗ್ಲೋಬ್ ಥಿಯೇಟರ್ ಸರ್ಕಲ್ ಮೂಲಕ ಖಾನಾಪೂರ ರಸ್ತೆಗೆ ಸೇರಿ ಮುಂದೆ ಸಾಗಬೇಕು.
ಖಾನಾಪೂರ ಕಡೆಯಿಂದ ನಗರ ಭಾಗದಿಂದ ರಾಷ್ಟ್ರೀಯ ಹೆದ್ದಾರಿಗೆ ಸೇರುವ ಮತ್ತು ಗೋಗಟೆ ಸರ್ಕಲ್ ಕಡೆಯಿಂದ ರೇಲ್ವೆ ಸ್ಟೇಶನ, ಸ್ಟೇಶನ್ ರಸ್ತೆ, ಹೆಡ್ ಪೋಸ್ಟ್ ಆಫೀಸ್ ಸರ್ಕಲ್ ಮೂಲಕ ಶನಿ ಮಂದಿರ ಕಡೆಗೆ ಸಂಚರಿಸುವ ವಾಹನಗಳು ಗ್ಲೋಬ್ ಥಿಯೇಟರ್ ಸರ್ಕಲ್ದಲ್ಲಿ ಎಡತಿರುವ ಪಡೆದುಕೊಂಡು ಶರ್ಕತ್ ಪಾರ್ಕ, ಕೇಂದ್ರಿಯ ವಿದ್ಯಾಲಯ ನಂ.2, ಶೌರ್ಯ ಚೌಕ (ಮಿಲ್ಟ್ರಿ ಆಸ್ಪತ್ರೆ ಸರ್ಕಲ್), ಗಾಂಧಿ ಸರ್ಕಲ್ (ಅರಗನ ತಲಾಬ), ಗಣೇಶ ಮಂದಿರ, ಹಿಂಡಲಗಾ ರಸ್ತೆ, ಹನುಮಾನ ನಗರ ಡಬಲ್ ರೋಡ್ ಮೂಲಕ ಬಾಕ್ಸಾಯಿಟ್ ರಸ್ತೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಸೇರಿ ಸಂಚರಿಸಬೇಕು.
ಜೀಜಾಮಾತಾ ಸರ್ಕಲ್ದಿಂದ ದೇಶಪಾಂಡೆ ಪೆಟ್ರೋಲ್ ಪಂಪ್, ನರಗುಂದಕರ ಭಾವೆ ಚೌಕ, ಕಂಬಳಿ ಖೂಟ, ಪಿಂಪಳ ಕಟ್ಟಾ, ಪಾಟೀಲ ಗಲ್ಲಿ ಕಡೆಗೆ ಸಂಚರಿಸುವ ವಾಹನಗಳು ಜೀಜಾಮಾತಾ ಸರ್ಕಲ್ದಿಂದ ನೇರವಾಗಿ ಕೇಂದ್ರ ಬಸ್ ನಿಲ್ದಾಣ/ಪ್ಯಾಟಸನ್ ಶೋ ರೂಮ್, ಹಳೆ ಪಿಬಿ ರಸ್ತೆ ಮೂಲಕ ಮುಂದೆ ಸಂಚರಿಸಬೇಕು.
ನಾಥಪೈ ಸರ್ಕಲ್ ಕಡೆಯಿಂದ ಬ್ಯಾಂಕ ಆಫ್ ಇಂಡಿಯಾ, ಎಸ್ಪಿಎಮ್ ರಸ್ತೆ ಮಾರ್ಗವಾಗಿ ಕಪಿಲೇಶ್ವರ ಫ್ಲೈ ಓವರ್ ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಬ್ಯಾಂಕ್ ಆಫ್ ಇಂಡಿಯಾ ವೃತ್ತದಿಂದ ಹಳೆ ಪಿಬಿ ರಸ್ತೆ ಸೇರಿ ಮುಂದೆ ಸಂಚರಿಸಬೇಕು.
ಹಳೆ ಪಿಬಿ ರಸ್ತೆ, ವ್ಹಿ.ಆರ್.ಎಲ್ ಲಾಜಿಸ್ಟಿಕ್, ಭಾತಕಾಂಡೆ ಸ್ಕೂಲ್ ಮಾರ್ಗವಾಗಿ ಕಪಿಲೇಶ್ವರ ಫ್ಲೈ ಓವರ್ ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಸಂಭಾಜಿ ರಸ್ತೆ ಬಳಸಿಕೊಂಡು ಬಸವೇಶ್ವರ ವೃತ್ತ ಖಾಸಬಾಗ, ನಾಥಪೈ ಸರ್ಕಲ್ ಮೂಲಕ ಸಂಚರಿಸಬೇಕು.
ಹಳೆ ಪಿಬಿ ರಸ್ತೆ, ಯಶ್ ಆಸ್ಪತ್ರೆ, ಮಹಾದ್ವಾರ ರಸ್ತೆ, ಕಪಿಲೇಶ್ವರ ಮಂದಿರ ಕಡೆಗೆ ಸಾಗುವ ವಾಹನಗಳು ಯಶ್ ಆಸ್ಪತ್ರೆ ಹತ್ತಿರ ಎಡ ತಿರುವು ಪಡೆದುಕೊಂಡು ವ್ಹಿ.ಆರ್.ಎಲ್ ಲಾಜಿಸ್ಟಿಕ್ ಮೂಲಕ ಹಳೆ ಪಿಬಿ ರಸ್ತೆ ಸೇರಿ ಮುಂದೆ ಸಂಚರಿಸುವುದು.
ಗೂಡ್ಸ್ ಶೆಡ್ ರಸ್ತೆ ಮೂಲಕ ಕಪಿಲೇಶ್ವರ ಫ್ಲೈ ಓವರ್ ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಎಸ್ಪಿಎಮ್ ರಸ್ತೆ ಕಡೆಗೆ ಸಂಚರಿಸದೇ ಮರಾಠಾ ಮಂದಿರ, ಗೋವಾ ವೇಸ್ ಸರ್ಕಲ್ ಕಡೆಗೆ ಸಂಚರಿಸುವುದು.
ಮೆರವಣಿಗೆ ಮಾರ್ಗದಲ್ಲಿ ಎರಡು ಕ್ಯಾರೇಜ್ ವೇ ಇದ್ದ ಕಡೆಗಳಲ್ಲಿಒಂದು ಮಾರ್ಗವನ್ನು ಹಾಗೂ ಒಂದು ಕ್ಯಾರೇಜ್ ವೇ ಇದ್ದ ರಸ್ತೆಯನ್ನು ಸಂಪೂರ್ಣವಾಗಿ ಮೆರವಣಿಗೆಗೆ ಉಪಯೋಗಿಸಲಾಗುತ್ತಿದೆ. ಎಂದು ಆಯುಕ್ತರು ತಿಳಿಸಿದ್ದಾರೆ.
ಮೆರವಣಿಗೆ ಮುಕ್ತಾಯದವರೆಗೆ ಎಲ್ಲ ದಿಕ್ಕುಗಳಿಂದ ನಗರ ಪ್ರವೇಶಿಸುವ ಭಾರಿ ವಾಹನಗಳನ್ನು ನಗರದಲ್ಲಿ ಸಂಚರಿಸುವುದನ್ನು ನಿಷೇಧಿಸಲಾಗಿದೆ.
ಚನ್ನಮ್ಮ ವೃತ್ತದಿಂದ ಮೆರವಣಿಗೆ ಸೇರುವ ಮಾರ್ಗ ಕಾಕತಿವೇಸ್ ರಸ್ತೆ, ಶನಿವಾರ ಖೂಟ, ಗಣಪತಿ ಗಲ್ಲಿ ರಸ್ತೆ, ಕಂಬಳಿ ಖೂಟ ಹಾಗೂ ಮುಖ್ಯ ಮೆರವಣೆಗೆ ಸಾಗುವ ಮಾರ್ಗವಾದ ನರಗುಂದಕರ ಭಾವೆ ಚೌಕ, ಮಾರುತಿ ಗಲ್ಲಿ, ಹುತಾತ್ಮ ಚೌಕ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಯಂಡೇಖೂಟ, ಧರ್ಮವೀರ ಸಂಭಾಜಿ ಚೌಕ (ಬೋಗಾರವೇಸ್), ರಾಮಲಿಂಗಖಿಂಡ ಗಲ್ಲಿ ರಸ್ತೆ, ಟಿಳಕಚೌಕ, ಹೇಮುಕಾಲನಿ ಚೌಕ, ಶನಿಮಂದಿರ, ಕಪಿಲೇಶ್ವರ ಫ್ಲೈ ಓವರ್ ರಸ್ತೆ, ಕಪಿಲೇಶ್ವರ ಮಂದಿರದ ಎರಡೂ ಬದಿಯ ರಸ್ತೆಗಳಲ್ಲಿ ಮತ್ತು ಕ್ಯಾಂಪ್ ಪ್ರದೇಶ ವ್ಯಾಪ್ತಿಯ ಹ್ಯಾವಲಾಕ್ ರಸ್ತೆ, ಕ್ಯಾಟಲ್ ರೋಡ್, ಯಂಡೇಖೂಟ ದಿಂದ ದೇಶಪಾಂಡೆ ಖೂಟ ಹಾಗೂ ಪವನ ಹೊಟೇಲ್ ವರೆಗಿನ ರಸ್ತೆಗಳಲ್ಲಿ ಮೆರವಣಿಗೆ ಮುಕ್ತಾಯದವರೆಗೆ ಎಲ್ಲ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!