Headlines

ಕತ್ತಿಗೆ ಕೈ ಕೊಟ್ಟ ಡಿಸಿಸಿ ಬ್ಯಾಂಕ್..!

ನೂತನ ಅದ್ಯಕ್ಷರ ಆಯ್ಕೆ ಬಾಲಚಂದ್ರ ಜಾರಕಿಹೊಳಿ, ಲಕ್ಷ್ಮಣ ಸವದಿ‌ ಹೆಗಲಿಗೆ .

ಸ್ವಯಂಕೃತ ಅಪರಾಧದಿಂದಲೇ ಅಧಿಕಾರ ಕಳೆದುಕೊಂಡರಾ ಕತ್ತಿ.

ಬೆಳಗಾವಿ.

ಬಹುತೇಕ ತಮ್ಮ ಒರಟು ಮತ್ತು‌ನೇರ ಮಾತಿನಿಂದ ಎಲ್ಲರ‌ ಮುನಿಸಿಗೆ ಕಾರಣವಾಗಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಈಗ ಆ ಅಧ್ಯಕ್ಷ ಸ್ಥಾನಕ್ಕೂ ಕುತ್ತು ತಂದುಕೊಂಡಿದ್ದಾರೆ.

ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ತಪ್ಪಿಸಿ ಕೊಂಡಿದ್ದ ರಮೇಶ ಕತ್ತಿ, ಪಕ್ಷದ ಅಧೀಕೃತ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಸೋಲಿಗೂ ಕಾರಣಚಾಗಿದ್ದರು.

ಈಗ ಡಿಸಿಸಿ ಬ್ಯಾಂಕನ ಹದಿನಾಲ್ಕು ಜನ ನಿರ್ದೇಶಕರು ಒಗ್ಗಟ್ಟಾಗಿ ರಮೇಶ ಕತ್ತಿ ವಿರುದ್ಧ ಸಿಡಿದೆದ್ದಿದ್ದರು. ಡಿಸಿಸಿ‌ ಬ್ಯಾಂಕ್ ಆಡಳಿತದಲ್ಲಿ ಏಕಚಕ್ರಾಧಿಪತ್ಯ ಸಾಧಿಸುತ್ತಿದ್ದ ಇವರ ವಿರುದ್ಧ ಬಹುತೇಕರು

ಅಸಮಾಧಾನಗೊಂಡಿದ್ದರು. ಅಷ್ಟೆ ಅಲ್ಲ ತಮ್ಮ ಸೋಲಿಗೆ ಕಾರಣವಾಗಿದ್ದ ರಮೇಶ ಕತ್ತಿ ವಿರುದ್ಧ ಜೊಕ್ಲೆ ದಂಪತಿಗಳು ಮುನಿಸಿಕೊಂಡಿದ್ದರು‌.ಈಗ ನೂತನ ಅಧ್ಯಕ್ಷರ ಆಯ್ಕೆ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಮತ್ತು‌ ಮಾಜಿ ಡಿಸಿಎಂ ಲಕ್ಷ್ಮಣ‌ ಸವದಿ ಹೆಗಲಿಗೆ ಬಿದ್ದಿದೆ ಎಂದು ಗೊತ್ತಾಗಿದರ.

Leave a Reply

Your email address will not be published. Required fields are marked *

error: Content is protected !!