ಹುದಲಿ ಗ್ರಾಮದ ನಂದಾ ಬಾಪುಗೌಡಾ ಪಾಟೀಲ (೫೩) ಅವರು ಇಂದು ಶನಿವಾರ ಹೃದಯಘಾತದಿಂದ ನಿಧನರಾದರು.

ಮೃತರು ಹುದಲಿ ಗ್ರಾಮದ ಖ್ಯಾತ ಗರದಿ ಗಮ್ಮತ್ ಸಾಮಾಜಿಕ ಜಾಲ ತಾಣದ ಪ್ರಧಾನ ಸಂಪಾದಕ ಬಾಪುಗೌಡಾ ಪಾಟೀಲ ಅವರ ಪತ್ನಿಯಾಗಿದ್ದರು. ಇವರ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ನಿವೃತ್ತ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ, ಮಹಾಂತೇಶ ಕವಟಗಿಮಠ ಇನ್ನುಳಿದವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮೃತರು ಪತಿ, ಓರ್ವ ಪುತ್ರ, ಸೇರಿದಂತೆ ಅಪಾರ ಬಳಗ ಅಗಲಿದ್ದಾರೆ.