ಬೆಳಗಾವಿ:
ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಗೆ ೨೦ ವರ್ಷಗಳ
ಕಠಿಣ ಶಿಕ್ಷೆ ಹಾಗೂ ೧೦ ಸಾವಿರ ರೂ. ಗಳ ದಂಡ ವಿಧಿಸಿ ಬೆಳಗಾವಿ ಜಿಲ್ಲಾ ಪೋಕ್ಸೋ
ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.
೨೦೧೭ರಲ್ಲಿ ಕಿತ್ತೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.
ಗಂಗಪ್ಪಾ ಕಲ್ಲಪ್ಪಾ ಕೋಲಕಾರ ಸಾವತಿಗಡೋಳ್ಳಿ ತಾ ಕಿತ್ತೂರ ಶಿಕ್ಷೆಗೊಳಗಾದ ಆರೋಪಿ.
ಪ್ರೀತಿಸುವುದಾಗಿ ಹೇಳಿ ಮದುವೆಯಾಗುವ ಭರವಸೆ ನೀಡಿದ ಆರೋಪಿ ತನ್ನ ಮೋಟಾರ್ ಬೈಕಿನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಹಾರುಗೊಪ್ಪ, ಮಹಾರಾಷ್ಟ್ರದ ತಾಸಂಗಾದ, ಖಾನಾಪುರ, ಹುಬ್ಬಳ್ಳಿ ಹೀಗೆ ವಿವಿಧ ಸ್ಥಳಕ್ಕೆ ಕರೆದೊಯ್ದು ಒತ್ತಾಯದಿಂದ
ಅತ್ಯಾಚಾರ ಎಸಗಿದ್ದಾಗಿ ಪ್ರಕರಣ ದಾಖಲಾಗಿತ್ತು.

ನಂತರ ಹುಬ್ಬಳ್ಳಿಯ ನೆಲಮಹಡಿಯ ಪುಟ್ಟ
ಕೊಠಡಿಯಲ್ಲಿ ಕೂಡಿಹಾಕಿದ್ದ ಬಾಲಕಿಯನ್ನು ಪೊಲೀಸರು ಬಿಡುಗಡೆಗೊಳಿಸಿ ತಂದಿದ್ದರು.
ತನಿಖಾಧಿಕಾರಿ ರಾಘವೇಂದ್ರ ಹವಾಲ್ದಾರ ಅವರು ವಿಚಾರಣೆ ನಡೆಸಿ ಹೆಚ್ಚುವರಿ ಜಿಲ್ಲಾ
ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ-೦೧ ಬೆಳಗಾವಿ
ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ೨೦ ಸಾಕ್ಷಿ ಹಾಗೂ ೫೪
ದಾಖಲೆಗಳು ಮತ್ತು ಮುದ್ದೆಮಾಲುಗಳ ಆಧಾರದ ಮೇಲೆ ಅತ್ಯಾಚಾರ ನಡೆಸಿದ್ದು ಸಾಬೀತಾದ
ಹಿನ್ನೆಲೆಯಲ್ಲಿ ಆರೋಪಿಗೆ ನ್ಯಾಯಾಧೀಶರಾದ ಸಿ ಎಮ ಪುಷ್ಪಲತಾ ಅವರು ೨೦ ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ೧೦ ಸಾವಿರ ದಂಡ ವಿಧಿಸಿ ತೀರ್ಲು ನೀಡಿದ್ದಾರೆ.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ ಒಂದು ಲಕ್ಷ ಪರಿಹಾರ ಧನವನ್ನು
ಪಡೆಯಲು ನ್ಯಾಯಾಲಯ ಆದೇಶಿಸಿದೆ. ಸರಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.
ವಿ ಪಾಟೀಲ ಹಾಜರಾಗಿ ಪ್ರಕರಣವನ್ನು ನಡೆಸಿ ವಾದ ಮಂಡಿಸಿದ್ದರು