ಪಾಲಿಕೆಗೆ ಹಿಡಿದ ಜಿಡ್ಡು ಬಿಡಿಸುವತ್ತ ನೂತನ ಆಯುಕ್ತೆ ಶುಭ ಯತ್ನ.
ಆಡಳಿತ ವ್ಯವಸ್ಥೆ ಸರಿಮಾಡುವತ್ತ ಆಯುಕ್ತರ ಚಿತ್ತ. ದಿವಾಳಿ ಅಂಚಿಗೆ ತಲುಪಿದ್ದ ಪಾಲಿಕೆ ಸುಧಾರಿಸೋದು ಯಾವಾಗ?
ಬಾಕಿ ವಸೂಲಿಯತ್ತ ರೆವಿನ್ಯೂ ವಿಭಾಗದ ಚಿತ್ತ.
ಪಾಲಿಕೆಯಲ್ಲಿ ನಡೆಷ ಅಂತರ್ ವರ್ಗಾವಣೆ ಬಗ್ಗೆ ತನಿಖೆ ನಡೆಸಿದರೆ ಮತ್ತೊಂದು ಕರ್ಮಕಾಂಡ ಬಯಲು. ?
ಬೆಳಗಾವಿ.
ಇಷ್ಟು ದಿನ ಆನೆ ನಡೆದಿದ್ದೇ ದಾರಿ ಎನ್ನುವ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದವರಿಗೆ ಇನ್ನು ನಾವು ಹೊರಟ ದಾರಿ ತಪ್ಪು ಎನ್ನುವುದು ಅರಿವಿಗೆ ಬಂದಿರಬೇಕು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಡಳಿತ ವ್ಯವಸ್ಥೆಯನ್ನು ಮೂರಾಬಟ್ಟೆ ಮಾಡಿದ್ದಲ್ಲದೇ ಇದ್ದ ವ್ಯವಸ್ಥೆಯನ್ನು ಹಾಳು ಮಾಡಿದವರು ಯಾರು ಎನ್ನುವುದನ್ನು ಇಲ್ಲಿ ಬಿಡಿಸಿ ಹೇಳಬೇಕಿಲ್ಲ.
ಅಷ್ಟೇ ಕೌನ್ಸಿಲ್ ಗೆ ಕೊಡಬೇಕಾದ ಕನಿಷ್ಟ ಗೌರವವನ್ನೂ ಕೊಡದೇ ಜನಪ್ರತಿನಿಧಿಗಳ ದಿಕ್ಕು ತಪ್ಪಿಸಿ ನಗರಸೇವಕರಲ್ಲಿಯೇ ಭಿನ್ನ ಅಭಿಪ್ರಾಯ ಮೂಡುವಂತೆ ಮಾಡಿದವರು ಯಾರು ಎನ್ನುವುದು ಜಗಜ್ಜಾಹೀರ.
ಇಂತಹ ಅನೇಕ ದೂರುಗಳು ಸಚಿವರು, ಶಾಸಕರು ಅಷ್ಟೇ ಅಲ್ಲ ಸರ್ಕಾರ ಮಟ್ಟದಲ್ಲೂ ಹೋಗಿತ್ತು. ಆದರೂ ಸಚಿವರ ಮತ್ತು ಶಾಸಕರ ಬುದ್ದಿ ಮಾತಿಗೂ ಕೂಡ ಪಾಲಿಕೆ ಆಡಳಿತ ಸರಿದಾರಿಗೆ ಬರುವ ಲಕ್ಷಣಗಳು ಕಾಣಸಿಗಲಿಲ್ಲ.
ಹೀಗಾಗಿ ಬೆಳಗಾವಿ ಜಿಲ್ಲಾಧಿಕಾರಿಗಳಾಗಿ ಭೇಷ್ ಎನ್ನುವಂತೆ ಕಾರ್ಯನಿರ್ವಹಿಸಿ ಈಗ ರಾಜ್ಯದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಏರಿದ್ದ ಡಾ. ಶಾಲಿನಿ ರಜನೀಶ್ ಅವರ ಗಮನಕ್ಕೂ ಈ ಸಂಗತಿ ಗೊತ್ತಾಯಿತು. ಈ ಹಿನ್ನೆಲೆಯಲ್ಲಿ ಅವರು ಇದಕ್ಕೊಂದು ಮೇಜರ್ ಸರ್ಜರಿ ಮಾಡುವ ತೀರ್ಮಾನಕ್ಕೆ ಬಂದರು.ಅದರ ಪರಿಣಾಮ ಏನಾಯಿತು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಕಳೆದ ಹಲವು ತಿಂಗಳಿಂದ ಬೆಳಗಾವಿ ಮಹಾನಗರ ಪಾಲಿಕೆಗೆ ಹಿಡಿದಿದ್ದ ಜಿಡ್ಡು ಬಿಡಿಸುವ ಕೆಲಸವನ್ಬು ಈಗ ಜೋರಾಗಿ ಮಾಡಲಾಗುತ್ತದೆ.
ಜೊತೆಗೆ ಸರ್ಕಾರ ಮತ್ತು ಜನರ ಮನಸ್ಸಿನಲ್ಲಿ ಪಾಲಿಕೆ ಬಗ್ಗೆ ಇರುವ ಕೆಟ್ಟ ಹೆಸರನ್ನು ತೆಗೆದು ಹಾಕುವ ಕೆಲಸವನ್ನು ನೂತನ ಆಯುಕ್ತ ಶುಭ ಅವರು ಮಾಡುತ್ತಿದ್ದಾರೆ.
ಒಂದು ಹಂತದಲ್ಲಿ ಆರ್ಥಿಕ ದಿವಾಳಿ ಅಷ್ಟೆ ಅಲ್ಲ ಆಡಳಿತ ಯಂತ್ರ ಅಧಪತನಕ್ಕೆ ಬಂತು ಎನ್ನುವಾಗಲೇ ಎಚ್ಚೆತ್ತುಕೊಂಡ ಸರ್ಕಾರ ಪಾಲಿಕೆಗೆ ಪುನರುಜ್ಜೀವನ ಕೊಡುವ ಕೆಲಸ ಮಾಡಿತು.
ಸರ್ಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರ ಮಾರ್ಗದರ್ಶನ ಪಡೆದುಕೊಂಡು ಬಂದ ಮೈಸೂರಿನ ಶುಙ ಅವರು ಎಲ್ಲವನ್ನೂ ಕ್ಲೀನ್ ಮಾಡುವ ನಿಟ್ಟಿನಲ್ಲಿ ಕೆಲಸ ನಡೆಸಿದ್ದಾರೆ.
: ಕಳೆದ ಹಲವು ತಿಂಗಳುಗಳಿಂದ ಜಿಡ್ಡು ಹಿಡಿದು ಆರ್ಥಿಕ ದಿವಾಳಿ ಅಂಚಿಗೆ ಬಂದು ತಲುಪಿದ್ದ ಬೆಳಗಾವಿ ಮಹಾನಗರ ಪಾಲಿಕೆ ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸ ಈಗ ಜೋರಾಗಿ ನಡೆದಿದೆ. ಅಶೋಕ ದುಡಗುಂಟೆ ವರ್ಗವಾಗಿ ಹೋದ ನಂತರ ಅಧಿಕಾರವಹಿಸಿಕೊಂಡ ಮೈಸೂರಿನ ಶುಭ ಅವರು ಕನ್ನಡ ಅನುಷ್ಠಾನದ ಜೊತೆಗೆ ಜಿಡ್ಡು ಹಿಡಿದ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಒಂದಾನೊಂದು ಕಾಲದಲ್ಲಿ ಶ್ರೀಮಂತ ಎಂದು ಕರೆಯಿಸಿಕೊಳ್ಳುತ್ತಿದ್ದ ಮಹಾನಗರ ಪಾಲಿಕೆ ಈಗ ಕೆಲವೊಂದು ಕಾರಣದಿಂದ ಆರ್ಥಿಕ ದಿವಾಳಿ ಅಂಚಿಗೆ ಬಂದು ತಲುಪಿತ್ತು, ಇಲ್ಲಿ ಬೆಳಗಾವಿ ಮಹಾನಗರ ಪಾಲಿಕೆಗೆ ಹೊರಗಿನಿಂದ ಬರುವ ಆದಾಯವೇ ಕೋಟಿ ಕೋಟಿ ಉಳಿದುಕೊಂಡಿದೆ. ಹೆಸ್ಕಾಂ ಸೇರಿದಂತೆ ಇನ್ನಿತರ ಸಂಸ್ಥೆಗಳು ಪಾಲಿಕೆಗೆ ಹಣ ಕೊಡಬೇಕಾಗಿದೆ, ಆದರೆ ಅದರ ವಸೂಲಿ ಕೆಲಸ ಸರಿಯಾಗಿ ಆಗಲೇ ಇಲ್ಲ. ಪ್ರತಿಯೊಂದಕ್ಕೂ ನಾಳೆ ಬಾ ಎನ್ನುವ ರೀತಿಯಲ್ಲಿ ಆಡಳಿಯ ಯಂತ್ರ ಸಾಗಿತ್ತು
ಆದರೆ ಹೊಸದಾಗಿ ಅಧಿಕಾರವಹಿಸಿಕೊಂಡ ಶುಭ ಅವರು ಪಾಲಿಕೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಪಾಲಿಕೆ ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ಸಾಥ್ ನೀಡಿದ್ದಾರೆ.
ಬಾಕಿ ವಸೂಲಿಗೆ ದಿಟ್ಟ ಕ್ರಮ ತೆರಿಗೆ ಸಂಗ್ರಹದಲ್ಲಿ ಹಿಂದಿಳಿದಿರುವ ಇಲ್ಲಿನ ಮಹಾನಗರ ಪಾಲಿಕೆ ಅಧಿಕಾರಿಗಳು ಈಗ ಬಾಕಿ ಉಳಿಸಿಕೊಂಡವರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ,
ಮಹಾನಗರ ಪಾಲಿಕೆಗೆ ತೆರಿಗೆ ಕಟ್ಟಬೇಕಾದವರು ಯಾರೂ ಕೇಳಲ್ಲ ಎನ್ನುವ ಭ್ರಮೆಯಲ್ಲಿ ಸುಮ್ಮನೆ ಕುಳಿತುಕೊಂಡಿದ್ದರು. ಹೀಗಾಗಿ ಅಭಿವೃದ್ಧಿ ಕೆಲಸಕ್ಕೆ ನಾಳೆ ಬಾ ಎನ್ನುವ ಸ್ಥಿತಿ ಬಂದಿತ್ತು, ಹೀಗಾಗಿ, ತೆರಿಗೆ ಸಂಗ್ರಹದಲ್ಲಿ ಹಿಂದೆ ಉಳಿದಿರುವ ಮಹಾನಗರ ಪಾಲಿಕೆ ಆದಾಯ ತಂದುಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಆಸ್ತಿ ತೆರಿಗೆ ವಸೂಲಿಗೆ ಕಾಯರ್ಾಚರಣೆ ಆರಂಭಿಸಿದ್ದಾರೆ, ಆಯುಕ್ತೆ ಶುಭ ಅವರ ಸೂಚನೆ ಮೇರೆಗೆ ಪಾಲಿಕೆ ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ಅವರು ತಮ್ಮ ತಂಡದೊಂದಿಗೆ ವಸೂಲಿ ಕಾಯರ್ಾಚರಣೆಗೆ ಧುಮುಕಿದ್ದಾರೆ.’ ಇವತ್ತು ಮಾರುತಿ ಗಲ್ಲಿಯ ರೆಸ್ಟೋರೆಂಟ್ ಒಂದಕ್ಕೆ ಲಗ್ಗೆ ಇಟ್ಟ ಅಧಿಕಾರಿಗಳು 11 ಲಕ್ಷ ರೂ ಬಾಕಿ ಪಾವತಿಗೆ ಒಂದು ವಾರದ ಗಡುವು ನೀಡಿದ್ದಾರೆ, ಅಷ್ಟೇ ಅಲ್ಲ ಬೀಗ ಸಹ ಜಡಿದಿದ್ದಾರೆ. ‘ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆಯ ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ, ಬೆಳಗಾವಿ ನಗರದ ಜನರು ತಮ್ಮ ಮನೆಯ ಆಸ್ತಿ ಕರವನ್ನು ತಕ್ಷಣ ಪಾಲಿಕೆಗೆ ಕಟ್ಟಬೇಕು. ಶೇ.62 ಪ್ರತಿಶತ ತೆರಿಗೆ ಸಂಗ್ರಹವಾಗಿದೆ. ಇನ್ನೂ ಶೇ.48 ರಷ್ಟು ತೆರಿಗೆಯನ್ನು ಎರಡೂ ತಿಂಗಳಲ್ಲಿ ಆಕರಣೆ ಮಾಡುವ ಗುರಿ ಹೊಂದಿದ್ದೇವೆ ಎಂದರು. ಪಾಲಿಕೆಗೆ ತುಂಬಬೇಕಾದ ತೆರಿಗೆಯನ್ನು ಒಂದು ವಾರದಲ್ಲಿ ತುಂಬದೆ ಹೋದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ಸಹ ಅವರು ಎಚ್ಚರಿಕೆ ನೀಡಿದ್ದಾರೆ. —= ಅಂತರ್ ವರ್ಗಾವಣೆ ಸುತ್ತ…! ರಾಜ್ಯ ಸರ್ಕಾರಕ್ಕೆ ಮತ್ತು ಬೆಳಗಾವಿ ಜನಪ್ರತಿನಿಧಿಗಳಿಗೆ ಒಂದು ರೀತಿಯ ತಲೆನೋವಾಗಿ ಪರಿಣಮಿಸಿದ್ದ ಮಹಾನಗರ ಪಾಲಿಕೆ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಬೇಕಾದ ಅನಿವಾರ್ಯತೆ ಇದೆ, ಈ ಹಿಂದೆ ಹಿಡನ್ ಅಜೆಂಡಾ ಇಟ್ಟುಕೊಂಡು ಮಾಡಲಾಗಿದ್ದ ಅಂತರ್ ವಗರ್ಾವಣೆಯಿಂದ ಪಾಲಿಕೆ ಆಡಳಿತ ಯಂತ್ರ ಕುಸಿಯುವ ಮಟ್ಟಕ್ಕೆ ಹೋಗಿದೆ, ಗಮನಿಸಬೇಕಾದ ಸಂಗತಿ ಎಂದರೆ, ಪಾಲಿಕೆಯಲ್ಲಿ ಶಾಸಕರ ಮತ್ತು ಇನ್ಯಾವುದೇ ಜನಪ್ರತಿನಿಧಿಗಳ ಗಮನಕ್ಕೂ ತಾರದೇ ಕಂದಾಯ ವಿಭಾಗದ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ, ಈಗ ಈ ವಗರ್ಾವಣೆಗಳ ಹಿನ್ನೆಲೆ ಕೆದಕುತ್ತ ಹೋದರೆ ಮತ್ತೊಂದು ಕರಾಳ ಮುಖ ಬಯಲಾಗುತ್ತದೆ,