83 ಸಾವಿರ ಕೆಜಿ ಉತ್ಪನ್ನಗಳ ಮಾರಾಟ
ನಂದಿನಿ ಮಾರಾಟದಲ್ಲೂ ದಾಖಲೆ ಮಾಡಿದ ಬೆಳಗಾವಿ ಹಾಲು ಒಕ್ಕೂಟ
ಗ್ರಾಹಕರ ವಿಶ್ವಾಸ ಹೆಚ್ಚಿಸಿಕೊಂಡ ನಂದಿನಿ ಉತ್ಪನ್ನಗಳು.
ಗುಣಮಟ್ಟದಲ್ಲಿ ರಾಜೀ ಇಲ್ಲ ಎಂದ ಅದ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಮಹಾರಾಷ್ಟ್ರಕ್ಕೆ ಎಮ್ಮೆ ಹಾಲು ಪೂರೈಕೆಗೆ ಸಿದ್ಧ
ಬೆಳಗಾವಿ.
ಪ್ರತಿಯೊಂದು ಹಂತದಲ್ಲಿ ಪ್ರಗತಿಯ ದಾಪುಗಾಲನ್ನು ಇಡುತ್ತಿರುವ ಬೆಳಗಾವಿ ಹಾಲು ಒಕ್ಕೂಟವು ಈಗ ಹಬ್ಬದ ಸಂದರ್ಭದಲ್ಲಿ ನಂದಿನಿ ಉತ್ಪನ್ನಗಳ ಮಾರಾಟದಲ್ಲೂ ದಾಖಲೆ ಮಾಡಿದೆ.
ಕಳೆೆದ ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೆಳಗಾವಿ ಹಾಲು ಒಕ್ಕೂಟದಿಂದ 83 ಸಾವಿರ ಕಿಲೋ ನಂದಿನಿ ಉತ್ಪನ್ನಗಳು ಮಾರಾಟವಾಗಿವೆ, ಇದು ಹಿಂದಿನ ಎಲ್ಲ ದಾಖಲೆಗಳನ್ನು ಮೀರಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟ ಪ್ರಮಾಣ ದುಪ್ಪಟ್ಟು ಹೆಚ್ಚಾಗಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಹಾಲು ಒಕ್ಕೂಟದ ಸಿಬ್ಬಂದಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಿ ಉತ್ಪನ್ನಗಳನ್ನು ನಿಗದಿತ ಸಮಯದಲ್ಲಿ ತಲುಪುವಂತೆ ಮಾಡಿದ್ದಾರೆ,
ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 200 ಕ್ಕೂ ಅಧಿಕ ನಂದಿನಿಪಾರ್ಲರ್ ಮತ್ತು 400 ಕ್ಕೂ ಅಧಿಕ ಡಿಲರ್ಗಳಿದ್ದಾರೆ, ಅವರ ಮೂಲಕವೇ ಗ್ರಾಹಕರ ಬೇಡಿಕೆಯಂತೆ ನಂದಿನಿ ಉತ್ಪನ್ನಗಳನ್ನು ಸರಬರಾಜು ಮಾಡಲಾಗಿದೆ.
ಪೇಡಾ, ಕುಂದಾ, ಮೈಸೂರ ಪಾಕ್, ತುಪ್ಪ, ಮತ್ತು ಪನ್ನೀರ್ ಉತ್ಪನ್ನಗಳನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಲಾಗಿರುತ್ತದೆ. ಮುಖ್ಯವಾಗಿ 15,000 ಕೆ.ಜಿ ಪನ್ನೀರು ಮಾರಾಟವಾಗಿದೆ.

ಬಾಲಚಂದ್ರ ಜಾರಕಿಹೊಳಿ ಹಾಲು ಒಕ್ಕೂಟದ ಅಧ್ಯಕ್ಷರಾದ ನಂತರ ನಂದಿನಿ ಉತ್ಪನ್ನ ಸೇರಿದಂತೆ ಇನ್ನಿತರ ಪ್ರಗತಿ ವಿಷಯದಲ್ಲಿ ಯಾವುದಕ್ಕೂ ರಾಜಿ ಮಾಡಿಕೊಂಡಿಲ್ಲ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಗುಣಮಟ್ಟದ ಉತ್ಪನ್ನಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುವ ಕೆಲಸ ನಡೆದಿದೆ.
ಸಧ್ಯ ಉತ್ತಮ ಗುಣಮಟ್ಟದಿಂದ ಮಙಾರುಕಟ್ಟೆಯಲ್ಲಿ ನಂದಿನಿ ಉತ್ಪನ್ನಗಳಿಗೆ ಭಾರೀ ಬೇಡಿಕೆ ಬಂದಿದೆ, ಗಮನಿಸಬೇಕಾದ ಸಂಗತಿ ಎಂದರೆ, ನಂದಿನಿ ಉತ್ಪನ್ನಗಳಿಗೆ ಕೇವಲ ಬೆಳಗಾವಿ ಅಷ್ಟೇ ಅಲ್ಲ ಪಕ್ಕದ ಮಹಾರಾಷ್ಟ್ರದಿಂದಲೂ ಬೇಡಿಕೆ ಬರುತ್ತಿದೆ,
ಮತ್ತೊಂದು ಸಂಗತಿ ಎಂದರೆ, ನಂದಿನಿ ಉತ್ಪನ್ನಗಳ ಬಗ್ಗೆ ಮಾರುಕಟ್ಟೆಯಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಕೂಡ ವ್ಯವಸ್ಥಿತವಾಗಿ ನಡೆಯುತ್ತಿದೆ,
ಈ ಹಿಂದೆ ಕೇವಲ ಪೇಡಾಗೆ ಮಾತ್ರ ಹೆಸರಾಗಿದ್ದ ನಂದಿನಿ ಉತ್ಪನ್ನಗಳ ಸಂಖ್ಯೆ ಈಗ ಬರೊಬ್ಬರಿ 127 ರ ಗಡಿ ದಾಟಿದೆ, ಈ ಉಪ್ತನ್ನಗಳು ಒಂದಕ್ಕಿಂತ ಒಂದು ಭೇಷ್ ಎನ್ನುವ ರೀತಿಯಲ್ಲಿವೆ.
ಮಹಾರಾಷ್ಟ್ರಕ್ಕೆ ಎಮ್ಮೆ ಹಾಲು !!

ಈ ವರ್ಷ ಉತ್ಪನ್ನಗಳ ಮಾರಾಟದಲ್ಲಿ ಗಣನೀಯವಾಗಿ ಏರಿಕೆ ಕಂಡು ಬಂದಿರುವುದಕ್ಕೆ ಹರ್ಷ ವ್ಯಕ್ತವಾಗಿದೆ, ಇದಕ್ಕೆ ಶ್ರಮಿಸಿದ ಒಕ್ಕೂಟದ ಅಧಿಕಾರಿ ವೃಂದದವರಿಗೆ ಅಭಿನಂದನೆಗಳು .ಮುಂದಿನ ದಿನಗಳಲ್ಲಿ ಬೆಳಗಾವಿ ಒಕ್ಕೂಟದಿಂದ ಅನೇಕ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗಿದೆ, ಶೀಘ್ರದಲ್ಲಿ ಮುಂಬಯಿ ಮಾರುಕಟ್ಟೆಗೆ ಎಮ್ಮೆ ಹಾಲನ್ನು ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ.
ಬಾಲಚಂದ್ರ* ಜಾರಕಿಹೊಳಿ . ಶಾಸಕರು ಮತ್ತು ಅಧ್ಯಕ್ಷರು , ಹಾಲು ಒಕ್ಕೂಟ *ಬೆಳಗಾವಿ