Headlines

ಬ್ರಾಹ್ಮಣ ಸಮಾವೇಶ ಸಮಿತಿ ಉಪಾಧ್ಯಕ್ಷರ ನೇಮಕ

ಅಶೋಕ ಹಾರನಹಳ್ಳಿ ಸಾರಥ್ಯದಲ್ಲಿ ನಡೆಯಲಿರುವ ಸಮಾವೇಶ.

ರಾಜ್ಯದ ಎಲ್ಲ ಮಠಗಳ ಶ್ರೀಗಳು ಭಾಗಿ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನೆವರಿ 18, 19 ರಂದು ನಡೆಯುವ ಸಮಾವೇಶ.

ಬೆಳಗಾವಿ.
ಜನವೇರಿ 18 ಮತ್ತು 19 ರಂದು ಎರಡು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲ ಕನರ್ಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಮುಂದಾಳತ್ವದಲ್ಲಿ ನಡೆಯುವ ರಾಜ್ಯ ಮಟ್ಟದ ಬ್ರಾಹ್ಮಣರ ಸಮಾವೇಶಕ್ಕೆ ಭರ್ಜರಿ ಸಿದ್ಧತೆಗಳು ನಡೆದಿವೆ.


ಈ ಹಿನ್ನೆಲೆಯಲ್ಲಿ ಸಂಘಟನೆ ದೃಷ್ಟಿಯಿಂದ ಗಡಿಜಿಲ್ಲೆ ಬೆಳಗಾವಿಯಲ್ಲಿಯೂ ಕೂಡ ಸಮಾವೇಶದ ಜವಾಬ್ದಾರಿ ಕೊಟ್ಟು ಹಾರನಹಳ್ಳಿ ಆದೇಶ ಹೊರಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಬ್ರಾಹ್ಮಣ ಸಮಾಜ ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರಿ, ಉಪಾಧ್ಯಕ್ಷ ಭರತ ದೇಶಪಾಂಡೆ ಮತ್ತು ಪ್ರಥಮ ದರ್ಜೆ ಗುತ್ತಿಗೆದಾರ ರಾಜೇಂದ್ರ ದೇಸಾಯಿ ಅವರನ್ನು ಸಮಾವೇಶದ ಸಮಿತಿಯ ರಾಜ್ಯಮಟ್ಟದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಮಾಜಿ ನಗರಸೇವಕಿ ಅನುಶ್ರೀ ದೇಶಪಾಂಡೆ ಅವರನ್ನು ಜಿಲ್ಲಾ ಮಟ್ಟದ ಸಂಘಟಕರನ್ನಾಗಿ ನೇಮಿಸಲಾಗಿದೆ.
ಈಗಾಗಲೇ ಬ್ರಾಹ್ಮಣ ಸಮಾವೇಶದ ಸಿದ್ಧತೆಗಾಗಿ ಬೆಳಗಾವಿ ನಗರದ ಬಹುತೇಕ ಕಡೆಗಳಲ್ಲಿ ಸಮಾಜದ ಸಭೆಗಳನ್ನು ನಡೆಸಲಾಗುತ್ತಿದೆ,
ಅಷ್ಟೇ ಅಲ್ಲ ತಾಲೂಕುವಾರು ಕಮೀಟಿಗಳನ್ನು ಕೂಡ ರಚಿಸಿ ಸಮಾವೇಶದ ಯಶಸ್ಸಿಗೆ ಪ್ರಯತ್ನ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!