ನಂದಗಡ ರಾಯಣ್ಣನ ತವರಲಿ ಎಗ್ಗಿಲ್ಲದೇ ನಡೆಯುತ್ತಿದೆ ಮರಳು ಮಾಫಿಯಾ.
ತಡೆಗಟ್ಟುವವರು ಯಾರು?
ಮರಳು ಮಾಫಿಯಾದಲ್ಲಿ ಬಿದ್ದ ಮತ್ತೊಂದು ಕಣ್ಣು ಯಾವುದು?
ದಂಧೆಕೋರರ ಜೊತೆ ಭಾಗಿಯಾಗದ ವಸೂಲಿ ವೀರರ ಜಾತಕ ಪೊಲೀಸ್ ಅಧಿಕಾರಿಗಳ ಕೈಯಲ್ಲಿದೆಯಂತೆ..
ಹೆಡಮುರಿ ಕಟ್ತೆವಿ ಅಂದ್ರು ಎಸ್ಪಿ ಭೀಮಾಶಂಕರ ಗುಳೇದ್
ಬೆಳಗಾವಿ:
ಪರಿಸರ ನಾಶ ಮಾಡಿ ಹಣ ಮಾಡುವ ಮರಳು ಮಾಫಿಯಾ ಖಾನಾಪುರ ತಾಲೂಕಿನ ಸುತ್ತಲಿನ ಪರಿಸರದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವ ದೂರುಗಳು ಸರ್ವೇಸಾಮಾನ್ಯವಾಗಿವೆ.
ಈ ಬಗ್ಗೆ ವಿಚಾರಣೆ ಮಾಡುತ್ತ ಹೋದಾಗ ದಂಧೆಕೋರರ ವಿಡಿಯೋ ತುಣುಕುಗಳು ನಿಮ್ಮ Ebelagavi ಗೆ ಲಭ್ಯವಾಗಿವೆ.
ಅದರಲ್ಲಿನ ಸಂಗತಿಯನ್ನು ಗಮನಿಸಿದರೆ ಮರಳು ಮಾಫಿಯಾ ಯಾವ ಪ್ರಮಾಣದಲ್ಲಿ ನಡೆದಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಅಷ್ಟೇ ಅಲ್ಲ ಈ ಪ್ರಮಾಣದಲ್ಲಿ ಯಾರ ಹಂಗಿಲ್ಲದೇ ದಂಧೆ ನಡೆಯುತ್ತಿರುವುದನ್ನು ಗಮನಿಸಿದರೆ ಇದಕ್ಕೆ ಪ್ರಭಾವಿಗಳ ಅಭಯ ಹಸ್ತವಿರಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.
ಅಷ್ಟೇ ಅಲ್ಲ ಇಲ್ಲಿ ಕಳ್ಳರ ಕೈಗೆ ಬೀಗ ಕೊಟ್ಟಂತಾಗಿದೆ.
ಖಾನಾಪುರ ತಾಲೂಕಿನ ಪರಿಸರದಲ್ಲಿ ಅಕ್ರಮವಾಗಿ ಮರಳು ದಂಧೆ ಮಾಡುವ ಮೂಲಕ ಪರಿಸರ ನಾಶ ಮಾಡುವ ಕಾರ್ಯ ಕಳೆದ ಹಲವು ತಿಂಗಳಿಂದ ನಡೆಯುತ್ತಿದೆ. ಸ್ಥಳೀಯ ಆಡಳಿತ ನಿತ್ಯ ನಡೆಯುವ ಮರಳು ದಂಧೆಯನ್ನು ನೋಡಿ ಕಣ್ಣು ಮುಚ್ಚಿಕೊಂಡು ಕುಳಿತಿದೆ.
ಖಾನಾಪುರ ತಾಲೂಕಿನ ನಂದಗಡ ಪಟ್ಟಣದಲ್ಲಿ ಮರಳು ದಂದೆ ಜೋರಾಗಿದೆ. ದಿನ ನಿತ್ಯ ಮರಳು ದಂದೆ ಕೋರರು ಯಾವುದೇ ಭಯವಿಲದೇ ದಂಧೆ ನಡೆಸುತಿದ್ದಾರೆಂದು ಹೇಳಲಾಗುತ್ತಿದೆ..
ನಂದಗಡ ಹೊರ ವಲಯದಲ್ಲಿ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಬರುವ ಹಳ್ಳದಲ್ಲಿ ಮರಳು ತೆಗೆಯುವ ದಂಧೆ ಬಲು ಜೋರಾಗಿಯೆ ನಡೆದಿದೆ.
ಮರಳು ದಂಧೆ ಮಾಡುವ ಖದೀಮರಿಗೆ ಹೇಳೋರು ಇಲ್ಲಾ ಕೆಳವರು ಇಲ್ಲದಾಗಿದೆ. ದಿನ ನಿತ್ಯ ಹಳ್ಳದ ಒಡಲು ಬಗೆದು ಟ್ಯಾಕ್ಟರ್ ಮುಖಾಂತರ ಮರಳು ಸಾಗಾಟ ಮಾಡಲಾಗುತ್ತಿದೆ ಎಂದು ದೂರಲಾಗಿದೆ. ಅಕ್ರಮ ದಂಧೆ ಕುರಿತು ಧ್ವನಿ ಎತ್ತಬೇಕಾದವರೆ ಇಲ್ಲಿ ಮರಳು ಅಕ್ರಮ ಸಾಗಣೆಗೆ ಬೆಂಗಾವಲಾಗಿದ್ದಾರೆ ಎಂದು ದೂರಲಾಗಿದೆ..