ಮಹಿಳೆಯಾಗಿ ಮಧ್ಯರಾತ್ರಿ ವರೆಗೆ ನಿಂತು ಕೆಲಸ ಪೂರ್ಣಗೊಳಿಸಿದರು.
ಅಂದುಕೊಂಡಂತೆ ಬೆಳಗಾವಿ ಪಾಲಿಕೆಗೆ ಬರ್ತಿದೆ ಶುಭ ಲಕ್ಷಣ.
ಬರೀ ಒಂದು ಕಾಲ್,ಮೆಸೆಜ್..ರಾತ್ರೊ ರಾತ್ರಿ ಕೆಲಸ ಮುಗಿಸಿದ ಆಯುಕ್ತರು.ವ
ಬೆಳಗಾವಿ.
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಅಂದ್ರೆ ಬೆಳಗಾವಿಗೆ ಅಷ್ಟೇ ಅಲ್ಲ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು
ಅಂತಹ ಪಾಲಿಕೆಯನ್ನು ಸಯಧಾರಿಸಿ ಸರಿದಾರಿಗೆ ತರುವ ನಿಟ್ಟಿನಲ್ಲಿ ಪಕ್ಷಬೇಧ ಮರೆತು ಎಲ್ಲರೂ ಪ್ರಯತ್ನಿಸಿದರು.
ಆದರೆ ಯಾವುದೂ ಸುಧಾರಿಸುವ ಲಕ್ಷಣಗಳೇ ಕಾಣಸಿಗಲಿಲ್ಲ ಅದೇ ಕಾರಣದಿಂದ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆ ನಗರಸೇವಕರು ತಾವು ಮಾಡದ ತಪ್ಪಿಗೆ ಸೂಪರ್ ಸೀಡ್ ನೋಟೀಸ್ ತಗೆದುಕೊಂಡಿತ್ತು
ಒಂದೇ ಕಾಲ್ ಗೆ ದುರಸ್ತಿಗೊಂಡ ಬೆಳಗಾವಿ ಅಜಮನಗರ ರಸ್ತೆ
ಅಷ್ಟೇ ಅಲ್ಲ ತೀವ್ರ ವಿವಾದಕ್ಕೆ ಗುರಿಯಾಗಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿತ್ತು. ಅದಕ್ಕಾಗಿ ಜನಪ್ರತಿನಿಧಿಗಳು ಪಟ್ಟ ಶ್ರಮ ಅಷ್ಟಿಷ್ಟಲ್ಲ.
ಕೊನೆಗೆ ಸರ್ಕಾರವೇ ಎಚ್ಚೆತ್ತು ಬೆಳಗಾವಿ ಪಾಲಿಕೆಗೆ ಇನ್ನು ಮುಂದಾದರೂ ಶುಭ ಲಕ್ಷಣ ಬರಲಿ ಎನ್ನುವ ಉದ್ದೇಶದಿಂದ ಅಳೆದುತೂಗಿ ಮೈಸೂರಿನ ಶುಭ ಅವರನ್ನು ಆಯುಕ್ತರನ್ನಾಗಿ ನೇಮಿಸಿದೆ
ಇವರು ಅಧಿಕಾರವಹಿಸಿಕೊಂಸ ನಂತರವೂ ಕೆಕವೊಂದು ಗಾಳಿ ಮಾತುಗಳು ಕೆಲಸದ ವಿಷಯದಲ್ಕಿ ತೇಲಿ ಬಂದವು. ಹಿಂದಿನವರಂತೆ ಬಿಡಿ ಎಂದೂಕೆಲವರು ಆಡಿಕೊಂಡರು.

ಆದರೆ ಈಗ ಅವರ ಕಾರ್ಯವೈಖರಿ ಗಮನಿಸಿದರೆ ಇವರೇ ಬೇರೆ, ಇವರ ಸ್ಟೈಲೇ ಬೇರೆ ಎನ್ನುವುದು ಗೊತ್ತಾಗುತ್ತಿದೆ.
ಈ ಮಾತು ಕೆಲವರಿಗೆ ಉತ್ಪ್ರೇಕ್ಷೆ ಅನಿಸಬಹುದು. ಆದರೆ ನಾವುಬಕೊಡುತ್ತಿರುವ ಒಂದೇ ಒಂದು ಉದಾಹರಣೆ ಕೇಳಿದರೆ ನಿಜವಾಗಿ ಬೆಳಗಾವಿಗರು ಹೇಳುವುದು ಒಂದೇ ಮಾತು. ಇದ್ರ ಕಮೀಶ್ನರ ಹೀಗಿರಬೇಕು ಎಂದು.!
ಕಳೆದ ಭಾನುವಾರ ಅಜಂನಗರ ಬಾಕ್ಸೈಟ್ ರಸ್ತೆ ವೃತ್ತದಲ್ಲಿ ರಸ್ತೆ ಮೇಲೆ ಖಡಿ ಹಾಕಿ ಹೋಗಿದ್ದರು. ಅದನ್ನು ದುರಸ್ತಿ ಮಾಡಬೇಕಾದವರು ಕಣ್ಣು ಮುಚ್ಚಿ ಕುಳಿತಿದ್ದರು. ಈ ಕಾರಣದಿಂದ ದ್ವಿಚಕ್ರ ವಾಹನ ಸವಾರರು ಅಲ್ಲಿ ಸ್ಲಿಪ್ ಆಗಿ ಬೀಳುತ್ತಿದ್ದರು. ರವಿವಾರ ರಾತ್ರಿ ಹೀಗೆ ಹೋಗುವಾಗ ದಂಪತಿಗಳು ಅಲ್ಕಿ ಬಿದ್ದು ಗಾಯಗೊಂಡಿದ್ದರು.
ಆಗ ಅವರು ಇದನ್ನು ಅದೇ ಪ್ರದೇಶದಲ್ಲಿ ನಿವಾಸಿ ಹಾಗೂ ಪತ್ರಕರ್ತ ಮುನ್ನಾ ಬಾಗವಾನ್ ಗಮನಕ್ಕೆ ತಂದರು. ಸಹಜವಾಗಿ ಇಂತಹ ವಿಷಯಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಲ್ಲ ಎನ್ನುವುದು ಎಲ್ಕರ ಊಹೆ ಆಗಿತ್ತು.
ಆದರೂ ಕೊನೆಯ ಪ್ರಯತ್ನ ಎನ್ನುವಂತೆ ಮುನ್ನಾ ಭಾಗವಾನ್ ಅವರು ಪಾಲಿಕೆ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ವಿಷಯ ಹೇಳಿದ್ದಲ್ಲದೇ ವಾಟ್ಸಪ್ ಗೆ ಅಲ್ಲಿನ ವಿಡಿಯೋ ಕೂಡ ಹರಿಬಿಟ್ಟು ಮನೆಯತ್ತ ಪ್ರಯಾಣ ಬೆಳೆಸಿದರು.
ಆದರೆ ಅಚ್ಚರಿ ಎಂದರೆ ಆಯುಕ್ತರೇ ರಾತ್ರೊ ರಾತ್ರಿ ಮುಂದೆ ನಿಂತುಕೊಂಡು ಅಲ್ಕಿ ಡಾಂಬರ ಹಾಕಿ ಸರಿಯಾದ ರಸ್ತೆ ಮಿರ್ಮಿಸಿದರು.
ಇದು ಎಲ್ಲರಿಗೂ ಅಚ್ಚರಿಯಾಯಿತು. ಇನ್ನೂ ಒಂದು ನಿಸಬೇಕಾದ ಸಂಗತಿ ಎಂದರೆ, ಆ ಹದಗೆಟ್ಟ ರಸ್ತೆ ಮೇಲೆ ಬಿದ್ದವರು ಇದನ್ನು ದುರಸ್ತಿ ಮಾಡಿಸಿದರೆ ಹತ್ತು ಸಾವಿರ ಬೆಟ್ ಸಹ ಕಟ್ಟಿದ್ದರಂತೆ. ಏಕೆಂದರೆ ಅವರಿಗೆ ಪಾಲಿಕೆಯಿಂದ ಯಾವುದೇ ಕೆಲಸ ಆಗಲ್ಲ ಎನ್ನುವ ನಿರೀಕ್ಷೆ ಇತ್ತು
ಆದರೆ ಅದೆಲ್ಲವೂ ಹುಸಿಮಾಡುವಂತೆ ರಾತ್ರೊ ರಾತ್ರಿನಿಂತು ಕೆಲಸ ಮಾಡಿದ್ದಾರೆ. ಅದಕ್ಕೆ ಬೆಳಗಾವಿಗರು ಇಂತಹ ಕೆಲಸಗಾರ ಆಯುಕ್ತರು ಮೊದಲೇ ಬಂದಿದ್ದರೆ ಸರ್ಕಾರ ಮಟ್ಟದಲ್ಲಿ ಪಾಲಿಕೆ ಮರ್ಯಾದೆ ಮೂರುಕಾಸಿಗೆ ಹರಾಜಾಗುವುದು ತಪ್ಪುತ್ತಿತ್ತು. ಆದರೂ ಈಗಲಾದರೂ ಪಾಲಿಕೆಗೆ ಶುಭ ಲಕ್ಷಣ ಬಂತಲ್ಲಾ ಎನ್ನುವ ಖುಷಿ ಎಲ್ಲರಲ್ಲಿದೆ.
ಕೊನೆ ಮಾತು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಿವಿ ಊದುವವರು, ಸರಿಯಾಗಿ ಹೊರಟ ಆಡಳಿತ ವ್ಯವಸ್ಥೆ ದಾರಿ ತಪ್ಪಿಸುವವರು , ಎಲ್ಲರಿಗೂ ನಾನೊಬ್ಬೇ ಬಾಸ್. ನಂದೇ ಮಾತು ಅಂತಿಮ ಎನ್ನುವವರಿಗೆ ಕೊರತೆ ಏನಿಲ್ಲ. ಅಂತಹವರ ಬಗ್ಗೆ ಎಚ್ಚರಿಕೆ ಹೆಜ್ಜೆ ಇಡುವ ಕೆಲಸವನ್ನು ನೂತನ ಆಯುಕ್ತರು ಮಾಡಬೃಕಷ್ಟೆ. ಕಾದು ನೋಡೊಣ.