ಬೆಳಗಾವಿಯಲ್ಲಿ ಗುಂಡಿನ ದಾಳಿ

ಬೆಳಗಾವಿ ಮಹಾಂತೇಶ ನಗರದ ಕೆಎಂಎಫ್ ಡೈರಿ ಬಳಿ ಗುಂಡಿನ ದಾಳಿ ನಡೆದಿದ್ದು, 31 ವರ್ಷದ ಪ್ರಣೀತ್ ಕುಮಾರ್ ತೀವ್ರವಾಗಿ ಗಾಯಗೊಂಡಿದ್ದಾರೆ. ದ್ವಾರಕಾ ನಗರ, ಟಿಳಕವಾಡಿಯ 5ನೇ ಕ್ರಾಸ್ ನಿವಾಸಿ ಪ್ರಣೀತ್ ಕುಮಾರ್ ಅವರಿಗೆ ಡೇರಿ ಬಳಿ ಗುಂಡು ತಗುಲಿ ತೀವ್ರ ಗಾಯಗೊಂಡಿದ್ದಾರೆ. ವೈಯಕ್ತಿಕ ದ್ವೇಷವೇ ದಾಳಿಗೆ ಕಾರಣ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಮಾಳಮಾರುತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

Read More

762 ಎಕರೆ ಭೂಮಿ ಸ್ವಾಹಾ..!

ಬೆಳಗಾವಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ 762 ಎಕರೆ ಸರಕಾರಿ ಪ್ರಭಾವಿಗಳು ಮತ್ತು ಭೂ-ಗಳ್ಳರು ಜಮೀನು ನುಂಗಿ ಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದ್ದು, ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ. ಇದು ರಾಜ್ಯದಲ್ಲಿಯೇ ದೊಡ್ಡ ಭೂಹಗರಣವಾಗಿದ್ದು, ಇದರಲ್ಲಿ ಪ್ರಭಾವಿಗಳು ಭಾಗಿಯಾಗಿರುವ ಅನುಮಾನ ಇದೆ ಎಂದು ಮೂಡಲಗಿಯ ಮಾಹಿತಿ ಹಕ್ಕು ಕರಕರ್ತ ಭೀಮಪ್ಪ ಗಡಾದ ಇಂದಿಲ್ಲಿ ಹೇಳಿದರು. ಬುಧವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತವಾಗಿ ನಿವೇಶನಗಳನ್ನು ಪಡೆಯಲಾದ ಮುಡಾದಲ್ಲಿ ಆರೋಪ ಎದುರಿಸುತ್ತಿರುವ…

Read More
error: Content is protected !!