`ಶಿಕ್ಷಣ, ಸಮುದಾಯ ಅಭಿವೃದ್ಧಿಗೆ ROUND TABLE INDIA ಒತ್ತು’

ರೌಂಡ್ ಟೇಬಲ್ ಇಂಡಿಯಾ ಸಾಧನೆ
`ಶಿಕ್ಷಣ, ಸಮುದಾಯ ಅಭಿವೃದ್ಧಿಗೆ ಒತ್ತು’

ಬೆಳಗಾವಿ.
ಯುವ ವೃತ್ತಿಪರರು ಮತ್ತು ಉದ್ಯಮಿಗಳ ಕ್ರಿಯಾಶೀಲ ಸಮೂಹವಾದ ರೌಂಡ್ ಟೇಬಲ್ ಇಂಡಿಯಾ ಸಾಮಾಜಿಕ ಪರಿವರ್ತನೆ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಿ ಅದ್ವಿತೀಯ ಸಾಧನೆ ಮಾಡಿದೆ ಎಂದು ಬೆಳಗಾವಿ ವಿಭಾಗದ ಅಧ್ಯಕ್ಷ ಶ್ರೀನಿವಾಸ ರಾಯಬಾಗಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೌಂಡ್ ಟೇಬಲ್ ಇಂಡಿಯಾ ಸಂಸ್ಥೆಯು 1997 ರಿಂದ ಇಲ್ಲಿಯವರೆಗೆ 9,272 ತರಗತಿ ಕೊಠಡಿಗಳನ್ನು ನಿಮರ್ಿಸಿದೆ. ಜೊತೆಗೆ ನೆರವಿನ ಕೈಚಾಚಿ ಬಂದವರಿಗೆ ದೇಣಿಗೆದಾರರ ಮತ್ತು ಸಂಪನ್ಮೂಲ ಕ್ರೋಢಿಕರಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಕೆಲಸವನ್ನು ನಮ್ಮ ಸಂಸ್ಥೆ ಕೆಲಸ ಮಾಡಿದೆ ಎಂದರು,

ಮಕ್ಕಳಿಗೆ ಶಿಕ್ಷಣ ವಿಷಯದಲ್ಲಿ ಅತ್ಯಾಧುನಿಕ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಶಿಕ್ಷಣದ ಕ್ಷೇತ್ರದಲ್ಲಿ ಕ್ರಾಂತಿಕಾರಿ ಕೆಲಸವನ್ನು ರೌಂಡ್ ಟೇಬಲ್ ಮಾಡಿದೆ.
ಇಲ್ಲಿಯವರೆಗೆ, ನಮ್ಮ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮವು 10.2 ಮಿಲಿಯನ್ ಮಕ್ಕಳ ಮೇಲೆ ಪರಿಣಾಮ ಬೀರಿದೆ, ಒಟ್ಟು 485 ಕೋಟಿ ರೂಪಾಯಿಗಳ ಯೋಜನಾ ವೆಚ್ಚ ಮತ್ತು 3,782 ಯೋಜನೆಗಳು ಪೂರ್ಣಗೊಂಡಿವೆ ಎಂದು ವಿವರಿಸಿದರು,
ಸಂಸ್ಥೆಯ ಧ್ಯೇಯವಾಕ್ಯವಾದ ಶಿಕ್ಷಣದ ಮೂಲಕ ಸ್ವಾತಂತ್ರ್ಯ ದೊರಕಿಸುವ ನಿಟ್ಟಿನಲ್ಲಿ ಅನೇಕ ಗುರುತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜನಪರ ಕೆಲಸ
ಬೆಳಗಾವಿ ಕಾಸ್ಮೊ (ಆರ್.ಟಿ. 237) ಸಂಸ್ಥೆಯ ತನ್ನ ವ್ಯಾಪ್ತಿಯಲ್ಲಿ ಅನೇಕ ಜನಪರ ಕೆಲಸ ಮಾಡಿದೆ,
ಅಧ್ಯಕ್ಷ ಶ್ರೀನಿವಾಸ ರಾಯಬಾಗಿ, ಉಪಾಧ್ಯಕ್ಷ ಸಾಗರ್ ಎನ್. ಎಸ್., ಕಾರ್ಯದರ್ಶಿ ನಿಖಿಲ್ ಜೈನ್ ಮತ್ತು ಖಜಾಂಚಿ ಗೌರವ್ ದೇಸಾಯಿ ಅವರ ನೇತೃತ್ವದಲ್ಲಿ 20 ಸದಸ್ಯರ ತಂಡವು ಪರಿಣಾಮಕಾರಿ ಯೋಜನೆಗಳನ್ನು ಮುನ್ನಡೆಸುತ್ತಿದೆ.

ಬೆಳಗಾವಿಯ ದೈವಜ್ಞ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 43 ಲಕ್ಷ ವೆಚ್ಚದಲ್ಲಿ ಆರು ಕೊಠಡಿಗಳನ್ನು ನಿರ್ಮಿಸಲಾಗಿದೆ., ಮತ್ತು ನ್ಯೂ ಗರ್ಲ್ಸ ಹೈಸ್ಕೂಲದಲ್ಲಿ ಸ್ಮಾರ್ಟ ಬೋರ್ಡಗಳನ್ನು ನಿರ್ಮಿಸಲಾಗಿದೆ ಎಂದು ಶ್ರೀನಿವಾಸ ರಾಯಬಾಗಿ ಹೇಳಿದರು,
ಇಲ್ಲಿ ಶಿಕ್ಷಣದ ಹೊರತಾಗಿಯೂ ಅನಾಥಾಶ್ರಮಗಳಿಗೆ ಅಗತ್ಯವಾದ ವಸ್ತುಗಳನ್ನು ಕಲ್ಪಿಸಿಕೊಡಲಾಗಿದೆ,
ಇನ್ನು ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಕ್ಷ-ಕಿರಣ ಯಂತ್ರ ಕೊಡುವುದು, ಅಂಗಾಂಗ ದಾನಕ್ಕೆ ಅನುಕೂಲವಾಗುವಂತೆ ನೆರವಿನ ಹಸ್ತ, ಫ್ಲೈಟ್ ಆಫ್ ಫ್ಯಾಂಟಸಿ ಯೋಜನೆಯನ್ನು ಪ್ರಾರಂಭಿಸಲು ಯೋಜಿಸಿದೆ ಎಂದು ಅವರು ಹೇಳಿದರು,

Leave a Reply

Your email address will not be published. Required fields are marked *

error: Content is protected !!