Headlines

ಜನರಿಂದ, ಜನರಿಗಾಗಿ ನಾವು…!

ಬಾಲಚಂದ್ರ ಜಾರಕಿಹೊಳಿ ಹೇಳಿಕೆ
ಜನರಿಂದ, ಜನರಿಗಾಗಿ ನಾವು…!

ಮೂಡಲಗಿ.
ಜನರ ಪ್ರೀತಿ, ವಿಶ್ವಾಸದಿಂದಾಗಿಯೇ ನಮ್ಮ ಒಂದೇ ಕುಟುಂಬದಲ್ಲಿ ಐವರು ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದಾರೆಂದು ಶಾಸಕ ಮತ್ತು ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲ್ಲೂಕಿನ ಯಾದವಾಡ ಗ್ರಾಮದ ಘಟ್ಟಗಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ರವಿವಾರದಂದು ಜರುಗಿದ ಸಂತ ಶ್ರೇಷ್ಠ ಕನಕದಾಸರ 537 ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು,

ಕುಟುಂಬ ರಾಜಕೀಯ ಕುರಿತಂತೆ ವಿರೋಧಿಗಳ ಆರೋಪದಲ್ಲಿ ಯಾವುದೇ ಹುರುಳಿಲ. ಜನರ ಆಶೀವರ್ಾದದಿಂದಲೇ ನಾವೆಲ್ಲಾ ಒಂದೊಂದು ಕ್ಷೇತ್ರದಿಂದ ಗೆದ್ದಿದ್ದೇವೆ, ಅಧಿಕಾರದ ಹಿಂದೆ ಎಂದಿಗೂ ನಾವು ಹೋದವರಲ್ಲ. ಜನರಿಂದಲೇ ನಾವೆಲ್ಲರೂ ಶಾಸನ ಸಭೆಗಳಲ್ಲಿ ಅಧಿಕಾರದಲ್ಲಿದ್ದೇವೆ ಎಂದು ಸ್ಪಷ್ಟಪಡಿಸಿದರು,

ನಾವು ಜನರಿಗೆ ಬೇಡ ಅಂದ ಪಕ್ಷದಲ್ಲಿ ಒಂದು ಕ್ಷಣವೂ ರಾಜಕೀಯದಲ್ಲಿ ಇರುವುದಿಲ್ಲ. ಎಲ್ಲಿಯವರೆಗೆ ದೇವರು ಮತ್ತು ಮತದಾರರ ಆಶೀವರ್ಾದ ಇರುತ್ತೋ ಅಲ್ಲಿಯವರೆಗೆ ರಾಜಕೀಯದಲ್ಲಿದ್ದುಕೊಂಡು ಜನಸೇವೆಯನ್ನು ಮಾಡುತ್ತೇವೆ ಎಂದು ಬಾಲಚಂದ್ರ ಹೇಳಿದರು,
ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ರಾಜಾಪೂರ ಗ್ರಾಮದಲ್ಲಿ ನಡೆದ ಕನಕ ಜಯಂತಿಯಂದೇ ಭಂಡಾರ ಹಾರಿಸುವ ಮೂಲಕ ನನ್ನ ಪ್ರಚಂಡ ಗೆಲುವಿಗೆ ಆಗಲೇ ಜನರು ಮುನ್ನುಡಿಯನ್ನು ಬರೆದಿದ್ದರು. ನಂತರ ಸುಣಧೋಳಿಯಲ್ಲಿ ಈಗ ತಾಲ್ಲೂಕಿನ ಗಡಿಯಲ್ಲಿರುವ ಯಾದವಾಡ ಗ್ರಾಮದಲ್ಲಿ ಅದ್ದೂರಿಯಾಗಿ ಕನಕದಾಸರನ್ನು ಸ್ಮರಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಇಲ್ಲಿ ಎಲ್ಲ ಸಮುದಾಯದವರನ್ನು ಕರೆದು ದೊಡ್ಡ ಪ್ರಮಾಣದಲ್ಲಿ ಕನಕದಾಸರ ಜಯಂತಿಯನ್ನು ಮಾಡಿದ್ದಾರೆ. ಅದಕ್ಕಾಗಿ ಸಮಸ್ತ ಹಾಲುಮತ ಸಮಾಜ ಬಾಂಧವರನ್ನು ಅಭಿನಂದಿಸುವುದಾಗಿ ಅವರು ತಿಳಿಸಿದರು.
ಗ್ರಾಮದ ಬಸವೇಶ್ವರ ವೃತ್ತದಿಂದ ವೇದಿಕೆಯತನಕ ಕುಂಭ ಮೇಳದೊಂದಿಗೆ ಡೊಳ್ಳು, ವಿವಿಧ ವಾದ್ಯಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.


ಹಾಲುಮತ ಸಮಾಜ ಬಾಂಧವರು ಬಾಲಚಂದ್ರ ಜಾರಕಿಹೊಳಿ ಅವರಿಗೆ ಕಂಬಳಿ ಹೊದಿಸಿ ಬೃಹತ್ ಹೂ-ಮಾಲೆಯನ್ನು ಹಾಕಿ ಸತ್ಕರಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಅಮರೇಶ್ವರ ಮಹಾರಾಜರು ವಹಿಸಿ ಆಶೀರ್ವಚನ ನೀಡಿದರು. ಮಾಳಿಂಗರಾಯ ಮಾರಾಯ, ಸಹದೇವರು ಸಾನಿಧ್ಯವಹಿಸಿದ್ದರು, ಪ್ರದೇಶ ಕುರುಬರ ಸಂಘದ ನಿದರ್ೇಶಕ ರಾಜೇಂದ್ರ ಸಣ್ಣಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಯುವ ಮುಖಂಡ ಸವರ್ೋತ್ತಮ ಜಾರಕಿಹೊಳಿ, ಜಿ.ಪಂ.ಮಾಜಿ ಸದಸ್ಯ ರಂಗಪ್ಪ ಇಟ್ಟನ್ನವರ, ಮಡ್ಡೆಪ್ಪ ತೋಳಿನವರ, ಗೋವಿಂದ ಕೊಪ್ಪದ, ಭೀಮಶಿ ಮಗದುಮ್ಮ, ವಿಠ್ಠಲ ಸವದತ್ತಿ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಡಾ. ಎಸ್.ಎಸ್. ಪಾಟೀಲ, ಟಿಎಪಿಸಿಎಂಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ, ಪ್ರಭಾ ಶುಗಸರ್್ ನಿದರ್ೇಶಕ ಕೆಂಚನಗೌಡ ಪಾಟೀಲ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ವೇದಿಕೆಯನ್ನು ಉಪಸ್ಥಿತರಿದ್ದರು.
ಯಾದವಾಡ ಗ್ರಾ.ಪಂ. ಅಧ್ಯಕ್ಷ ಬಸವರಾಜ ಭೂತಾಳಿ ಆಶಯ ಮಾತುಗಳನ್ನಾಡಿದರು.
ನಿವೃತ್ತ ಶಿಕ್ಷಕ ಅವ್ವಣ್ಣ ಮೋಡಿ ಮತ್ತು ಶಿಕ್ಷಕ ಎಂ.ವೈ. ಸಣ್ಣಕ್ಕಿ ಜಂಟಿಯಾಗಿ ನಿರೂಪಣೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!