ಬೆಳಗಾವಿ.
ಮಹಾನಗರ ಪಾಲಿಕೆಗೆ ಬರಬೇಕಾಗಿದ್ದ ತೆರಿಗೆ ವಸೂಲಾತಿಯಲ್ಲಿ ತೆರೆಮರೆ ಆಟ ಆಡಿದ್ದ ಕಂದಾಯ ಶಾಖೆಯ ನಾಲ್ವರಿಗೆ ಮತ್ತೇ ನೋಟೀಸ್ ಜಾರಿಯಾಗಿದೆ.
ಮಹಾನಗರ ಪಾಲಿಕೆ ಆಯುಕ್ತೆ ಶುಭ ಅವರು ಈ ನೋಟೀಸ್ ಜಾರಿ ಮಾಡಿದ್ದಾರೆ.
ಬೆಳಗಾವಿ ನಗರದ ಹೊವಲಯದಲ್ಲಿರುವ ವೆಗಾ ಹೆಲ್ಮೆಟ್ ಕಂಪನಿಯು ಮಹಾನಗರ ಪಾಲಿಜೆಗೆ ಬಹಳ ವರ್ಷದಿಂದ ಕಾನೂನು ಪ್ರಕಾರ ಕಟ್ಟಬೇಕಾಗಿದ್ದ ತೆರಿಗೆ ಕಟ್ಟಿರಲಿಲ್ಲ. ಪಾಲಿಕೆಯ ಮೂಲಗಳ ಪ್ರಕಾರ ಅದರ ಮೊತ್ತ ಎರಡು ಕೋಟಿಗೂ ಅಧಿಕವಾಗುತ್ತಿತ್ತು.

ಆದರೆ ಕಂದಾಯ ಶಾಖೆಯವರು ತಮ್ಮ ಜಿಎಸ್ಟಿ ತೆಗೆದುಕೊಂಡು ಕಂಪನಿಗೆ ಭಾರೀ ಭಾರೀ ರಿಯಾಯಿತಿ ನೀಡಿದರು ಎನ್ನುವ ಮಾತಿದೆ. ಆ ಜಿಎಸ್ಟಿಯಲ್ಲಿ ಎಷ್ಟು ಜನ ಪಾಲು ಮಾಡಿಕೊಂಡರು ಎನ್ನುವುದು ಗೊತ್ತಾಗಬೇಕಿದೆ.
ಈ ಸುದ್ದಿಯ ಬೆನ್ನಟ್ಟಿದ E BELAGAVI ಸಮಗ್ರ ವರದಿ ಪ್ರಕಟಿಸಿತ್ತು.ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಆಯುಕ್ತೆ ಶುಭ ಅವರು ಆ ವೆಗಾ ಕಂಪನಿಯ ಕಡತ ಮುಂದಿಟ್ಟುಕೊಂಡು ವಿಚಾರಣೆ ಮಾಡಿ ಕಂದಾಯ ಶಾಖೆಯ ನಾಲ್ವರಿಗೆ ನೋಟೀಸ್ ಜಾರಿ ಮಾಡಿದರು. ಅಷ್ಟೆ ಅಲ್ಲ ಆ ವೆಗಾ ಕಂಪನಿಯಿಂದ ಪಾಲಿಕೆಗೆ ಬರಬೇಕಾದ ಎಲ್ಲ ತೆರಿಗೆಯನ್ನು ಕಿಂಚಿತ್ತು ರಿಯಾಯಿತಿ ಇಲ್ಲದೇ ತಕ್ಷಣ ವಸೂಲಿ ಮಾಡಬೇಕೆಂದು ಸೂಚನೆ ನೀಡಿದರು.

ಈಗ ಪಾಲಿಕೆ ಕಂದಾಯ ಶಾಖೆಯ ಸಿಬ್ಬಂದಿಗಳು ಆ ವೆಗಾ ಕಫನಿಯಿಂದ ಬರಬೇಕಾದ ತೆರಿಗೆ ವಸೂಲಾತಿಗೆ ಸಿದ್ಧತೆ ನಡೆಸಿದ್ದಾರೆ.
ಇದು ಬೆಳಕಿಗೆ ಬಂದ ಒಂದು ಕಂಪನಿ ಕಥೆ. ಇದೇ ರೀತಿ ಕಳೆದ ಒಂದು ವರ್ಷದ ಅವಧಿಯಲ್ಲಿ ಈ ರೀತಿ ಪಾಲಿಕೆಗೆ ಬರಬೇಕಾದ ತೆರಿಗೆಯಲ್ಲಿ ಎಷ್ಡು ವಂಚನೆ ಮಾಡಲಾಗಿದೆ ಎನ್ನುವುದು ಬೆಳಕಿಗೆ ಬರಬೇಕಾಗಿದೆ.
ಆ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತೆ ಶುಭಾ ಅವರು ದಿಟ್ಟ ನಿರ್ಧಾರ ಮಾಡಬೇಕಿದೆ. ಇಲ್ಲಿ ವೆಗಾ ತೆರಿಗೆ ದೋಖಾ ಕೇಸ್ ಬೆಳಕಿಗೆ ಬಂದ ತಕ್ಷಣ ಕಂದಾಯ ಶಾಖೆ ಲೋಪ ಬೆಳಿಕಿಗೆ ಬಂದಿತು. ಆದರೆ ಇಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವ ಕೆಲಸವನ್ಬು ಆಯುಕ್ತರು ಮಾಡಬೇಕಿದೆ.
ತೀರಾ ಇತ್ತೀಚೆಗೆ ಖಾಸಗಿ ಶಿಕ್ಷಣ ಸಂಸ್ಥೆ ಗೆ ಚಲನ್ ತುಂಬಲು ಪಾಲಿಕೆಯ ಕಂದಾಯ ಶಾಖೆಯವರು ಮಾಡಿದ ಯಡವಟ್ಟು ಬೆಳಕಿಗೆ ಬಂದಿತ್ತು ಆಗಲೂ ಕೂಡ ‘ಇ ಬೆಳಗಾವಿ’ ಸಮಗ್ರ ವರದಿ ಪ್ರಕಟಿಸಿತ್ತು. ಆಗಲೂ ಆಯುಕ್ತರು ಕಂದಾಯ ಉಪ ಆಯುಕ್ತರು ಸೇರಿದಂತೆ ನಾಲ್ವರಿಗೆ ನೋಟೀಸ್ ಜಾರಿ ಮಾಡಿತ್ತು. ಈ ಬಗ್ಗೆ ತಕ್ಷಣ ಖುದ್ದು ಹಾಜರಾಗಿ ಉತ್ತರ ನೀಡಬೇಕೆಂದು ಆಯುಕ್ತರು ಆದೇಶ ಮಾಡಿದ್ದರು.ಆದರೆ ಆರೋಪ ಹೊತ್ತವರು ಏನ್ ಉತ್ತರ ಕೊಟ್ಟರು? ಅದರ ಮೇಲೆ ಆಯುಕ್ತರು ಯಾವ ಕ್ರಮ ತೆಗೆದುಕೊಂಡರು ಎನ್ನುವುದು ಇನ್ನೂ ನಿಗೂಢ.
ಇಲ್ಲಿ ಆಯುಕ್ತರು ಇಂತಹ ಪ್ರಕರಣಗಳಲ್ಲಿ ಕ್ರಮ ಜರುಗಿಸಿದರೆ ಮಾತ್ರ ಪಾಲಿಕೆ ಮರ್ಯಾದೆ ಉಳಿಬಹುದು. ಇಲ್ಲದಿದ್ದರೆ ಎಲ್ಲವೂ ಹೊಳೆಯಲ್ಲಿ ಹುಣಸೆ ತೊಳೆದಂತಾಗುತ್ತದೆ. ಕಾದು ನೋಡೋಣ.
.