“ಹೈಕೋರ್ಟ್ ಮಹತ್ವದ ತೀರ್ಪುನ್ನು ಸ್ವಾಗತಿಸುತ್ತೇವೆ. *ನ್ಯಾಯಾಲಯ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಸಿ.ಟಿ.ರವಿ ಅವರನ್ನು ನೋಟಿಸ್ ನೀಡದೆ ಬಂಧನ ಮಾಡಿರುವುದಕ್ಕೆ ನ್ಯಾಯಾಲಯ ಚಾಟಿ ಬೀಸಿದೆ. ಇನ್ನು ಬೆಳಗಾವಿಯಿಂದ ರವಿ ಅವರನ್ನು ಬಿಟ್ಟಿದ್ದೇ ಹೆಚ್ಚು ಎಂದು ಡಿಸಿಎಂ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಒಬ್ಬ ಸಚಿವ ಈ ರೀತಿ ಮಾಡುತ್ತಿರುವುದು ದುರಾಡಳಿತ. ನಾವು ನಮ್ಮ ಕಾರ್ಯಕರ್ತರು ಬಳೆ ತೊಟ್ಟು ಕೂತಿಲ್ಲ. ಈ ರೀತಿ ಗೂಂಡಾ ವರ್ತನೆಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.