Headlines

ಸಿದ್ದು ಕೆಳಗಿಳಿಸಲು ಡಿಕೆ ಗ್ಯಾಂಗ್ ಕಸರತ್ತು..?

ಬೆಂಗಳೂರು. ಮೈಸೂರು ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ FIR ದಾಖಲಾಗುತ್ತಿದ್ದಂತೆಯೇ ಕಾಂಗ್ರೆಸ್ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಅದರಲ್ಲೂ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ದಿನ ಪಕ್ಷ ಶಾಶ್ವತ..ಇವತ್ತು ಅವರು, ನಾಳೆ ಬೇರೆಯವರು ಎನ್ನುವ ಮಾತು ಸಿದ್ಧು ವಿರೋಧಿ ಬಣ ಮತ್ತಷ್ಟು ಪುಟಿದೇಳುವಂತೆ ಮಾಡಿದೆ. ಮೇಲ್ನೋಟಕ್ಕೆ ಡಿಕೆಶಿ ಬಣದಲ್ಲಿ ಗುರುತಿಸಿಕೊಂಡ ಸಚಿವರು, ಬಿಜೆಪಿಯನ್ನು ಟೀಕಿಸಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ ಎನ್ನುತ್ತಲೇ ಪರೋಕ್ಷವಾಗಿ ಡಿಕೆಶಿಯನ್ಬು ಆ ಪಟ್ಟಕ್ಕೆ ಕುಳ್ಳಿರಿಸುವ ಪ್ರಯತ್ನ…

Read More

ರಕ್ಷಣಾ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಾಗಿ ಶೆಟ್ಟರ್ ನೇಮಕ

ನವದೆಹಲಿ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ ಅವರನ್ನು ರಕ್ಷಣಾ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರನ್ನಾಗಿ ನಾಮಕರಣ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಈ ಸಮಿತಿಯಲ್ಲಿ ಒಟ್ಟು 31 ಜನ ಸದಸ್ಯರಿದ್ದು, ಇದರಲ್ಲಿ 10 ಜನ ರಾಜ್ಯಸಭಾ ಸದಸ್ಯರು ಹಾಗೂ 21 ಜನ ಲೋಕಸಭಾ ಸದಸ್ಯರು ಇರುವರು, ರಾಧಾ ಮೋಹನ ಸಿಂಗ್ ಸಮಿತಿಯ ಅಧ್ಯಕ್ಷರಾಗಿದ್ದಾರೆ ಸದರಿ ನೇಮಕಾತಿ ತಮಗೆ ಸಂತಸ ತಂದಿದೆಯಂದು ಸಂಸದ ಜಗದೀಶ ಶೆಟ್ಟರ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Read More

ಅತ್ಯಾಚಾರ, ಕೊಲೆ ಆರೋಪಿಗೆ ಗಲ್ಲು ಶಿಕ್ಷೆ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ; ಆರೋಪಿಗೆ ಗಲ್ಲು ಶಿಕ್ಷೆ. ಕೋರ್ಟ ಮಹತ್ವದ ತೀರ್ಪು. ಬೆಳಗಾವಿ : ಚಾಕಲೇಟು ನೀಡುವ ನೆಪದಲ್ಲಿ ೩ ವರ್ಷದ ಬಾಲಕಿಯನ್ನು ತನ್ನೊಂದಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಅಮಾನುಷವಾಗಿ‌ ಕೊಂದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ. 7 ವರ್ಷದ ಹಿಂದೆ ಬೆಳಗಾವಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಈ ಘಟನೆ ನಡೆದಿತ್ತು. ಹಾರೂಗೇರಿಯ 3 ವರ್ಷದ ಬಾಲಕಿಯ ಅಪಹರಣ, ಅತ್ಯಾಚಾರ, ಕೊಲೆ ಪ್ರಕರಣ ಇದೀಗ ತನಿಖೆಯಾಗಿ, ಅಪರಾಧಿಗೆ ಗಲ್ಲು…

Read More

ಸಿಎಂ ವಿರುದ್ಧ‌420 ಕೇಸ್

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 120 ಬಿ, 166, 403, 420, 426, 465, 468, 340, 351 ಅಡಿಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ 1988ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೈಸೂರು ಲೋಕಾಯುಕ್ತ ಎಸ್ ಪಿ ಉದೇಶ್, ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶದಂತೆ ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್ ನಲ್ಲಿ ಸಿಎಂ…

Read More

ಹಾವೇರಿಗೂ ಒಂದೇ ಭಾರತ ನಿಲ್ಲಬೇಕು…!

ಹಾವೇರಿ – ಗದಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ರೈಲ್ವೇ ಕಾಮಗಾರಿಗಳ ನಿರ್ಮಾಣ ಹಾಗೂ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಸವರಾಜ ಬೊಮ್ಮಾಯಿ ಹಾವೇರಿಗೆ ವಂದೇ ಭಾರತ ರೈಲು ನಿಲುಗಡೆಗೆ ಕ್ರಮ ವಹಿಸಲು ಸಂಸದ ಬಸವರಾಜ ಬೊಮ್ಮಾಯಿ ಸೂಚನೆ ಹುಬ್ಬಳ್ಳಿ: ಹಾವೇರಿ – ಗದಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರೈಲ್ವೇ ಕಾಮಗಾರಿಗಳ ನಿರ್ಮಾಣ ಹಾಗೂ ಪ್ರಗತಿ ಪರಿಶೀಲನಾ ಸಭೆಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ – ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿರವರು ನಡೆಸಿ ಹಾವೇರಿಯಲ್ಲಿ…

Read More

ಸಿದ್ಧು ನಂತರ‌ ಮತ್ತೊಬ್ಬ ಸಚಿವರ ವಿರುದ್ಧ ಗೌರ್ನರಗೆ ದೂರು?

ಆ ಪ್ರಭಾವಿ ಸಚಿವರ ವಿರುದ್ಧವೂ ರೆಡಿ ಆಗ್ತಿದೆ ದೂರು. ದಾಖಲೆ ಮುಂದಿಟ್ಟುಕೊಂಡು ಡ್ರಾಫ್ಟ್ ಸಿದ್ದಪಡಿಸುತ್ಯಿರುವ ಬಿಜೆಪಿಗರು ಮತ್ತು ಕೆಲ ವಕೀಲರು. ಶೀಘ್ರವೇ ಲೋಕಾಯುಕ್ತರಿಗೆ ದೂರು. ಕ್ರಮಚಾಗದಿದ್ದರೆ ಗೌರ್ನರಗೆ ದೂರು. ಬೆಂಗಳೂರು. 40/ವರ್ಷಗಳ ಕಾಲ ರಾಜಕೀಯ ಜೀವನದಲ್ಲಿ ಶುದ್ಧ ಹಸ್ತ ಎಂದೇ ಗುರುತಿಸಿಕೊಂಡಿರುವ ಸಿದ್ದರಾಮಯ್ಯನವರಿಗೆ ಈಗ ಮುಡಾ ಅಕ್ರಮದ ಕಂಟಕ ಎದುರಾಗಿದೆ. ಹೈಕೋರ್ಟ್‌ ಮತ್ತು ಜನಪ್ರತಿನಿಧಿಗಳ ನ್ಯಾಯಾಲದ ತನಿಖೆ ಆದೇಶದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ನಾಲ್ಕು ದಶಕಗಳಲ್ಲಿ :ಶುದ್ಧರಾಮಯ್ಯ ಎಂದೇ ಹೆಸರು ಪಡೆದವರು…

Read More

ಗಾಳೀಲಿ ಗುಂಡು ಹೊಡಿಬೇಡಿ..ಚರ್ಚೆಗೆ ಬನ್ನಿ

ತುರ್ತು ಭ್ರಷ್ಟಾಚಾರದ ಆರೋಪದ ಕಳಂಕ ಮೆತ್ತಿಕೊಂಡಿಲ್ಲದ ಒಬ್ಬನೇ ಒಬ್ಬ ನಾಯಕನನ್ನು ಕರ್ನಾಟಕದ ಬಿಜೆಪಿಯಲ್ಲಿ ನೀವು ತೋರಿಸಿದರೆ ನಿಮ್ಮನ್ನು ಕರ್ನಾಟಕಕ್ಕೆ ಗೌರವದಿಂದ ಕರೆಸಿ ಸಾರ್ವಜನಿಕವಾಗಿ ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತೇವೆ ದೂರದ ಊರಲ್ಲಿ ಕೂತು ಗಾಳಿಯಲ್ಲಿ ಗುಂಡು ಹೊಡೆಯಬೇಡಿ, ನೇರಾನೇರ ಚರ್ಚೆಗೆ ಬನ್ನಿ- ಸಿದ್ದರಾಮಯ್ಯ ಸವಾಲು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಎರಡುವರೆ ಸಾವಿರ ಕೋಟಿ ರೂಪಾಯಿಗಳಿಗೆ ಹರಾಜು ಹಾಕಿ ಹಣ ಪೀಕಿದ್ದಾರೆ ಎಂಬ ಆರೋಪವನ್ನು ಸ್ವಪಕ್ಷದ ನಾಯಕರಿಂದಲೇ ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ…

Read More

CM ರಾಜೀನಾಮೆ ನೀಡಲ್ಲ

ಹೈಕೋರ್ಟ್ ತೀರ್ಪಿನಿಂದ ಸಿಎಂ, ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ತನಿಖೆಗೆ ಅನುಮತಿ ನೀಡಿದೇ ಅಷ್ಟೇ, ಆದರೆ ಹೈಕೋರ್ಟ್ ತೀರ್ಪಿನಿಂದ ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. ಹೈಕೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ನಗರದ ಕಾಂಗ್ರೆಸ್‌ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು,…

Read More

ಕಾಂಗ್ರೆಸ್ ಕಚೇರಿಯಲ್ಲಿ ಉಪನ್ಯಾಸಕರ ಧರಣಿ

ಚನ್ನಮ್ಮವಿವಿ ಅರ್ಥಶಾಸ್ತ್ರ ಉಪನ್ಯಾಸಕರ ಮುಷ್ಕರ ಬೆಳಗಾವಿ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದ ಅರ್ಥಶಾಸ್ತ್ರ ವಿಷಯವನ್ನು ನಿಯಮ ಬಾಹಿರವಾಗಿ ಕಡಿಮೆ ಮಾಡಿರುವ ವಿಷಯಕ್ಕೆ ಸಂಬಂಧಪಟ್ಟಂತೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆ (ಪೋರಮ್) ಸದಸ್ಯರು ಮೌಲ್ಯಮಾಪನವನ್ನು ಬಹಿಷ್ಕರಿಸಿ ಮೌಲ್ಯಮಾಪನ ಕೇಂದ್ರ ಮುಖ್ಯಸ್ಥರಾದ ಎಚ್ಚ ಜೆ ಮೂಳೆರಕಿ ಅವರಿಗೆ ಮನವಿಪತ್ರ ಸಲ್ಲಿಸಿ ನೀಡಿದ್ದಾರೆ. ಸೋಮವಾರದಿಂದ ಸ್ಥಳೀಯ ಮರಾಠ ಮಂಡಳ ಪದವಿ ಕಾಲೇಜಿನಲ್ಲಿ ಆರಂಭವಾಗಿರುವ ಪದವಿ ಮೌಲ್ಯಮಾಪನ ಕೇಂದ್ರದಲ್ಲಿ ನಡೆಯುತ್ತಿರುವ ಈ ಮುಷ್ಕರ, ಮೊದಲಿನಿಂದಲೂ ವಾಣಿಜ್ಯಶಾಸ್ತ್ರದಲ್ಲಿ ಅರ್ಥಶಾಸ್ತ್ರ ವಿಷಯವನ್ನು ಅಧ್ಯಯನ ವಿಷಯವಾಗಿ…

Read More

ಸಿಎಂ‌ ವಿರುದ್ಧ ತೀರ್ಪು..ಮುಂದೆ ಯಾರು.?

ಬೆಂಗಳೂರು. ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸಿಎಂ ಸಿದ್ಧರಾಮಯ್ಯನವರಿಗೆ ಬಿಗ್ ಶಾಕ್ ನೀಡಿದೆ. ಈಗ ಮುಖ್ಯಮಂತ್ರಿಗಳು ಸರ್ವೋಚ್ಚ ನ್ಯಾಯಾಲಯ ಮೆಟ್ಡಿಲು ಹತ್ತುವ ಸಿದ್ಧತೆ ನಡೆಸಿದ್ದಾರೆ. ಆದರೆ ಇಸೆಲ್ಲದರ ನಡುವೆ ಕಾಂಗ್ರೆಸ್ ಹೈಕಮಾಂಡ ಸಿದ್ಧರಾಮಯ್ಯನವರನ್ನು ಕೆಳಗಿಳಿಸಿ ಬೇರೋಬ್ಬರನ್ನು ಆ ಜಾಗಕ್ಕೆ ಕುಳ್ಳಿಸುವ ಚಿಂತನೆ ನಡೆಸಿದೆ ಎಂದು ಗೊತ್ತಾಗಿದೆ. ಇದೆಲ್ಲದರ ನಡುವೆ ಮುಖ್ಯಮಂತ್ರಿ ಗಳು ಇಂದು ಮಧ್ಯಾಹ್ನ 3 ಕ್ಕೆ ಕರೆದ ಸುದ್ದಿಗೋಷ್ಠಿಯಲ್ಲಿ ಏನು ಹೇಳಬಹುದು ಎನ್ನುವ ಕುತೂಹಲ ಎಲ್ಲರಲ್ಲಿದೆ. ದೆಹಲಿಯಿಂದ ಬಂದ ಮೂಲಗಳ ಪ್ರಕಾರ ಮುಂದಿನ ಉತ್ತರಾಧಿಕಾರದ ಆಯ್ಕೆ…

Read More
error: Content is protected !!