ಠಾಣೆಯಲ್ಲಿ ಶಾಸಕರ ಠಿಕಾಣಿ..!
ಶಾಸಕ ಅಭಯ ಪಾಟೀಲರಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸಾಥ್. ಬಿಜೆಪಿ ಕಾರ್ಯಕರ್ತರು, ನಗರಸೇವಕರ ಹಾಜರಿ.. ಶಾಸಕರನ್ನು ಎರಡು ತಾಸು ಕಾಯಿಸಿದ ಪೊಲೀಸ್ ಅಧಿಕಾರಿಗಳು! ಬೆಳಗಾವಿ. ಮತದಾರರಿಗೆ ಕಾಂಗ್ರೆಸ್ ಅಭ್ಯರ್ಥಿ ಪರ ಮತದಾನ ಮಾಡಲು ಹಣ ಹಂಚುತ್ತಿದ್ದ ಪ್ರಕರಣದ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಕೂಗು ಹೆಚ್ಚಾಗಿದೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಶಹಾಪುರ ಪೊಲೀಸ ಠಾಣೆಗೆ ಆಗಮಿಸಿದ ಶಾಸಕ ಅಭಯ ಪಾಟೀಲ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕಚಟಗಿಮಠರು…

