PSI ಆಸನದಲ್ಲಿ ಸ್ವಾಮೀಜಿ…!
PSI ಕುರ್ಚಿ ಮೇಲೆ ಸ್ವಾಮೀಜಿ..! ಮೇರೆ ಮೀರಿದ ಅಭಿಮಾನ..!!? ಬೆಳಗಾವಿ:. ಸರಕಾರಿ ಕಚೇರಿ ಮತ್ತು ಅಧಿಕಾರಿಗೆ ನೀಡಲಾದ ವಾಹನ ಮತ್ತು ಇತರ ಸೌಕರ್ಯಗಳನ್ನು ಖಾಸಗಿ ಇಲ್ಲವೇ ರಾಜಕೀಯ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಬಳಕೆ ಮಾಡಬಾರದು.. ಈ ನಡುವೆ ಯೂನಿಫಾರ್ಮ್ ಇಲಾಖೆಯ PSI ಒಬ್ಬ ತನ್ನ ಕಚೇರಿಯ ಅಧಿಕೃತ ಕುರ್ಚಿಯನ್ನು ಸ್ವಾಮೀಜಿ ಒಬ್ಬರಿಗೆ ಬಿಟ್ಟುಕೊಟ್ಟು ತಾನು ಮುಂದೆ ಕೈಕಟ್ಟಿ ಕುಳಿತಿರುವ ದೃಶ್ಯ ಈಗ ಎಲ್ಲೆಡೆ ಚರ್ಚೆ ಎಡೆಮಾಡಿಕೊಟ್ಡಿದೆ. . ಸರಕಾರಿ ಅಧಿಕಾರಿ, ಶಾಸಕ ಇಲ್ಲವೇ ಮಂತ್ರಿಗಳಿಗೆ ವೈಯಕ್ತಿಕವಾಗಿ ನಮಸ್ಕಾರ…

