Headlines

ಶೆಟ್ಡರ್ ಹಠಾವ್ ಬೆಂಗಳೂರಿನಲ್ಲಿ ಹಲ್ ಚಲ್.!

ಬೆಂಗಳೂರಿಗೆ ತೆರಳಿದ ಬೆಳಗಾವಿ ಬಿಜೆಪಿಗರು. ಬೆಳಗಾವಿಗೆ ಶೆಟ್ಟರ್ ಬೇಡವೇ ಬೇಡ ನಿಯೋಗದಲ್ಲಿ ಘಟಾನುಘಟಿಗಳು ಭಾಗಿ. ಶೆಟ್ಡರ್ ಆದ್ರೆ ಬೆಳಗಾವಿ ಗೆಲ್ಲೋದು ಕಷ್ಟವಂತೆ. ಬೆಂಗಳೂರು. ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಭವನೀಯ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹಠಾವೊ ಈಗ ಬೆಂಗಳೂರು ಅಂಗಳದಲ್ಲಿದೆ. ಬೆಳಗಾವಿ ಬಿಜೆಪಿಗರ ನಿಯೋಗವು ಬೆಂಗಳೂರಿನಲ್ಲಿ ಬಿಜೆಪಿಯ ನಾಯಕರನ್ನು ಭೆಟ್ಟಿ ಮಾಡಿ ಕ್ಷೇತ್ರದ ವಾಸ್ತವ ಚಿತ್ರಣವನ್ಬು ಮನವರಿಕೆ ಮಾಡಿಕೊಡುತ್ತಿದೆ ಇದನ್ನೂ ಓದಿ https://ebelagavi.com/index.php/2024/03/16/we-4/ ಶೆಟ್ಟರ್ ಅವರು ಬೆಳಗಾವಿ ಬಿಜೆಪಿಗರ ಬಗ್ಗೆ ಆಡಿದ ಅಮಾನವೀಯ ಮಾತು ಸೇರಿದಂತೆ ಎಲ್ಲವನ್ಬು…

Read More

ಶೆಟ್ಟರ್ ವಿರುದ್ಧ ನಿಲ್ಲದ ಮುನಿಸು..!

ಬೆಳಗಾವಿ. ಹುಬ್ಬಳ್ಳಿಯ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸಮುದ್ರದ ಅಲೆ ವಿರುದ್ಧ ದಿಕ್ಕಿನಲ್ಲಿ ಈಜುತ್ತಿದ್ದಾರೆ. ಇದರರ್ಥ ಅವರು ಗೆಲುವಿನ ದಡ ತಲುಪುವರೇ ಹೇಗೆ ಎನ್ನುವ ಊಹೆ ತಮಗೆ ಬಿಟ್ಟಿದ್ದು.! ಬೆಳಗಾವಿಯಲ್ಲೇ ಸಾಕಷ್ಟು ಜನ ಪ್ರಭಲ ಅಭ್ಯರ್ಥಿ ಗಳಿದ್ದಾರೆ. ಅವರಿಗೆನೇ ಟಿಕೆಟ್ ಕೊಡಬೇಕು ಎನ್ಬುವ ಸಣ್ಣ ಮಟ್ಟದ ಕೂಗು ಈಗ ಆಲದಮರವಾಗಿ ಬೆಳೆದು ನಿಂತಿದೆ. ಅದರಲ್ಲೂ ಶೆಟ್ಟರ್ ಅವರು ಡಾ. ಪ್ರಭಾಕರ ಕೋರೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ…

Read More

ಈ‌ ಸಾವು ನ್ಯಾಯವೇ?

ಶವಾಗಾರದ ಮುಂದೆ ಕಣ್ಣೀರಿಟ್ಟ ಕುಟುಂಬ ಬಾಣಂತಿ ಹಾಗೂ ಮಗು ಇಬ್ಬರೂ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ. ಸಂತಿಬಸ್ತಿವಾಡ ಗ್ರಾಮದ ಲಕ್ಷ್ಮೀ ಹಳ್ಳಿ (28)ಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ನಿನ್ನೆ ರಾತ್ರಿ ಕಿಣೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಲಕ್ಷ್ಮೀ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು.ಆದರೆ ಬಾಣಂತಿ ಲಕ್ಷ್ಮೀಗೆ ತೀವ್ರ ರಕ್ತಸ್ರಾವ ಆರಂಭವಾಗಿತ್ತು. ಇದರಿಂದ ವೈದ್ಯರು ಬೆಳಗಾವಿ ಭಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಸಲಹೆಯಂತೆ ಬಾಣಂತಿ, ಮಗುವನ್ನು ಭಿಮ್ಸ್ ಆಸ್ಪತ್ರೆಗೆ…

Read More

ಸಂವಿಧಾನ ಉಳಿಸಿ.ಕಾಂಗ್ರೆಸ್ ಗೆಲ್ಲಿಸಿ..ಸತೀಶ್

“ರಾಜ್ಯದಲ್ಲಿ ಕಾಂಗ್ರೆಸ್ 15-20 ಸ್ಥಾನ ಗೆಲ್ಲಲಿದೆ: ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ Mar, 18 2024Ashok M0ಬೆಳಗಾವಿ:   ಎಲ್ಲಾ ಸಮುದಾಯದಲ್ಲಿಯೂ ರಾಮ ಇದ್ದಾನೆ,   ನಾವು ಕೂಡ ಚುನಾವಣೆಯ ತಂತ್ರ ಅನುಸರಿಸಿ  ರಾಜ್ಯದಲ್ಲಿ  ಕಾಂಗ್ರೆಸ್ 15-20 ಸ್ಥಾನ ಗೆಲ್ಲುವು ಸಾಧಿಸುತ್ತೆವೆ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪಕ್ಷಗಳು ತಂತ್ರ ರೂಪಿಸುವುದು ಸರ್ವೇ ಸಾಮಾನ್ಯ, ನಾವು ಕೂಡ  ಚುನಾವಣೆ ವೇಳೆ…

Read More

ಕಾಂಗ್ರೆಸ್ ಹೋಗಲ್ಲ ಹೋಗಲ್ಲ.- ಕತ್ತಿ

ಕಾಂಗ್ರೆಸ್ ಹೋಗಲ್ಲ ಹೋಗಲ್ಲ…!ಬೆಳಗಾವಿ. ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಹೋಗುವ ಮಾತೇ ಇಲ್ಲ ಎಂದು‌ ಮಾಜಿ ಸಂಸದ ರಮೇಶ ಕತ್ತಿ ಸ್ಪಷ್ಟಪಡಿಸಿದ್ದಾರೆ.ಸತೀಶ್ ಜಾರಕಿಹೊಳಿ ಅವರು ಕತ್ತಿ ಕಾಂಗ್ರೆಸ್ ಗೆ ಬಂದರೆ ಸ್ವಾಗತ ಎನ್ನುವ ಹೇಳಿಕೆಗೆ ಈ ಸ್ಪಷ್ಟನೆ ನೀಡಿದ್ದಾರೆ. ನಾನು ಯಾರ ಬಳಿ ಕೂಡ ಬಿಜೆಪಿ ತ್ಯಜಿಸುವ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ ಎಂದು ಹೇಳಿದ್ದಾರೆ.ಕಳೆದ ಹಲವು ವರ್ಷಗಳಿಂದಲೂ ನಮ್ಮ‌ ಕತ್ತಿ ಕುಟುಂಬ ಬಿಜೆಪಿಗೆ ನಿಷ್ಠವಾಗಿದೆ. ಹೀಗಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್…

Read More

ರಮೇಶ ಕತ್ತಿ ಕಾಂಗ್ರೆಸ್ ಗೆ ಬಂದ್ರೆ ಸ್ವಾಗತ

“ಚಿಕ್ಕೋಡಿ: ಮಾಜಿ ಸಂಸದ,  ಬಿಜೆಪಿ ನಾಯಕ ರಮೇಶ್ ಕತ್ತಿ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ. ರಮೇಶ್ ಕತ್ತಿ ಪಕ್ಷಕ್ಕೆ ಬರುವ ಕುರಿತು ಕಾರ್ಯಕರ್ತರ ಸಭೆ ಮಾಡುತ್ತಿದ್ದೇವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. ಚಿಕ್ಕೋಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕ ಲಕ್ಷ್ಮಣ್​​ ಸವದಿ, ಎಂಎಲ್‌ ಸಿ ಪ್ರಕಾಶ್​ ಹುಕ್ಕೇರಿ ಸೇರಿದಂತೆ ಚಿಕ್ಕೋಡಿ ಭಾಗದ ನಾಯಕರ ಅಭಿಪ್ರಾಯ ಪಡೆಯಲು ಸಭೆ ನಡೆಸುತ್ತಿದ್ದೇವೆ. ರಮೇಶ್ ಕತ್ತಿ ಜೊತೆಗೆ ನಮ್ಮದು ಯಾವುದೇ ಮಾತುಕತೆ ಆಗಿಲ್ಲ. ರಮೇಶ್…

Read More

ಖಾನಾಪುರ ಎಸಿಎಫ್ ಆಗಿ‌ ನಿಂಬರಗಿ ಅಧಿಕಾರ ಸ್ವೀಕಾರ

ಬೆಳಗಾವಿ. ಖಾನಾಪುರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸುನಿತಾ ನಿಂಬರಗಿ ಅವರು ಇಂದು ಅಧಿಕಾರ ಸ್ವೀಕರಿಸಿದರು. ಇದಕ್ಕೂಮುಂಚೆ ಅವರು ರಾಯಬಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

Read More

ಕಾಂಗ್ರೆಸ್ 50 ಸೀಟು ಗೆಲ್ಲಲ್ಲ ಬಿಡಿ…!

ಕಾಂಗ್ರೆಸ್ ಗೆ ಅಬ್ ಕಿ ಬಾರ್ 50 ಪಾರ್ ಅಂತ ಹೇಳುವ ದೈರ್ಯ ಇದಿಯಾ ?: ಬೊಮ್ಮಾಯಿ ಸವಾಲು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 50 ಸ್ಥಾನ ಗೆದ್ದು ತೋರಿಸಲಿ: ಖರ್ಗೆ, ರಾಹುಲ್ ಗಾಂಧಿಗೆ ಬಸವರಾಜ ಬೊಮ್ಮಾಯಿ ಸವಾಲು ಹಾವೇರಿ: ಈ ಬಾರಿ ದೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅಬ್ ಕೀ ಬಾರ್ 50 ಪಾರ್ ಅಂತಾ ಹೇಳೋ ದೈರ್ಯ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದ್ದೇಯಾ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು…

Read More

ಈಶ್ವರಪ್ಪ ಮನವೊಲಿಕೆ ವಿಶ್ವಾಸ- ಬೊಮ್ಮಾಯಿ

ಈಶ್ವರಪ್ಪ ಮನವೊಲಿಕೆ ಆಗುವ ವಿಶ್ವಾಸವಿದೆ: ಬಸವರಾಜ ಬೊಮ್ಮಾಯಿ ಕ್ಷೇತ್ರ ಬದಲಾವಣೆ ಆಗುವ ಬಗ್ಗೆ ಮಾಹಿತಿ ಇಲ್ಲ: ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ: ಮಾಜಿ ಡಿಸಿಎಂ ಅವರ ಮನವೊಲಿಕೆಗೆ ರಾಷ್ಟ್ರೀಯ ನಾಯಕರು ಅವರೊಂದಿಗೆ ಮಾತನಾಡುತ್ತಿದ್ದಾರೆ. ಅವರ ಮನವೊಲಿಕೆ ಆಗುತ್ತದೆ ಎಂದು ಮಾಜಿ ಸಿಎಮ್ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿಯ ಆದರ್ಶನಗರದ ನಿವಾಸದ ಬಳಿ ಮಾತನಾಡಿದ ಅವರು, ರಾಷ್ಟ್ರೀಯ ನಾಯಕರು ಈಶ್ವರಪ್ಪ ನವರ ಮನವೊಲಿಕೆ ಮಾಡುತ್ತಿದ್ದಾರೆ. ಅವರ ಮನವೊಲಿಕೆ ಆಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ‌…

Read More

ಬೆಳಗಾವಿಯಲ್ಲಿ ಪಂಚಮಸಾಲಿ v/s ಪಂಚಮಸಾಲಿ

ಬೆಳಗಾವಿ.ಗಡಿನಾಡ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬದಲಾದ ರಾಜಕೀಯ ಸನ್ನಿವೇಶವು ಬಿಜೆಪಿ ಹಾಲಿ ಸಂಭವನೀಯ ಅಭ್ಯರ್ಥಿಯನ್ನು ಬದಲಾಯಿಸುವ ಮಾತುಗಳು ಕೇಳಿ ಬರುತ್ತಿವೆ. ಕಳೆದ ದಿನವಷ್ಟೆ ಹುಬ್ಬಳ್ಳಿಯ ಜಗದೀಶ ಶೆಟ್ಟರ್ ಅವರು ಬೆಳಗಾವಿ ಬಿಜೆಪಿಗರಿಗೆ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಜೆಪಿಗರು ಯಾವುದೇ ಕಾರಣಕ್ಕೂ ಶೆಟ್ಟರ್ ಪರ ಪ್ರಚಾರಕ್ಕೆ ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲ ೮ ಜನ ಘಟಾನುಘಟಿಗಳೇ ಕ್ಷೇತ್ರವ್ಯಾಪಿ ಪ್ರಚಾರ ಮಾಡಿ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು ಎನ್ನುವ ಮಾತುಗಳು ಕೇಳಿ ಬಂದಿದ್ದವು….

Read More
error: Content is protected !!