ಬೆಳಗಾವಿ.
ಗಡಿನಾಡ ಬೆಳಗಾವಿ ನಗರದಲ್ಲಿ ತೀವೃ ಚರ್ಚೆಗೆ ಗ್ರಾಸವಾಗಿರುವ ಛತ್ರಪತಿ ಸಂಭಾಜಿ ಮಹಾರಾಜರ ಮೂರ್ತಿ ಅನಾವರಣ ಕಾರ್ಯಕ್ರಮವನ್ನು ಮುಂದೂಡಬೇಕೆಂದು ಪಾಲಿಕೆ ಆಯುಕ್ತರು ಮೇಯರ್ ಗೆ ಪತ್ರವನ್ಬು ಬರೆದಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರುಈ ವಿಷಯ ತಿಳಿಸಿದರು.

ಈ ಮೂರ್ತಿ ಸ್ಥಾಪನೆಗೆ ಪಾಲಿಕೆ ಅನುದಾನ ನೀಡಿದೆ. ಅದನ್ಬು ಇನ್ನಷ್ಟು ಅದ್ದೂರಿ ಮಾಡಬೇಕು ಎನ್ನುವುದು ಆ ಭಾಗದ ಜನರ ಆಶಯ. ಮೇಲಾಗಿ ಈ ವಿಷಯದಲ್ಲಿ ಕೋರ್ಟನ ನಿರ್ದೇಶನದ ಜೊತೆಗೆ ಶಿಷ್ಟಾಚಾರವನ್ನು ಪಾಲಿಸಬೇಕು. ಆದ್ದರಿಂದ ಅದನ್ನು ಕೆಲ ದಿನಗಳ ಮುಂದೂಡಬೇಕು ಎಂದು ಆಯುಕ್ತರು ಮೇಯರ್ ಗೆ ಪತ್ರ ಬರೆದಿದ್ದಾರೆಂದರು.

ಇನ್ನು ಮಹಾನಗರ ಪಾಲಿಕೆಯ ಆಡಳಿತ ಬಗ್ಗೆಯೂ ಸಚಿವರು ತೀವೃ ಅಸಮಾಧಾನ ಹೊರಹಾಕಿದರು. ತೆರಿಗೆ ವಸೂಲಾತಿಯಲ್ಲಿ ಆಗುತ್ತಿರುವ ಭಾರೀ ಪ್ರಮಾಣದ ಸೋರಿಕೆಯನ್ನು ತಡೆಗಟ್ಟಬೇಕಾಗಿದೆ.
ನಗರದ ಹೊರವಲಯದಲ್ಲಿರುವ ವೆಗಾ ಹೆಲ್ಮೆಟ್ ಕಂಪನಿಯ ತೆರಿಗೆ ವಸೂಲಾತಿಯಲ್ಲಿ ಆದ ಲೋಪದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡುವುದಾಗಿ ಹೇಳಿದರು.
ಪಾಲಿಕೆಯಲ್ಲಿ ಈ ರೀತಿ ತೆರಿಗೆ ಚಸೂಲಾತಿ ಮಾಡಬೇಕಾದ ಅಧಿಕಾರಿಗಳು ಬೇರೆ ರೀತಿ ವಸೂಲಾತಿಯಲ್ಲಿ ತೊಡಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಶೀಘ್ರವೇ ಪಾಲಿಕೆಯಲ್ಲಿ ಸಭೆ ನಡೆಸಲಾಗುವುದು ಎಂದರು.