ಬೆಳಗಾವಿ. ನಾಳೆ ದಿನಾಂಕ 5 ರಂದು ನಿಗದಿಯಾಗಿದ್ದ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅನುಮತಿ ನಿರಾಕರಿಸಿದ್ದಾರೆ ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈಗ ಜಾಗೋ ಹಿಂದು ಜಾಗೋ ಸೇರಿದಂತೆ ಚಲೋ ಅನಗೋಳ ಅಭಿಯಾನ ಶುರುವಾಗಿ ಬಿಟ್ಟಿದೆ.
ಅನಗೋಳ ನಾಕಾದಲ್ಲಿ ಮೂರ್ತಿ ಕೂಡಿಸಿದ ಸ್ಥಳಕ್ಕೆ ಭೆಟ್ಟಿ ನೀಡಿದ ಸಂದರ್ಶನದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್, ಪಾಲಿಕೆ ಆಯುಕ್ತೆ ಶುಭ ಅವರು ಶ್ರೀರಾಮ ಸೇನೆ ಮುಖಂಡ ರಮಾಕಾಂತ ಕೊಂಡುಸ್ಕರ ಮತ್ತು ಅನಗೋಳ ಪಂಚರೊಂದಿಗೆ ಚರ್ಚೆ ನಡೆಸಿದರು.
ಜಿಲ್ಲಾಧಿಕಾರಿ ಏನಂದ್ರು?
ಜಿಲ್ಲಾಡಳಿತದಿಂದ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಇಲ್ಲಿನ ಜನ ನಮ್ಮ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ, ನಾಳೆ ಎಲ್ಲರೂ ಆರಾಮವಾಗಿ ಮನೆಯಲ್ಲಿ ಇರಬೇಕು, ಇಲ್ಲಿ ನಾವು ಆಡಳಿತ ಮತ್ತು ಪೊಲೀಸ್ ಇಲಾಖೆ ವತಿಯಿಂದ ನಮ್ಮ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಜಿಲ್ಲಾಡಳಿತದ ಮೇಲೆ ಭರವಸೆ ಇಟ್ಟುಕೊಳ್ಳಬೇಕು ಎಂದು ಕೋರಿಕೆಗೆ ಎಲ್ಲರೂ ಒಪ್ಪಿಕೊಂಡಿದ್ದಾರೆ, ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಇರುತ್ತಾರೆ ಎನ್ನುವ ವಿಶ್ವಾಸ ನಮ್ಮದಲ್ಲಿದೆ ಎಂದು ಡಿಸಿ ಹೇಳಿದರು.
ಈಗ ಇದರ ಬಗ್ಗೆ ಸುಧೀರ್ಘವಾಗಿ ಅರ್ಧತಾಸು ಚಚರ್ೆ ನಡೆಸಿದ್ದೇವೆ. ಯಾವಾಗ ಕಾರ್ಯಕ್ರಮ ಹೇಗೆ ಆಗಬೇಕು ಎನ್ನುವುದನ್ನು ಎಲ್ಲ ಮುಖಂಡರು ನಮಗೆ ಹೇಳಿದ್ದಾರೆ, ಆ ತಿಳುವಳಿಕೆ ನಮಗೆ ಬಂದಿದೆ, ಅದಕ್ಕೆ ತಕ್ಕಂತ ವ್ಯವಸ್ಥೆಯನ್ನು ಸೂಕ್ತ ಸಮಯದಲ್ಲಿ ಪಾಲಿಕೆಯಿಂದ ಸೂಕ್ತ ಸಮಯದಲ್ಲಿ ಮಾಡಿಕೊಳ್ಳುತ್ತೇವೆ ಎನ್ನುವ ಭರವಸೆಯನ್ನು ನೀಡಲಾಗಿದೆ ಎಂದು ಡಿಸಿ ಮೊಹಮ್ಮದ ರೋಷನ್ ಹೇಳಿದರು.
ನಾಳೆ ನಡೆಯಲಿರುವ ಕಾರ್ಯಕ್ರಮದ ಆಯೋಜಕರ ಜೊತೆ ಮಾತನಾಡಿ ರೂಪುರೇಷೆ ಹೇಗಿರಬೇಕು ಎನ್ನುವುದರ ಬಗ್ಗೆ ಮಾತಾನಾಡುತ್ತೇನೆ ಎಂದು ಅವರು ಹೇಳಿದರು.
ಅಭಯ ಪಾಟೀಲ ಏನಂದ್ರು? ಈಗಾಗಲೇ ಜನರ ಆಶಯದಂತೆ ನಾವು ನಾಳೆ ದಿ, 5 ರಂದು ನಡೆಯುವ ಕಾರ್ಯಕ್ರಮವನ್ನು ನಿಗದಿ ಮಾಡಿದ್ದೇವೆ. ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದಾಗಲು ಅದರ ಬಗ್ಗೆ ವಿವರಿಸಿದ್ದೇವೆ
ಈಗ ಜಿಲ್ಲಾಧಿಕಾರಿಗಳು ದೂರವಾಣಿ ಮೂಲಕ ಸಂಪರ್ಕಿಸಿ ನಾಳೆ ಸಾಂಕೇತಿಕವಾಗಿ 5 ಜನ ಮಾತ್ರ ಪೂಜೆ ಸಲ್ಲಿಸಬೇಕು ಎಂದ ಹೇಳಿದ್ದರು, ಆದರೆ ಅದಕ್ಕೆ ನಾವು ಒಪ್ಪಿಲ್ಲ. ನಮ್ಮ ಪೂರ್ವ ನಿರ್ಧರಿತ ಪ್ರಕಾರವೇ ಎಲ್ಲವೂ ನಡೆಯುತ್ತದೆ ಎಂದು ಹೇಳಿದ್ದೇನೆ.