ಆಗ ಪಿಎಲ್ ಡಿಯಿಂದ ಆಗಿತ್ತು ಸಮ್ಮಿಶ್ರ ಸರ್ಕಾರ ಢಮಾರ್..ಈಗ ಕಾದು ನೋಡಬೇಕು…
ಕಾಂಗ್ರೆಸ್ ಭವನ ಹಿನ್ನೆಲೆ ವಿನಯ ನಾವಲಗಟ್ಟಿಗೆ ಕೇಳಿ ಅಂದಿದ್ಯಾಕೆ ರಮೇಶ್ ಜಾರಕಿಹೊಳಿ?
ಅಂತಹುದ್ದೇನು ಗುಟ್ಟು ಬಿಟ್ಟಿದ್ದ ವಿನಯ ನಾವಲಗಟ್ಟಿ?
ಬೆಳಗಾವಿ: ಗಡಿನಾಡ ಬೆಳಗಾವಿಯಲ್ಲಿ ಜಿಲ್ಲಾ ಕಾಂಗ್ರೆಸ್ ಭವನ ನಿಮರ್ಾಣ ಈಗ ಇಬ್ಬರು ಪ್ರಭಾವಿ ಸಚಿವರ ನಡುವೆ ರಾಜಕೀಯ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದೆ. ಕಳೆದ ದಿನ ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಈ ಭವನ ನಿರ್ಮಾಣದಲ್ಲಿ ಸಚಿವೆ ಹೆಬ್ಬಾಳಕರ ಪಾತ್ರವಿದೆ ಎಂದು ಹೇಳಿದ್ದು ಇದಕ್ಕೆಲ್ಲ ಕಾರಣ. ಇಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಈ ಭವನ ನಿರ್ಮಾಣಕ್ಕೆ ಯಾರು ಯಾರು ಕಾರಣ ಎನ್ನುವುದರ ಜೊತೆಗೆ ಡಿ.ಕೆ. ಶಿವಕುಮಾರ ಹಸ್ತಕ್ಷೇಪದ ಬಗ್ಗೆ ಖಾರವಾಗಿ ಆಕ್ಷೇಪಿಸಿದ್ದರು, ಅಷ್ಟೇ ಅಲ್ಲ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಸತೀಶ ಜಾರಕಿಹೊಳಿ ಈ ಹಿಂದೆ ನಡೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಪ್ರಯತ್ನ ಮಾಡಿದ್ದರು, ಆದರೂ ನಾನು ಹೆಚ್ಚಿನ ಮತಗಳ ಅಂತರದಿಂದ ಗೆದ್ದೆ ಎಂದು ಸಚಿವೆ ಹೆಬ್ಬಾಳಕರ ಆಡಿದ ಮಾತು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ ಎನ್ನಲಾಗುತ್ತಿದೆ. ಮತ್ತೊಂದು ಕಡೆಗೆ ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಕೂಡ ನೇರಾನೇರ ಡಿಸಿಎಂ ಡಿ.ಕೆ. ಶಿವಕುಮಾರ ವಿರುದ್ಧ ಗುಡುಗಿದ್ದಾರೆ. ಹೀಗಾಗಿ ಈ ವಿವಾದ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಹೋಗಿ ನಿಲ್ಲಬಹುದು ಎನ್ನುವುದನ್ನು ಊಹಿಸಲಾಗದು. ಹಾಗೆ ನೋಡಿದರೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಅನೇಕರ ಕೊಡುಗೆ ಇದೆ. ಈ ಕಚೇರಿಗೆ ಜಾಗ ಕೊಡಿಸಿದ್ದು ರಮೇಶ್ ಜಾರಕಿಹೊಳಿ,!
ಆಗ 5 ಕೋಟಿ ಮೌಲ್ಯದ ಜಾಗವನ್ನು ಕೇವಲ 15 ಲಕ್ಷ ರೂಪಾಯಿಗೆ ಕೊಡಿಸಿದ್ದರಂತೆ, ಕಟ್ಟಡ ನಿರ್ಮಾಣಕ್ಕೆ ವೈಯಕ್ತಿಕವಾಗಿ ಸಹ ಅವರು ರಮೇಶ ಸೇರಿದಂತೆ ಎಲ್ಲರೂ ಕೈಜೋಡಿಸಿದ್ದಾರೆ. ಸತೀಶ ಜಾರಕಿಹೊಳಿ ಕೋಟಿ ಕೋಟಿ ಹಣ ನೀಡಿದ್ದಾರೆ. ಆದರೆ ಎಲ್ಲಿಯೂ ನಾನು ಇಷ್ಟು ಹಣ ನೀಡಿದ್ದೇನೆ ಎಂದು ಹೇಳಿಕೊಂಡಿಲ್ಲ. ಆದರೆ ಇಲ್ಲಿ ಡಿ.ಕೆ. ಶಿವಕುಮಾರ ಅವರು ಕೇವಲ ಲಕ್ಷ್ಮೀ ಹೆಬ್ಬಾಳಕರ ಹೆಸರು ಮಾತ್ರ ಹೇಳಿದ್ದು ಈಗ ಚಚರ್ೆಗೆ ಗ್ರಾಸವಾಗಿದೆ, ಅಧಿಕಾರಿಗಳ ಮೇಲೆ ಹಿಡಿತ?
ಇದೆಲ್ಲಕ್ಕಿಂತ ಮುಖ್ಯವಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳಕರ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮೂಲಕ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಲು ಹೊರಟಿರುವುದು ಮತ್ತೊಂದು ಅಸಮಾಧಾನಕ್ಕೆ ಕಾರಣ ಎನ್ನುವ ಮಾತಿದೆ,
ಈ ಹಿಂದೆ ಕೂಡ ಬೆಳಗಾವಿ ತಾಲೂಕು ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ವರ್ಸಿಸ್ ಹೆಬ್ಬಾಳಕರ ಸಮರ ಜೋರಾಗಿತ್ತು, ಅದಕ್ಕೆ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದ ರಮೇಶ ಜಾರಕಿಹೊಳಿ ಸೇರ್ಪಡೆಗೊಂಡರು, ಕೊನೆಗೆ ಅದು ಆಗಿನ ಸರ್ಕಾರದ ಪತನದವರೆಗೂ ಹೋಯಿತು ಎನ್ನುವುದು ಈಗ ಇತಿಹಾಸ, ಈಗ ಮತ್ತೇ ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಡಿಕೆ ಮೂಗು ತೂರಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ರಮೇಶ ಸಿಡಿಮಿಡಿ:
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣ ಆಗುವಾಗ ಲಕ್ಷ್ಮೀ ಹೆಬ್ಬಾಳಕರ್ ಅಧ್ಯಕ್ಷರಿದ್ದರು. ಆ ವೇಳೆ ಲೆಕ್ಕ ಪತ್ರ ಏನು ಮಾಡಿದ್ದಾರೆ ದೇವರಿಗೆ ಗೊತ್ತು. ಈಗಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಅವರೇ ಈ ಗೋಲ್ಮಾಲ್ ಯಾರು ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಕಾಂಗ್ರೆಸ್ ಭವನದ ಆ ಹಣದಲ್ಲಿ ಯಾರು ಕಾರು ಖರೀದಿಸಿದ್ದಾರೆೆ ಎನ್ನುವುದನ್ನು ವಿನಯ್ನನ್ನು ಕೇಳಿ ಎಂದು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದು ಈಗ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಆದರೆ ಈ ಆರೋಪಕ್ಕೆ ಸಚಿವೆ ಹೆಬ್ಬಾಳ್ಕರ ಉತ್ತರಿಸಬೇಕಿದೆ.