Headlines

ಹಣ ವಾಪಸ್ ಕೊಟ್ರು.. ಮುಂದಿನ ಕ್ರಮ ಏನು?

ಇ ಬೆಳಗಾವಿ ವರದಿ ಫಲಶೃತಿ.
`ಲಂಚದ ಹಣ ವಾಪಸ್ ಕೊಡಿಸಿದ ಆಯುಕ್ತೆ..!’ ಹಣ ಕೊಡಿಸಿದ್ದಾಯ್ತು..ಮುಂದಿನ ಕ್ರಮ ಏನು?

ಲೋಕಾಯುಕ್ತರು ಮಧ್ಯಸ್ಥಿಕೆ ವಹಿಸ್ತಾರಾ? ಇದು ಒಂದೇ ಕೇಸಲ್ಲ.ಬಹುತೇಕ ಪ್ರಕರಣದಲ್ಲೂ ಇದೇ ಹಣೆಬರಹ.

ಈ ಶಾಖೆಯದ್ದೆ ಸಮಗ್ರ ತನಿಖೆ ನಡೆದರೆ ಕರ್ಮಕಾಂಡ ಬಯಲು

ಆ 138 ಪಿಕೆಗಳ ನೇಮಕಾತಿ ವಿಚಾರಣೆ ಏಕಿಲ್ಲ. ಸರ್ಕಾರಿ ಆದೇಶ ಎಲ್ಲಿದೆ?

ಅಸಲಿಗೆ ಕೆಲಸ ಮಾಡುವ ಪಿಕೆಗಳೆಷ್ಟು? ದಾಖಲೆಯಲ್ಲಿರುವ ಪಿಕೆಗಳೆಷ್ಟು?

Ebelagavi ಬಳಿ ಇದೆ ಸಮಗ್ರ ಮಾಹಿತಿ

ಬೆಳಗಾವಿ.

ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸಂಪೂರ್ಣ ಶುದ್ಧೀಕರಣ ಮಾಡಬೇಕು ಅಂದ್ರೆ ಮೇಲೆ ಉಲ್ಲೇಖಿಸಿದ ವಿಷಯಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು.

ಸಧ್ಯ ಪಾಲಿಕೆ ಆಯುಕ್ತೆ ಶುಭ ಅವರು ಲಂಚ ಪಡೆದು‌ಕೆಲಸ ಮಾಡೊರಿಗೆ ಬುದ್ದಿ ಕಲಿಸಿದ್ದಾರೆ. ಅಂದರೆ ಲಂಚದ ಹಣವನ್ಬು ವಾಪಸ್ಸು ಕೊಡಿಸುವ ಕೆಲಸ ಮಾಡಿದ್ದಾರೆ. ಅವರ ಈ ಕ್ರಮ ಮೆಚ್ಚಲೇಬೇಕು.

ಆದರೆ ಅದು ಇಷ್ಟಕ್ಕೆ ನಿಲ್ಲಲ್ಲ. ಹಾಗಿದ್ದರೆ ಲಂಚದ ಹಣ ಪಡೆದವರ ಮೇಲೆ ಕಾನೂನು ಕ್ರಮ ಏನು ಎನ್ನುವುದು ಬೆಳಗಾವಿಗರ ಪ್ರಶ್ನೆ

ಯಾವುದೊ ಒಬ್ಬ ಬಡಪಾಯಿ ಸಿಬ್ಬಂದಿ ಸಷ್ಣಪುಟ್ಟ ನೂರಿನ್ನೂರು ರೂ.ತೆಗೆದುಕೊಳ್ಳುವಾಗ ಸಿಕ್ಕಿಬಿದ್ದು ನೌಕರಿ ಕಳೆದುಕೊಂಡಿದ್ದನ್ನು ಕೇಳಿದ್ದೇವೆ.

ಆದರೆ ದೊಡ್ಡವರು ಸಾವಿರ ಅಲ್ಲ. 50 ಸಾವಿರ ರೂವರೆಗೆ ಹಣ ಪಡೆದಿದ್ದು ಸಾಬೀತಾದರೂ ಕ್ರಮ ಅನ್ನೋದು ಆಗೋದೇ ಇಲ್ಲ. ಅಂದರೆ ದೊಡ್ಡವರು ದೊಡ್ಡ ಮೊತ್ತವನ್ನು ಪಡೆದುಕೊಂಡರೆ ಬಾರಾಖೂನ್ ಮಾಫ್ ಎನ್ನುವಂತಾಗಿದೆ.

ಆದರೆ ಈಗ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಹಣ ಪಡೆದುಕೊಂಡು ವಾಪಸ್ ಕೊಟ್ಟವರ ಮೇಲೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಖಬೇಕಾದ ದಿಟ್ಟತನ ಪ್ರದರ್ಶನ ಮಾಡಬೇಕಿದೆ.

20700 ರೂಗೆ 50 ಸಾವಿರ ಲಂಚ..!

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಲಂಚಕ್ಕೆ ಮಿತಿನೇ ಇಲ್ಲ. ಪಾಲಿಕೆಗೆ ದುಡ್ಡು ತುಂಬುತ್ತೇವೆಎಙದು ಬಂದವರನ್ನು ಕಂದಾಯ ಶಾಖೆಯವರು ತಮ್ಮ ತೆರಿಗೆ ವಸೂಲಿ ಮಾಡದೇ ಬಿಡುತ್ತಿಲ್ಲ ಎಂದರೆ ಅಲ್ಲಿನ ಪರಿಸ್ಥಿತಿ ನೀವೇ ಊಹಿಸಿ.

ಇನ್ನೂ ಆಘಾತಕಾರಿ ಸಂಗತಿ ಎಂದರೆ, ಜಿಲ್ಲಾಧಿಕಾರಿ, ಆಯುಕ್ತರೂ ಹೇಳಿದ ಮೇಲೂ ಕಂದಾಯ ಶಾಖೆಯವರು 20700 ಚಲನ್ ನೀಡಲು 50 ಸಾವಿರ ತಗೆದುಕೊಳ್ಳುತ್ತಾರೆಂದರೆ ಉಳಿದ ವಿಷಯಗಳಲ್ಲಿ ಅವರ ವಸೂಲಿ ಪ್ರಮಾಣ ಯಾವ ಮಟ್ಟದಲ್ಲಿ ಇರಬಹುದು ಎನ್ನುವುದನ್ನು ಊಹಿಸಿ.

ಇನ್ನು ಜನ ನೇರವಾಗಿ ಕೆಲಸ ಮಾಡಿಸಿಕೊಳ್ಳಲು ಹೋದರೆ ಅವರನ್ನು ಯಾವ ರೀತಿ ಕಾಡಿಸಿ, ಪೀಡಿಸಿ ಸುಲಿಗೆ ಮಾಡಬಹುದು ಎನ್ನುವುದು ತಮಗೆ ಬಿಟ್ಟ ವಿಷಯ.!

ಸಿಂಪಲ್ ಉದಾಹರಣೆ…
ಬೆಳಗಾವಿ ಮಹಾನಗರ ಪಾಲಿಕೆ ಕೂಗಳತೆಯಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯವರು ತೆರಿಗೆ ಹಣ ತುಂಬಲು ಚಲನ್ ನೀಡಬೇಕೆಂದು ಕಳೆದ ನಾಲ್ಕು ವರ್ಷದಿಂದ ಅಧೀಕೃತವಾಗಿ ಪತ್ರ ಬರೆಯುತ್ತಲೇ ಇದ್ದರು. ಆದರೆ ಅದಕ್ಕೆ ಕನಿಷ್ಟ ಸೌಜನ್ಕಕ್ಕೂ ಉತ್ತರ ಕೊಡುವ ಕೆಲಸವನ್ನು ಪಾಲಿಕೆ ಮಾಡಲಿಲ್ಲ. ಕೊನೆಗೆ ಜಿಲ್ಲಾಧಿಕಾರಿಗಳ ಮೂಲಕ ಇದೇ ವಿಷಯ ಬಂದ ಮೇಲೂ 20700 ಚಲನ್ ರೆಡಿ ಮಾಡಿ 50 ಸಾವಿರ ರೂ ಕೇಳಿ ಪಡೆದುಕೊಂಡರು.

ಈ ಸಂಗತಿ ebelagaviಯಲ್ಲಿ ಪ್ರಕಟವಾಯಿತು‌ ಅದನ್ನು ಆಯುಕ್ತರು ಗಂಭೀರವಾಗಿ ಪರಿಗಣಿಸಿದರು ನಾಲ್ವರಿಗೆ ನೋಟೀಸ್ ಕೂಡ ಜಾರಿಯಾಯಿತು.

ನಡೆಯದ ಸಾಮಾನ್ಯ ಸಭೆ..!
ಮಹಾನಗರ ಪಾಲಿಕೆಯ ಬಿಜೆಪಿ ಎರಡನೆ ಮೇಯರ ಅವಧಿಯ ಕೊನೆಯ ಸಾಮಾನ್ಯ ಸಭೆ ನಡೆಯುವುದು ಬಹುತೇಕ ಅನುಮಾನ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಫೆ 15 ರೊಳಗೆ ಮೇಯರ್ ಚುನಾವಣೆ ನಡೆಯಬೇಕು. ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ಪಾಲಿಕೆಯಿಂದ ಪ್ರಾದೇಶಿಕ ಆಯುಕ್ತರಿಗೆ ಪತ್ರ ಹೋಗಿದೆ.. ಅವರು ಅದಕ್ಕೆ ಮುಹೂರ್ತ ನಿಗದಿ ಮಾಡಬೇಕು,
ಆದರೆ ಈಗಿನ ಮೇಯರ್ ಅವರು ಪ್ರಸಕ್ತ ತಿಂಗಳ ಕೊನೆಯ ಸಾಮಾನ್ಯ ಸಭೆ ಕರೆಯಬೇಕಿತ್ತು.
ಆದರೆ ಇದುವರೆಗೂ ಸಾಮಾನ್ಯ ಸಭೆ ನಡೆಸುವ ಲಕ್ಷಣಗಳು ಕಾಣಸಿಗುತ್ತಿಲ್ಲ. ಕಾರಣ ಕೆದಕುತ್ತ ಹೋದರೆ ನಗರಸೇವಕರಲ್ಲಿನ ಅಂತರಿಕ ಕಚ್ಚಾಟ ಬೆಳಕಿಗೆ ಬರತೊಡಗಿದೆ.

ಇಲ್ಲಿ ಶಾಸಕರು ನೇಮಿಸಿದ 6 ಜನರ ಕಮಿಟಿ ಬಗ್ಗೆನೇ ಅಪಸ್ವರದ ಮಾತುಗಳು ಕೇಳಿ ಬರುತ್ತಿವೆ ಮೇಯರ್ ಸಹಿತ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ ಎನ್ನುವ ಮಾತುಗಳಿವೆ.

.

Leave a Reply

Your email address will not be published. Required fields are marked *

error: Content is protected !!