ದುರ್ಘಟನೆಗೆ ಕಾರಣ ಏನು ಗೊತ್ತಾ?
ಬೆಳಗಾವಿಯಿಂದ ಹೋದವರು ಮೂರುನೂರಕ್ಕೂ ಹೆಚ್ಚು ಜನ. ಸತ್ತವರು ನಾಲ್ಕು ಜನ
ಸಾಯಿರಥದಿಂದ ಹೋದವರು 13 ಜನ. ಎರಡು ಬಸ್ ಮೂಲಕ ಹೋದವರು 60 ಜನ.
ಹಲವರು ನಾಪತ್ತೆ. ಮೃತರನ್ನು ಕರೆತರಲು ಜಿಲ್ಲಾಡಳಿತ ವ್ಯವಸ್ಥೆ. ಗಾಯಾಳುಗಳ ಜೊತೆಗೆ ಸತತ ನಿಗಾ.
ಉತ್ತರಪ್ರದೇಶ.
144 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ ಈಗ ನಾಲ್ಕಕ್ಕೇರಿದೆ.
ವಡಗಾವಿಯ ಜ್ಯೋತಿ ಹತ್ತರವಾಟ, ಮೇಘಾ ಹತ್ತರವಾಟ, ಶೆಟ್ಡಿಗಲ್ಲಿಯ ಅರುಣ ಕೋಪರ್ಡೆ ಮತ್ತು ಮಹಾದೇವಿ ಬಾವನೂರ ಮೃತಪಟ್ಟ ದುರ್ದೈವಿಗಳು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸಂಸದ ಜಗದೀಶ್ ಶೆಟ್ಟರ್, ಶಾಸಕ ಅಭಯ ಪಾಟೀಲ ಮತ್ತು ಶಾಸಕ ಆಸೀಫ್ ಶೇಟ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲಅಲ್ಲಿ ಗಾಯಾಳುಗಳ ಚಿಕಿತ್ಸೆ ಬಗ್ಗೆ ನಿಗಾ ಇಟ್ಟಿದ್ದಾರೆ. ಈ ನಿಟ್ಡಿನಲ್ಲಿ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಮೃತರ ಪಾರ್ಥೀವ ಶರೀರವನ್ಬು ತರುವ ನಿಟ್ಟಿನಲ್ಲಿ ಅಗತ್ಯ ಸಲಹೆ ಸೂಚನೆ ಕೂಡ ನೀಡಿದ್ದಾರೆ.
ಘಟನೆಗೆ 5 ಪ್ರಮುಖ ಕಾರಣಗಳು

ಅಮೃತ ಸ್ನಾನದ ಕಾರಣ ಮೇಳ ವಿಕಾಸ ಪ್ರಾಧಿಕಾರವು ಮೂರು ದಿನಗಳ ಕಾಲ ಹೆಚ್ಚಿನ ಪಾಂಟೂನ್ ಸೇತುವೆಗಳನ್ನು ಮುಚ್ಚಿತ್ತು. ಇದರಿಂದಾಗಿ, ಝಾನ್ಸಿ ಮತ್ತು ನೈನಿ ಪ್ರದೇಶದ ಕಡೆಗೆ ಸ್ನಾನದ ಬಳಿಕ ಹೊರಗೆ ಹೋಗಲು ಅವಕಾಶವಿರಲಿಲ್ಲ. ಇದರಿಂದಾಗಿ, ಈ ಪ್ರದೇಶದಲ್ಲೇ ಜನಸಮೂಹ ಜಮಾಯಿಸಿತ್ತು.
ಭಕ್ತರ ಸಂಖ್ಯೆ ಹೆಚ್ಚುತ್ತಿದ್ದರೂ, ಎಐ ನಿಗಾ ತಂಡಗಳು ಕಾಲ್ತುಳಿತದ ಜಾಗ್ರತೆ ವಹಿಸಲಿಲ್ಲ.
ತ್ರಿವೇಣಿ ಸಂಗಮಕ್ಕೆ ಬರುವ ಮತ್ತು ಹೋಗುವ ದಾರಿ ಒಂದೇ ಆಗಿದ್ದರಿಂದ ಜನರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜನಸಂದಣಿ ಮಧ್ಯೆ ಸಿಲುಕಿದ್ದವರು ಅಲ್ಲಿಯೇ ಉಳಿಯುವಂತಾಯಿತು.
ವಿಐಪಿಗಳ ನಿರಂತರ ಆಗಮನದಿಂದ ಅಧಿಕಾರಿಗಳು ಮತ್ತು ಪೊಲೀಸರು ಬಸವಳಿದಿದ್ದರು. ವಿಶ್ರಾಂತಿ ಸಿಗದೇ ನಿಗಾ ವಹಿಸಲು ಸಾಧ್ಯವಾಗಿಲ್ಲ.
ಸಂಗಮ್ ಘಾಟ್ನಲ್ಲಿ ಯಾವುದೇ ಅಂಗಡಿಗಳು ಮತ್ತು ಸ್ಟಾಲ್ಗಳನ್ನು ಹಾಕುವುದನ್ನು ನಿರ್ಬಂಧಿಸಲಾಗಿದೆ. ಆದಾಗ್ಯೂ ನೂರಾರು ಅಂಗಡಿಗಳು ಹಾಕಲಾಗಿದೆ. ಭಿಕ್ಷುಕರು ರಸ್ತೆಬದಿಯಲ್ಲಿ ಬೀಡು ಬಿಟ್ಟಿದ್ದಾರೆ.
ಮಹಾಕುಂಭಮೇಳದಲ್ಲಿ ಬೆಳಗಾವಿಯ ನಾಲ್ವರ ದುರ್ಮರಣ: ಸಚಿವ ಸತೀಶ್ ಜಾರಕಿಹೊಳಿ ಸಂತಾಪ
ಬೆಳಗಾವಿ: ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ವಡಗಾವಿ ನಿವಾಸಿಗಳಾದ ಜ್ಯೋತಿ ಹತ್ತರವಾಠ್ (50) ಮೇಘಾ ಹತ್ತರವಾಠ್, ಶೆಟ್ಟಿಗಲ್ಲಿ ನಿವಾಸಿ ಅರುಣ್ ಕೋಪರ್ಡೆ ಹಾಗೂ ಶಿವಾಜಿ ನಗರದ ಮಾಹಾದೇವಿ ಭವನೂರ ಅವರು ಮೃತಪಟ್ಟಿರುವುದು ತಿಳಿದು ದುಃಖಿತನಾಗಿದ್ದೇನೆ. ಆ ದೇವರು ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ಹಾಗೆ ಮೃತರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ವಿಷಯ ತಿಳಿಸಿದ ಅವರು, ಪ್ರಯಾಗ್‌ರಾಜ್ ಮಹಾಕುಂಭದಲ್ಲಿ ಏಕಾಏಕಿ ಜನಸಂದಣಿ ಹೆಚ್ಚಾದ ಕಾರಣ ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ ಕಾಲ್ತುಳಿತದಿಂದ ಬೆಳಗಾವಿ ಮೂಲದ ನಾಲ್ವರು ಸಾವಣ್ಣಪ್ಪಿದ್ದಾರೆ. ಅಲ್ಲದೇ ಈ ಮಹಾಕುಂಭಮೇಳದಲ್ಲಿ ಬೆಳಗಾವಿ ಮೂಲದ 30 ಜನರು ಭಾಗವಹಿಸಿದ್ದು, ಕೆಲವರು ಗಾಯಗೊಂಡಿರುವ ಮಾಹಿತಿಯಿದೆ. ಅವರೆಲ್ಲರು ಸುರಕ್ಷಿತವಾಗಿ ಮರಳಲಿ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.