
ಆರ್ಸಿ ವಿರುದ್ಧ ದೂರು- ರಾಜ್ಯಪಾಲರ ಭೆಟ್ಟಿಗೆ ಅಭಯ
ಬೆಳಗಾವಿಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಧ್ಯ ನಡೆಯುತ್ತಿರುವ ಸಮಗ್ರ ಬೆಳವಣಿಗೆಗಳ ಬಗ್ಗೆ ರಾಜ್ಯಪಾಲರ ಭೆಟ್ಟಿಗೆ ಶಾಸಕ ಅಭಯ ಪಾಟೀಲರು ಬೆಂಗಳೂರಿಗೆ ದೌಡಾಯಿಸಿದ್ದಾರೆ.ಕಳೆದ ಕೆಲ ದಿನಗಳ ಹಿಂದೆಯಷ್ಟೇ ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿ ಇಬ್ಬರು ನಗರಸೇವಕರ ಸದಸ್ಯತ್ವ ರದ್ದು ಮಾಡಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದರು, ಇದರಿಂದ ಕೆರಳಿದ ಶಾಸಕ ಅಭಯ ಪಾಟೀಲರು ಪ್ರಾದೇಶಿಕ ಆಯುಕ್ತರ ವಿರುದ್ಧ ಕಿಡಿಕಾರಿದ್ದರು. ಅಷ್ಟೇ ಅಲ್ಲ ಅವರ ಕಾರ್ಯವೈಖರಿ ವಿರುದ್ಧ ಕೇಂದ್ರಕ್ಕೆ ಅಷ್ಟೇ ಅಲ್ಲ ರಾಜ್ಯಪಾಲರಿಗೂ ದೂರು ನೀಡುವುದಾಗಿ ಹೇಳಿದ್ದರು, ಹೀಗಾಗಿ ನಾಳೆ…